ಬೆಂಗಳೂರಿನಲ್ಲಿ ತಲೈವಾ, ತಾನು ಕಂಡಕ್ಟರ್ ಆಗಿ ಕೆಲಸ ಮಾಡಿದ ಡಿಪೋಗೆ ಭೇಟಿ ನೀಡಿದ ಸೂಪರ್ ಸ್ಟಾರ್ ರಜನಿಕಾಂತ್, ವೈರಲ್ ಆದ ಪೊಟೋಸ್…….!

Follow Us :

ಸೌತ್ ಸಿನಿರಂಗದಲ್ಲಿ ಸೂಪರ್‍ ಸ್ಟಾರ್‍ ಆಗಿ ಸಾಗುತ್ತಿರುವ ನಟ ರಜನಿಕಾಂತ್ ಬಸ್ ಕಂಡಕ್ಟರ್‍ ಆಗಿದ್ದು ಹಂತ ಹಂತವಾಗಿ ಕಠಿಣ ಪರಿಶ್ರಮದಿಂದ ಇದೀಗ ಸ್ಟಾರ್‍ ನಟರಾಗಿದ್ದಾರೆ. ಮರಾಠಿ ಕುಟುಂಬದಲ್ಲಿ ಜನಿಸಿದ ಈತ ಬೆಂಗಳೂರಿನ ಬಿಟಿಎಸ್ ಬಸ್ ಕಂಡಕ್ಟರ್‍ ಆಗಿ ಕೆಲಸ ಪ್ರಾರಂಭಿಸಿ ಇದೀಗ ಸಿನಿರಂಗದಲ್ಲಿ ಮೇರು ನಟನಾಗಿ ಅಪಾರ ಸಂಖ್ಯೆಯ ಅಭಿಮಾನಿ ಬಳಗವನ್ನು ಪಡೆದುಕೊಂಡು ವಯಸ್ಸಾದರೂ ಸಹ ಅನೇಕ ಸಿನೆಮಾಗಳ ಮೂಲಕ ರಂಜಿಸುತ್ತಿದ್ದಾರೆ. ಇದೀಗ ಬೆಂಗಳೂರಿನನಲ್ಲಿ ಆತ ಕೆಲಸ ಮಾಡಿದ ಬಿಎಂಟಿಸಿ ಡಿಪೋಗೆ ಭೇಟಿ ನೀಡಿದ್ದು, ಆ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ.

ರಜನಿಕಾಂತ್ ಸೂಪರ್‍ ಸ್ಟಾರ್‍ ಆದರೂ ಸಹ ತುಂಬಾ ಸರಳವಾಗಿ ಜೀವನ ಸಾಗಿಸುತ್ತಿದ್ದಾರೆ. ತಾನು ನಡೆದು ಬಂದ ಹಾದಿಯನ್ನು ಮರೆಯಲಾಗದೇ ತನ್ನ ಹಳೆಯ ಸ್ನೇಹಸಂಬಂಧಗಳನ್ನು ಸಹ ಮರೆಯದೆ ಎಲ್ಲರೊಂದಿಗೂ ಅನ್ಯೋನ್ಯತೆಯಿಂದ ಇರುತ್ತಾರೆ. ಸಿನೆಮಾಗಳಲ್ಲಿ ಎಂಟ್ರಿ ಕೊಡುವುದಕ್ಕೂ ಮುಂಚೆ ರಜನಿಕಾಂತ್ ರವರು ಬೆಂಗಳೂರಿನಲ್ಲಿ ಬಸ್ ಕಂಡಕ್ಟರ್‍ ಆಗಿ ಜೀವನ ನಡೆಸುತ್ತಿದ್ದರು. ಕರ್ನಾಟಕದ ಬೆಂಗಳೂರಿನ ಜಯನಗರದಲ್ಲಿರುವ ಬಿಎಂಟಿಸಿ ಬಸ್ ಡಿಪೋದಲ್ಲಿ ಕೆಲಸ ಮಾಡುತ್ತಿದ್ದರು. ಇಂದು ಬೆಳಿಗ್ಗೆ 11.30ಕ್ಕೆ ರಜನಿಕಾಂತ್ ರವರು ಇದೇ ಬಸ್ ಡಿಪೋಗೆ ಭೇಟಿ ನೀಡಿದ್ದಾರೆ. ಅಲ್ಲಿನ ಅನೇಕರು ರಜನಿಕಾಂತ್ ರವರನ್ನು ನೋಡಿ ಸರ್ಪ್ರೈಸ್ ಆಗಿದ್ದಾರೆ. ಸುಮಾರು ಸಮಯ ಅಲ್ಲಿಯೇ ಇದ್ದು ಅಲ್ಲಿನ ಸಿಬ್ಬಂದಿಯೊಂದಿಗೆ ಮಾತುಕತೆ ನಡೆಸಿ ಡಿಪೋ ಒಳಗೆ ಸುತ್ತಾಡಿದ್ದಾರೆ.

ಇನ್ನೂ ರಜನಿಕಾಂತ್ ರವರು ಆ.29 ರಂದು ಬೆಂಗಳೂರಿನಲ್ಲಿರುವ ಜಯನಗರ ಬಸ್ ಡಿಪೋಗೆ ಭೇಟಿ ನೀಡಿದ್ದಾರೆ. ರಜನಿಕಾಂತ್ ರವರು ತುಂಬಾ ಸರಳ ಸ್ವಭಾವದ ವ್ಯಕ್ತಿಯಾಗಿದ್ದಾರೆ. ಸಿನೆಮಾಗಳ ಮೂಲಕ ಸೂಪರ್‍ ಸ್ಟಾರ್‍ ಆಗುವುದಕ್ಕೂ ಮುಂಚೆ ರಜನಿಕಾಂತ್ ರವರು ತುಂಬಾನೆ ಕಷ್ಟಗಳನ್ನು ನೋಡಿದ್ದಾರೆ. ಆದರೆ ಇದೀಗ ಅವರು ಸೂಪರ್‍ ಸ್ಟಾರ್‍ ಆದರೂ ಸಹ ಕಿಂಚಿತ್ತು ಗರ್ವ ಅವರಲಿಲ್ಲ. ಅದರಂತೆ ಜಯನಗರದ ಡಿಪೋಗೆ ಭೇಟಿ ನೀಡಿ ಸರಳತೆ ಮೆರೆದಿದ್ದಾರೆ. ಕೆಲವೊಂದು ನಿಮಿಷಗಳ ಕಾಲ ಅಲ್ಲಿನ ಸಿಬ್ಬಂದಿಯೊಂದಿಗೆ ಮಾತು ಕತೆ ನಡೆಸಿದ್ದಾರೆ. ಜೊತೆಗೆ ಡಿಪೋದಲ್ಲೂ ಸಹ ಸುತ್ತಾಡುತ್ತಾ ಹಳೆಯ ನೆನಪುಗಳನ್ನು ಮೆಲಕು ಹಾಕಿಕೊಂಡಿದ್ದಾರೆ. ಈ ವೇಳೆ ರಜನಿಕಾಂತ್ ಜೊತೆಗೆ ಅವರ ಸ್ನೇಹಿತ ರಾಜ್ ಬಹದ್ದೂರ್‍ ಸಹ ಇದ್ದಾರೆ. ಇನ್ನೂ ಡಿಪೋದಲ್ಲಿನ ಸಿಬ್ಬಂದಿ ರಜನಿಕಾಂತ್ ರವರೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದರು. ಈ ಸಂಬಂಧ ಕೆಲವೊಂದು ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಇನ್ನೂ ಬಿಎಂಟಿಸಿ ಬಸ್ ಡಿಪೋ ಭೇಟಿ ಬಳಿಕ ರಜನಿಕಾಂತ್ ರವರು ಚಾಮರಾಜನಗರದ ಶ್ರೀ ರಾಘವೇಂದ್ರ ಸ್ವಾಮಿ ಮಠಕ್ಕೂ ಭೇಟಿ ನೀಡಿ ರಾಯರ ದರ್ಶನ ಪಡೆದುಕೊಂಡರು. ಇನ್ನೂ ಸೂಪರ್‍ ಸ್ಟಾರ್‍ ರಜನಿಕಾಂತ್ ರವರ ಅಭಿನಯದ ಜೈಲರ್‍ ಸಿನೆಮಾ ಒಳ್ಳೆಯ ಸಕ್ಸಸ್ ಕಂಡುಕೊಂಡಿದೆ. ಬರೊಬ್ಬರಿ 558 ಕೋಟಿ ಕಲೆಕ್ಷನ್ ಮಾಡಿದೆ.