Film News

ಮತ್ತೊಂದು ಭರ್ಜರಿ ಆಫರ್ ಗಿಟ್ಟಿಸಿಕೊಂಡ ರಶ್ಮಿಕಾ, ಶಾರುಖ್ ಖಾನ್ ಜೊತೆಗೆ ಬಣ್ಣ ಹಚ್ಚುವ ಅವಕಾಶ ಪಡೆದುಕೊಂಡ ರಶ್……!

ಮೊದಲನೇ ಸಿನೆಮಾದ ಮೂಲಕ ಸ್ಟಾರ್‍ ಆದ ನಟಿಯರ ಸಾಲಿಗೆ ನಟಿ ರಶ್ಮಿಕಾ ಮಂದಣ್ಣ ಸಹ ಸೇರುತ್ತಾರೆ. ಕನ್ನಡದ ಕಿರಿಕ್ ಪಾರ್ಟಿ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ರಶ್ಮಿಕಾ ಕಡಿಮೆ ಸಮಯದಲ್ಲೇ ತೆಲುಗು, ತಮಿಳು ಹಾಗೂ ಹಿಂದಿ ಭಾಷೆಯಲ್ಲಿ ಭಾರಿ ಬೇಡಿಕೆ ಪಡೆದುಕೊಂಡರು. ದೊಡ್ಡ ದೊಡ್ಡ ಸ್ಟಾರ್‍ ಗಳ ಜೊತೆಗೆ ತೆರೆ ಹಂಚಿಕೊಳ್ಳುವ ಅವಕಾಶಗಳನ್ನು ಸಹ ಪಡೆದುಕೊಂಡರು. ಇದೀಗ ಬಾಲಿವುಡ್ ಬಾದ್ ಷಾ ಶಾರುಖ್ ಖಾನ್ ಜೊತೆಗೆ ರಶ್ಮಿಕಾ ನಟಿಸುವ ಆಫರ್‍ ಪಡೆದುಕೊಂಡಿದ್ದಾರೆ.

ನಟಿ ರಶ್ಮಿಕಾ ಮಂದಣ್ಣ ಸದ್ಯ ಪ್ಯಾನ್ ಇಂಡಿಯಾ ಸ್ಟಾರ್‍ ಆಗಿದ್ದಾರೆ. ತೆಲುಗಿನ ಪುಷ್ಪಾ ಸಿನೆಮಾದ ಮೂಲಕ ಭಾರಿ ಕ್ರೇಜ್ ಪಡೆದುಕೊಂ ರಶ್ಮಿಕಾ ತೆಲುಗು, ಹಿಂದಿ, ತಮಿಳು ಸಿನೆಮಾಗಳ ಮೂಲಕ ಮತಷ್ಟು ಫೇಂ ಪಡೆದುಕೊಳ್ಳುತ್ತಿದ್ದಾರೆ. ಬ್ಯಾಕ್ ಟು ಬ್ಯಾಕ್ ಪ್ಯಾನ್ ಇಂಡಿಯಾ ಸಿನೆಮಾಗಳನ್ನು ಮಾಡುತ್ತಿದ್ದಾರೆ. ಇನ್ನೂ ಬಾಲಿವುಡ್ ನಲ್ಲೂ ಸಹ ಆಕೆ ಒಳ್ಳೆಯ ಆಫರ್‍ ಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಈಗಾಗಲೇ ಬಾಲಿವುಡ್ ಸ್ಟಾರ್‍ ನಟ ರಣಬೀರ್‍ ಕಪೂರ್‍ ಜೊತೆಗೆ ನಟಿಸಿದ್ದಾರೆ. ಇದೀಗ ಆಕೆಗೆ ಮತ್ತೊಂದು ಆಫರ್‍ ಗಿಟ್ಟಿಸಿಕೊಂಡಿದ್ದಾರೆ. ಬಾಲಿವುಡ್ ನ ಸ್ಟಾರ್‍ ನಟ ಶಾರುಖ್ ಖಾನ್ ರವರ ಜೊತೆಗೆ ನಟಿಸುತ್ತಿದ್ದಾರೆ. ಈಗಾಗಲೇ ಈ ಸಿನೆಮಾದ ಶೂಟಿಂಗ್ ಸಹ ಆರಂಭವಾಗಿದೆ ಎಂದು ಹೇಳಲಾಗುತ್ತಿದೆ.

ಆದರೆ ರಶ್ಮಿಕಾ ಶಾರುಖ್ ಜೊತೆಗೆ ಸಿನೆಮಾ ಮಾಡುತ್ತಿಲ್ಲ. ಬದಲಿಗೆ ಜಾಹಿರಾತೊಂದರ ಶೂಟಿಂಗ್ ನಲ್ಲಿ ಭಾಗಿಯಾಗಿದ್ದಾರೆ. ಯಷ್ ರಾಜ್ ಫಿಲಂ ಸ್ಟುಡಿಯೋದಲ್ಲಿ ಜಾಹಿರಾತೊಂದನ್ನು ಶೂಟ್ ಮಾಡಲಾಗಿದೆ. ಈ ಜಾಹಿರಾತಿನಲ್ಲಿ ರಶ್ಮಿಕಾ ಹಾಗೂ ಶಾರುಖ್ ನಟಿಸುತ್ತಿದ್ದಾರೆ. ಪ್ರಭೂಜಿ ಪ್ಯೂರ್‍ ಪುಡ್ ಎಂಬ ಬ್ರಾಂಡ್ ಗಾಗಿ ರಶ್ಮಿಕಾ ಹಾಗೂ ಶಾರುಖ್ ಜೊತೆಯಾಗಿದ್ದಾರೆ. ಈ ಸಂಬಂಧ ಪೊಟೋ ಒಂದು ಸೊಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಇನ್ನೂ ಈ ಪೊಟೋದಲ್ಲಿ ರಶ್ಮಿಕಾ ನ್ಯೂ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಪೊಟೋದಲ್ಲಿ ಆಕೆ ಸಹಜವಾದ ಲುಕ್ಸ್ ಕಳೆದುಕೊಂಡಿದ್ದಾರೆ ಎಂಬ ಭಾವನೆ ಮೂಡುವಂತೆ ಮಾಡಿದ್ದಾರೆ. ಇನ್ನೂ ಶೀಘ್ರದಲ್ಲೇ ರಶ್ಮಿಕಾ ಶಾರುಖ್ ಜೊತೆಗೆ ಸಿನೆಮಾ ಮಾಡಬೇಕೆಂದು ರಶ್ಮಿಕಾ ಹಾಗೂ ಶಾರುಖ್ ಕೆಲ ಅಭಿಮಾನಿಗಳು ಕೋರುತ್ತಿದ್ದಾರೆ.

ಇನ್ನೂ ರಶ್ಮಿಕಾ ಸದ್ಯ ಪುಷ್ಪಾ-2 ಸಿನೆಮಾದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಇದರ ಜೊತೆಗೆ ಬಾಲಿವುಡ್ ನಲ್ಲಿ ಯಾನಿಮಲ್ ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಬಟರ್‍ ಫ್ಲೈ ಎಂಬ ಲೇಡಿ ಓರಿಯೆಂಟೆಡ್ ಸಿನೆಮಾದಲ್ಲಿ ಹಾಗೂ ಇತ್ತೀಚಿಗಷ್ಟೆ ಧನುಷ್ ಜೊತೆಗೆ ಸಹ ಸಿನೆಮಾ ಒಂದರಲ್ಲಿ ನಟಿಸಲಿದ್ದಾರೆ. ಹೀಗೆ ಬ್ಯಾಕ್ ಟು ಬ್ಯಾಕ್ ಸಿನೆಮಾಗಳ ಮೂಲಕ ರಶ್ಮಿಕಾ ಪುಲ್ ಬ್ಯುಸಿಯಾಗಿದ್ದಾರೆ.

Most Popular

To Top