ಏರ್ ಪೋರ್ಟ್‌ನಲ್ಲಿ ಸಿಂಪಲ್ ಆಗಿ ಕಾಣಿಸಿಕೊಂಡ ಸೂಪರ್ ಸ್ಟಾರ್ ರಜನಿಕಾಂತ್, ವೈರಲ್ ಆದ ಪೊಟೋಸ್…..!

ಭಾರತದ ಸಿನಿರಂಗದ ಸ್ಟಾರ್‍ ನಟರಲ್ಲಿ ಸೂಪರ್‍ ಸ್ಟಾರ್‍ ರಜನಿಕಾಂತ್ ರವರು ದೊಡ್ಡ ಮಟ್ಟದಲ್ಲೇ ಫ್ಯಾನ್ ಫಾಲೋಯಿಂಗ್ ಪಡೆದುಕೊಂಡಿದ್ದಾರೆ. ವಯಸ್ಸಾದರೂ ಸಹ ಬ್ಯಾಕ್ ಟು ಬ್ಯಾಕ್ ಸಿನೆಮಾಗಳನ್ನು ಮಾಡುತ್ತಾ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ಕೊನೆಯದಾಗಿ ರಜನಿಕಾಂತ್ ರವರು ಜೈಲರ್‍ ಸಿನೆಮಾದಲ್ಲಿ ನಟಿಸಿದ್ದರು. ಜೈಲರ್‍ ಸಿನೆಮಾದ ಮೂಲಕ ಭಾರಿ ಹಿಟ್ ಪಡೆದುಕೊಂಡರು. ಬರೊಬ್ಬರಿ 600 ಕೋಟಿ ಕಲೆಕ್ಷನ್ ಸಹ ಮಾಡಿದೆ. ಇದೀಗ ತಲೈವರ್‍170 ಸಿನೆಮಾದಲ್ಲಿ ರಜನಿಕಾಂತ್ ಬ್ಯುಸಿಯಾಗಿದ್ದಾರೆ. ಈ ಸಿನೆಮಾದಲ್ಲಿ ದೊಡ್ಡ ತಾರಾಬಳಗವೇ ಇದೆ ಎಂದು ಹೇಳಲಾಗುತ್ತಿದೆ.

ತಲೈವರ್‍ 170 ಸಿನೆಮಾದಲ್ಲಿ ರಜನಿಕಾಂತ್ ರವರ ಜೊತೆಗೆ ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಸೇರಿದಂತೆ ಅನೇಕ ಸ್ಟಾರ್‍ ನಟರು ಬಣ್ಣ ಹಚ್ಚಿದ್ದಾರೆ. ಈ ಸಿನೆಮಾದ ಶೂಟಿಂಗ್ ಸಹ ಭರದಿಂದ ಸಾಗುತ್ತಿದೆ. ಮುಂಬೈನಲ್ಲಿ ಸಿನೆಮಾದ ಶೂಟಿಂಗ್ ಸಹ ನಡೆಯುತ್ತಿದೆ. ನಿನ್ನೆಯಷ್ಟೆ (ಅ.29) ರಂದು ರಜನಿಕಾಂತ್ ರವರು ವಿಮಾನನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರೆ. ಈ ವೇಳೆ ಅವರು ತುಂಬಾನೆ ಸಿಂಪಲ್ ಆಗಿ ಕಾಣಿಸಿಕೊಂಡಿದ್ದಾರೆ. ಕಪ್ಪು ಬಣ್ಣದ ಟಿ ಶರ್ಟ್, ಪ್ಯಾಂಟ್ ಹಾಕಿಕೊಂಡು, ಕನ್ನಡಕ ಹಾಕಿಕೊಂಡು, ಹೆಗಲಿಗೊಂದು ಚೀಲ ಹಾಕಿಕೊಂಡು ತುಂಬಾ ಸಿಂಪಲ್ ಆಗಿ ಸಾಮಾನ್ಯರಂತೆ ನಡೆದುಕೊಂಡು ಹೋಗುತ್ತಿದ್ದರು. ಈ ಪೊಟೋಗಳು ಇದೀಗ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ಇನ್ನೂ ರಜನಿಕಾಂತ್ ರವರನ್ನು ಏರ್‍ ಪೋರ್ಟ್‌ನಲ್ಲಿ ನೋಡಿದ ಅನೇಕರು ಅವರೊಂದಿಗೆ ಪೊಟೋ ತೆಗೆಸಿಕೊಳ್ಳಲು ಮುಗಿಬಿದಿದ್ದಾರೆ. ನೆಚ್ಚಿನ ನಟನೊಂದಿಗೆ ಸೆಲ್ಫಿ ತೆಗೆದುಕೊಂಡು ಖುಷಿಪಟ್ಟಿದ್ದಾರೆ. ಜೊತೆಗೆ ಮೀಡಿಯಾದವರ ಕಣ್ಣಿಗೂ ಸಹ ರಜನಿಕಾಂತ್ ಕಾಣಿಸಿಕೊಂಡಿದ್ದಾರೆ. ಮೀಡಿಯಾದವರಿಗೆ ಮುಗುಳ್ನಗೆ ನೀಡಿ ಮುಂದೆ ನಡೆದಿದ್ದರು. ಈ ವೇಳೆ ಸಹ ಕೆಲವೊಂದು ಪೊಟೋಗಳನ್ನು ತೆಗೆದಿದ್ದಾರೆ. ಇನ್ನೂ ಓರ್ವ ದೊಡ್ಡ ಸ್ಟಾರ್‍ ನಟನಿಗೆ ಕೊಂಚವೂ ಗರ್ವವಿಲ್ಲ. ಅಷ್ಟೊಂದು ಸರಳ ರೀತಿಯಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಸರಳತೆ ಎಲ್ಲರಿಗೂ ಮಾದರಿಯಾಗಲಿ ಎಂದು ಅನೇಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇನ್ನೂ ನಟ ರಜನಿಕಾಂತ್ ರವರು ಸುಮಾರು 37 ವರ್ಷಗಳ ಬಳಿಕ ಬಾಲಿವುಡ್ ಸ್ಟಾರ್‍ ಅಮಿತಾಬ್ ರವರ ಜೊತೆಗೆ ನಟಿಸುತ್ತಿದ್ದಾರೆ. ಈ ಸಿನೆಮಾದಲ್ಲಿ ಮತಷ್ಟು ಸ್ಟಾರ್‍ ಕಲಾವಿದರು ನಟಿಸುತ್ತಿದ್ದಾರೆ. ನಟ ರಜನಿಕಾಂತ್ ಯಾವುದೇ ಕಾರ್ಯಕ್ರಮಕ್ಕೆ ತೆರಳಿದರೂ ಸಹ ಸರಳತೆಯನ್ನು ತೋರುತ್ತಾರೆ. ಇದೀಗ ಅವರು ಮುಂಬೈ ವಿಮಾನ ನಿಲ್ದಾಣದಲ್ಲಿ ತುಂಬಾ ಸಿಂಪಲ್ ಆಗಿ ಕಾಣಿಸಿಕೊಂಡಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.