ವಿದೇಶಿ ಪ್ರವಾಸದಲ್ಲಿ ನ್ಯಾಷನಲ್ ಕ್ರಷ್ ರಶ್ಮಿಕಾ ಬ್ಯೂಟಿಪುಲ್ ಲುಕ್ಸ್, ಕಲ್ಯಾಣಿ ಪ್ರಿಯದರ್ಶಿನಿ ಕಾಮೆಂಟ್ ಏನು ಗೊತ್ತಾ…..!

Follow Us :

ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣ ಕಡಿಮೆ ಸಮಯದಲ್ಲೇ ಸೌತ್ ಅಂಡ್ ನಾರ್ತ್ ನಲ್ಲೂ ಬಹುಬೇಡಿಕೆ ನಟಿಯಾದರು. ಸೌತ್ ಅಂಡ್ ನಾರ್ತ್ ನಲ್ಲೂ ಬ್ಯಾಕ್ ಟು ಬ್ಯಾಕ್ ಸಿನೆಮಾಗಳ ಮೂಲಕ ನ್ಯಾಷನಲ್ ಕ್ರಷ್ ಎಂಬ ಖ್ಯಾತಿಗೆ ಗುರಿಯಾದರು. ಇನ್ನೂ ಸೋಷಿಯಲ್ ಮಿಡಿಯಾದಲ್ಲಂತೂ ರಶ್ಮಿಕಾ ಗ್ಮಾಮರ್‍ ಬಾಂಬ್ ಅನ್ನು ಸಿಡಿಸುತ್ತಲೇ ಇರುತ್ತಾರೆ. ಇದೀಗ ಆಕೆ ವಿದೇಶಿ ಪ್ರವಾಸದಲ್ಲಿದ್ದು, ಅಲ್ಲಿನ ಕೆಲವೊಂದು ಬ್ಯೂಟಿಪುಲ್ ಪೊಟೋಸ್ ಹಂಚಿಕೊಂಡಿದ್ದು, ಈ ಪೊಟೋಗಳು ವೈರಲ್ ಆಗುತ್ತಿವೆ. ಈ ಪೊಟೋಗಳಿಗೆ ನಟಿ ಕಲ್ಯಾಣಿ ಪ್ರಿಯದರ್ಶಿನಿ ಸಹ ಕಾಮೆಂಟ್ ಮಾಡಿದ್ದು, ವಿಶೇಷ ಎನ್ನಬಹುದಾಗಿದೆ.

ನಟಿ ರಶ್ಮಿಕಾ ಸಿನೆಮಾಗಳ ಜೊತೆಗೆ ಇತರೆ ವಿಚಾರಗಳಿಂದಲೂ ಸಹ ಪುಲ್ ಸುದ್ದಿಯಲ್ಲೇ ಇರುತ್ತಾರೆ. ಆಕೆ ಏನೇ ಮಾಡಿದರೂ ಕ್ಷಣದಲ್ಲೇ ವೈರಲ್ ಆಗುತ್ತಿರುತ್ತದೆ. ಕನ್ನಡದ ಕಿರಿಕ್ ಪಾರ್ಟಿ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಈಕೆ ಕಡಿಮೆ ಸಮಯದಲ್ಲೇ ಟಾಲಿವುಡ್ ಅಂಗಳದಲ್ಲೂ ಬೇಡಿಕೆ ಪಡೆದುಕೊಂಡರು. ಬ್ಯಾಕ್ ಟು ಬ್ಯಾಕ್ ಹಿಟ್ ಸಿನೆಮಾಗಳ ಮೂಲಕ ಸೌತ್ ಸಿನೆಮಾಗಳ ಜೊತೆಗೆ ನಾರ್ತ್‌ನಲ್ಲೂ ಸಹ ಭಾರಿ ಬೇಡಿಕೆ ಪಡೆದುಕೊಂಡರು. ಇನ್ನೂ ಬಾಲಿವುಡ್ ನಲ್ಲೂ ಸಹ ಆಕೆ ಜೋರು ಹೆಚ್ಚಾಗಿದೆ ಎನ್ನಬಹುದಾಗಿದೆ. ಬಾಲಿವುಡ್ ಗೆ ಹೋಗಿದ ಬಳಿಕವಂತೂ ರಶ್ಮಿಕಾ ತುಂಬಾನೆ ಬೋಲ್ಡ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದೀಗ ರಶ್ಮಿಕಾ ವಿದೇಶಗಳಿಗೆ ಟ್ರಿಪ್ ಹೋಗಿದ್ದು, ಅಲ್ಲಿನ ಪೊಟೋಗಳನ್ನು ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದು, ಪೊಟೋಗಳು ವೈರಲ್ ಆಗುತ್ತಿವೆ.

ಸಿನೆಮಾಗಳ ಜೊತೆಗೆ ಸೋಷಿಯಲ್ ಮಿಡಿಯಾದಲ್ಲೂ ಸಹ ಪುಲ್ ಹವಾ ಮೈಂಟೈನ್ ಮಾಡುತ್ತಿದ್ದಾರೆ. ಕ್ಯೂಟ್ ಸ್ಮೈಲ್, ಹಾಟ್ ಲುಕ್ಸ್ ನೊಂದಿಗೆ ಎಲ್ಲರನ್ನೂ ಮಸ್ಮರೈಜ್ ಮಾಡುತ್ತಿರುತ್ತಾರೆ. ಅದರಲ್ಲೂ ಆಕೆ ಬಾಲಿವುಡ್ ಗೆ ಹೋದ ಬಳಿಕ ತುಂಬಾನೆ ಬೋಲ್ಡ್ ಆಗಿದ್ದು, ಈ ಕುರಿತು ಆಕೆ ಸಿಕ್ಕಾಪಟ್ಟೆ ಟ್ರೋಲ್ ಸಹ ಆಗುತ್ತಿರುತ್ತಾರೆ. ಇದೀಗ ಆಕೆ ವಿದೇಶಿ ಪ್ರವಾಸ ಕೈಗೊಂಡಿದ್ದು, ಅಲ್ಲಿನ ಕೆಲವೊಂದು ಬ್ಯೂಟಿಪುಲ್ ಹಾಗೂ ಸ್ಟೈಲಿಷ್ ಪೊಟೋಗಳನ್ನು ಹಂಚಿಕೊಂಡಿದ್ದಾರೆ. ಈ ಪೊಟೋಗಳಲ್ಲಿ ಆಕೆ ಕ್ಯೂಟ್ ಸ್ಮೈಲ್ ಕೊಟ್ಟು ಕಾಣಿಸಿಕೊಂಡಿದ್ದಾರೆ. ಜೊತೆಗೆ ಇಂಟ್ರಸ್ಟಿಂಗ್ ಕಾಮೆಂಟ್ ಸಹ ಮಾಡಿದ್ದಾರೆ. ನಾನು ಟ್ರಾವೆಲಿಂಗ್ ತುಂಬಾನೆ ಮಿಸ್ ಮಾಡಿಕೊಂಡಿದ್ದೇನೆ. ನಿಮಗೆ ಕೊಂಚ ಸಮಯ ಸಿಕ್ಕರೇ ಟ್ರಾವೆಲ್ ಮಾಡಲು ಪ್ಲಾನ್ ಮಾಡಿ. ಅದು ನಿಮ್ಮ ಊರಿಗೆ, ಸ್ನೇಹಿತರ ಮನೆಗೆ ಅಥವಾ ನಿಮಗೆ ಇಷ್ಟವಾದ ಜಾಗಕ್ಕಿರಬಹುದು. ಎಲ್ಲಾದರೂ ಆಗಲಿ ಟ್ರಾವೆಲ್ ಮಾಡಿ. ಸಿಂಗಲ್ ಆಗಿ ಆಗಲಿ, ಸ್ನೇಹಿತರೊಂದಿಗಾಗಲಿ ಅಥವಾ ಕುಟುಂಬದೊಂದಿಗೆ ಆಗಲಿ ಪ್ರಯಾಣ ಮಾಡಿ ಅದು ಮನಸ್ಸನ್ನು ಪ್ರಶಾಂತವಾಗಿಡುತ್ತದೆ ಎಂದು ಹೇಳಿದ್ದಾರೆ.

ಇನ್ನೂ ರಶ್ಮಿಕಾ ಈ ಪೋಸ್ಟ್ ಇದೀಗ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಅದರಲ್ಲೂ ನಟಿ ಕಲ್ಯಾಣಿ ಪ್ರಿಯದರ್ಶಿನಿ ಸಹ ಕಾಮೆಂಟ್ ಮಾಡಿದ್ದಾರೆ. ನಾವಿಬ್ಬರೂ ಸುಮಾರು 4732 ಬಾರಿ ಟ್ರಿಪ್ ಪ್ಲಾನ್ ಮಾಡಿದ್ದೇವೆ. ಆದರೆ ಮಾಡಿದ ಪ್ರಯಾಣ ಮಾತ್ರ ಜಿರೋ ಎಂದು ಫನ್ನಿಯಾಗಿ ಕಾಮೆಂಟ್ ಮಾಡಿದ್ದಾರೆ. ಸದ್ಯ ರಶ್ಮಿಕಾ ಹಾಗೂ ರಣಬೀರ್‍ ಕಾಂಬಿನೇಷನ್ ನ ಯಾನಿಮಲ್ ಸಿನೆಮಾ ಮಾತ್ರ ಭಾರಿ ಸದ್ದು ಮಾಡುತ್ತಿದೆ. ಈ ಸಿನೆಮಾದಲ್ಲಿ ರಶ್ಮಿಕಾ ಲಿಪ್ ಕಿಸ್ ಗಾಗಿ ಹೆಚ್ಚುವರಿ ಮೊತ್ತವನ್ನು ಪಡೆದುಕೊಂಡಿದ್ದಾರೆ ಎಂಬ ಮಾತುಗಳೂ ಸಹ ಕೇಳಿಬರುತ್ತಿವೆ.