News

ರಾಮಮಂದಿರ ನಿರ್ಮಾಣ ಕೆತ್ತನೆಯಲ್ಲಿ ಮುಸ್ಲೀಂ ವ್ಯಕ್ತಿ, ಇದು ನಮ್ಮ ಸೌಭಾಗ್ಯ ಎಂದ ಆ ಮುಸ್ಲೀಂ ವ್ಯಕ್ತಿ…..!

ದೇಶದ ಕೋಟ್ಯಂತರ ಹಿಂದೂಗಳ ಬಹುವರ್ಷಗಳ ಕನಸಾದ ಅಯೋದ್ಯೆಯ ಶ್ರೀರಾಮ ಮಂದಿರದ ನಿರ್ಮಾಣದ ಕೆಲಸ ಭರದಿಂದ ಸಾಗುತ್ತಿದೆ. ಇನ್ನೇನು ದೇವಾಲಯದ ಉದ್ಘಾಟನೆ ಸಹ ಜನವರಿ ಮಾಹೆಯಲ್ಲಿ ನಡೆಯಲಿದೆ. ಉದ್ಘಾಟನಾ ದಿನಾಂಕ ಸಮೀಪವಾಗುತ್ತಿರುವ ಹಿನ್ನೆಲೆಯಲ್ಲಿ ನಿರ್ಮಾಣದ ಕೆಲಸ ಸಹ ಭರದಿಂದ ಸಾಗುತ್ತಿದೆ. ಈ ಕಾರ್ಯದಲ್ಲಿ ಕೆಲ ಮುಸ್ಲೀಂರೂ ಸಹ ಕೆತ್ತನೆ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಓರ್ವ ಮುಸ್ಲೀಂ ವ್ಯಕ್ತಿ ರಾಮಮಂದಿನ ನಿರ್ಮಾಣದಲ್ಲಿ ಭಾಗಿಯಾಗಿರುವುದು ನನ್ನ ಸೌಭಾಗ್ಯ ಎಂದು ಹೇಳಿದ್ದಾರೆ ಎಂದು ತಿಳಿದುಬಂದಿದೆ.

ಅಯೋಧ್ಯೆಯ ರಾಮಮಂದಿರದ ನಿರ್ಮಾಣ ಕಾರ್ಯದಲ್ಲಿ ಉತ್ತರಪ್ರದೇಶದ ಫತೇಪುರ್‍ ಸಿಕ್ರಿ ನತ್ತು ಖೇರಗಢ್ ನಲ್ಲಿರುವಂತಹ ಅನೇಕ ಕುಶಲಕರ್ಮಿಗಳು ಕೆಂಪು ಮರಳು ಕಲ್ಲಿನ ಮೇಲೆ ಕಲಾಕೃತಿಗಳನ್ನು ಕೆತ್ತುತ್ತಿದ್ದಾರೆ. ಈ ಕುಶಲಕರ್ಮಿಗಳಲ್ಲಿ ಅನೇಕ ಮುಸ್ಲೀಂ ಕುಶಲಕರ್ಮಿಗಳೂ ಸಹ ಇದ್ದಾರೆ. ರಾಮಮಂದಿರ ನಿರ್ಮಾಣಕ್ಕೆ ಅವರೂ ಸಹ ಸಹಕಾರ ನೀಡುತ್ತಿದ್ದಾರೆ. ಈ ದೈವಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿರುವಂತಹ ಮುಸ್ಲೀಂ ವ್ಯಕ್ತಿಯೊಬ್ಬರು ಇದು ನಮಗೆ ತುಂಬಾ ಹೆಮ್ಮೆಯ ವಿಚಾವಾಗಿದೆ. ಇಲ್ಲಿನ ನೂರಾರು ಕಂಬಗಳಲ್ಲಿ ನಮ್ಮ ಕೆತ್ತನೆ ಸಹ ಇರುವುದು ನಮ್ಮ ಸೌಭಾಗ್ಯ, ಅದೃಷ್ಟ ಎಂದು ಹೇಳಿದ್ದಾರೆ ಎಂದು ಹೇಳಲಾಗಿದೆ.

ಇನ್ನೂ ಸುಮಾರು ವರ್ಷಗಳ ಹಿಂದೂಗಳ ಕನಸಾದ ರಾಮಮಂದಿರ ಇನ್ನೇನು ಕೆಲವೇ ದಿನಗಳಲ್ಲಿ ಲೋಕಾರ್ಪಣೆಯಾಗಲಿದೆ. ಈಗಾಲೇ ಸುಮಾರು 500 ಕ್ಯೂಬಿಕ್ ಅಡಿ ಕಲ್ಲು ಸಿದ್ದಪಡಿಸಲಾಗಿದೆ ಎಂದು ತಿಳಿದುಬಂದಿದೆ. ಸುಮಾರು ಎರಡು ವರ್ಷಗಳಿಂದ ನಿರಂತರವಾಗಿ ಕಲ್ಲುಗಳನ್ನು ಕೆತ್ತುತ್ತಿದ್ದಾರೆ. ಮುಂದಿನ ವರ್ಷ ಅಂದರೇ 2024 ಜನವರಿ 22  ರಂದು ಶ್ರೀರಾಮ ಮಂದಿರ ಲೋಕಾರ್ಪಣೆಗೊಳ್ಳಲಿದೆ. ಕೆಲವು ದಿನಗಳ ಹಿಂದೆಯಷ್ಟೆ ಪ್ರಧಾನಿ ಮೋದಿಯವರನ್ನು ಸಹ ದೇವಾಲಯದ ಉದ್ಘಾಟನೆಗೆ ರಾಮಮಂದಿರ ನಿರ್ಮಾಣ ಉಸ್ತುವಾರಿ ತಂಡ ಆಹ್ವಾನ ಸಹ ಮಾಡಿದೆ.

Most Popular

To Top