Film News

ಮಲೇಷಿಯಾ ಪ್ರಧಾನಿಯ ಜೊತೆ ತಲೈವ ರಜನಿಕಾಂತ್, ಮಲೇಷಿಯಾ ಪ್ರಧಾನಿ ರಜನಿಕಾಂತ್ ಅಭಿಮಾನಿಯಂತೆ….!

ಕಾಲಿವುಡ್ ಸೂಪರ್‍ ಸ್ಟಾರ್‍ ರಜನಿಕಾಂತ್ ಕೇವಲ ತಮಿಳಿನಲ್ಲಿ ಮಾತ್ರವಲ್ಲದೇ ದೇಶ-ವಿದೇಶದಾದ್ಯಂತ ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ. ಕೇವಲ ಸಾಮಾನ್ಯ ಸಿನಿಮಾ ರಸಿಕರು  ಮಾತ್ರವಲ್ಲದೇ ಅವರ ಅಭಿಯನಕ್ಕೆ ಅನೇಕ ರಾಜಕೀಯ ಗಣ್ಯರು ಸಹ ಅವರ ಅಭಿಮಾನಿಗಳಾಗಿದ್ದಾರೆ. ಇದೀಗ ಮಲೇಷಿಯಾ ಪ್ರಧಾನಿ ಸಹ ರಜನಿಕಾಂತ್ ರವರ ಕಟ್ಟಾ ಅಭಿಮಾನಿಯಂತೆ. ಇದೀಗ ಮಲೇಷಿಯಾ ಪ್ರಧಾನಿ ಹಾಗೂ ರಜನಿಕಾಂತ್ ರವರ ಪೊಟೋ ವೈರಲ್ ಆಗಿದೆ.

ದೇಶದ ಸಿನಿರಂಗದ ಸ್ಟಾರ್‍ ನಟರಲ್ಲೊಬ್ಬರಾದ ಸೂಪರ್‍ ಸ್ಟಾರ್‍ ರಜನಿಕಾಂತ್ ರವರು ವಯಸ್ಸಾದರೂ ಸಹ ಭಾರಿ ಬಜೆಟ್ ಸಿನೆಮಾಗಳಲ್ಲಿ ನಟಿಸುತ್ತಿದ್ದಾರೆ. ಜೊತೆಗೆ ಭಾರಿ ಸಂಭಾವನೆಯನ್ನು ಪಡೆದುಕೊಳ್ಳಯತ್ತಾ ಟಾಪ್ ನಟರ ಸಾಲಿನಲ್ಲಿ ಸಹ ಇದ್ದಾರೆ. ಇನ್ನೂ ರಜನಿಕಾಂತ್ ರವರ ಬಹುನಿರೀಕ್ಷಿತ ಜೈಲರ್‍ ಸಿನೆಮಾ ಕೆಲವು ದಿನಗಳ ಹಿಂದೆಯಷ್ಟೆ ಬಿಡುಗಡೆಯಾಗಿದ್ದು ಭಾರಿ ಸಕ್ಸಸ್ ಕಾಣುತ್ತಿದೆ. ಸುಮಾರು ವರ್ಷಗಳಿಂದ ಹಿಟ್ ಇಲ್ಲದೇ ಇದ್ದ ರಜನಿಕಾಂತ್ ರವರಿಗೆ ಜೈಲರ್‍ ಸಿನೆಮಾ ಭಾರಿ ಸಕ್ಸಸ್ ತಂದುಕೊಟ್ಟಿದೆ. ಮರಾಠಿ ಕುಟುಂಬದಲ್ಲಿ ಜನಿಸಿದ ಈತ ಬೆಂಗಳೂರಿನ ಬಿಟಿಎಸ್ ಬಸ್ ಕಂಡಕ್ಟರ್‍ ಆಗಿ ಕೆಲಸ ಪ್ರಾರಂಭಿಸಿ ಇದೀಗ ಸಿನಿರಂಗದಲ್ಲಿ ಮೇರು ನಟನಾಗಿ ಅಪಾರ ಸಂಖ್ಯೆಯ ಅಭಿಮಾನಿ ಬಳಗವನ್ನು ಪಡೆದುಕೊಂಡು ವಯಸ್ಸಾದರೂ ಸಹ ಅನೇಕ ಸಿನೆಮಾಗಳ ಮೂಲಕ ರಂಜಿಸುತ್ತಿದ್ದಾರೆ. ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿರುವ ರಜನಿಕಾಂತ್ ಮಲೇಷಿಯಾ ಪ್ರಧಾನಿ ಅನ್ವರ್‍ ಇಬ್ರಹಿ ರವರನ್ನು ಮರ್ಯಾದ ಪೂರ್ವಕವಾಗಿ ಭೇಟಿಯಾಗಿದ್ದಾರೆ.

ಮಲೇಷಿಯಾ ಪ್ರಧಾನಿ ಅನ್ವರ್‍ ಇಬ್ರಹಿಂ ಹಾಗೂ ರಜನಿಕಾಂತ್ ರವರು ಭೇಟಿಯಾಗಿದ್ದು, ಕೆಲವೊಂದು ಪೊಟೋಗಳನ್ನು ಆತ ತನ್ನ ಎಕ್ಸ್ ಅಂದರೇ ಟ್ವಿಟರ್‍ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಪೊಟೋಗಳ ಜೊತೆಗೆ ಆತ ಮಾಹಿತಿಯನ್ನು ಸಹ ಹಂಚಿಕೊಂಡಿದ್ದಾರೆ. ಪ್ರಪಂಚದಾದ್ಯಂತ ಅಭಿಮಾನಿಗಳನ್ನು ಸ್ಚಂತ ಮಾಡಿಕೊಂಡ ರಜನಿ ರವರನ್ನು ಭೇಟಿಯಾಗಿದ್ದು ನನಗೆ ತುಂಬಾ ಸಂತೋಷವಾಗಿದೆ. ಜನರ ಕಷ್ಟಗಳು, ಜನರಿಗೆ ಆತ ಮಾಡಿದ ಸೇವೆ ಅವರ ಮೇಲೆ ಗೌರವ ತಂದುಕೊಟ್ಟಿದೆ. ಭವಿಷ್ಯತ್ತಿನಲ್ಲಿ ಅವರ ಸಿನೆಮಾಗಳಲ್ಲಿ ಹೆಚ್ಚಾಗಿ ಸಾಮಾಜಿಕ ಅಂಶಗಳನ್ನು ಹೆಚ್ಚಾಗಿರಬೇಕು. ರಜನಿಕಾಂತ್ ರವರು ಆಯ್ಕೆ ಮಾಡಿಕೊಳ್ಳು ಪ್ರತಿಯೊಂದು ರಂಗದಲ್ಲೂ ವಿಜಯ ಸಾಧಿಸಬೇಕೆಂದು ಕೋರಿದ್ದಾರೆ.

ಇನ್ನೂ ಮಲೇಷಿಯಾ ಪ್ರಧಾನಿ ಅನ್ವರ್‍ ಇಬ್ರಹಿಂ ಹಾಗೂ ರಜನಿಕಾಂತ್ ರವರ ಪೊಟೋ ಹಾಗೂ ವಿಡಿಯೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಇನ್ನೂ ಜೈಲರ್‍ ಸಿನೆಮಾ ಬಿಡುಗಡೆಯಾಗಿ ಇದೀಗ ಒಟಿಟಿಯಲ್ಲೂ ಸಹ ಪ್ರದರ್ಶನ ಆಗುತ್ತಿದೆ. ಆದರೂ ಸಹ ಸಿನೆಮಾ ಥಿಯೇಟರ್‍ ಗಳಲ್ಲಿ ಭರ್ಜರಿಯಾಗಿ ಪ್ರದರ್ಶನ ಆಗುತ್ತಿದೆ.

Most Popular

To Top