ನದಿಯಂತೆ ಹರಿದ 22 ಮಿಲಿಯನ್ ಲೀಟರ್ ವೈನ್, ವೈರಲ್ ಆದ ವಿಡಿಯೋ….!

Follow Us :

ರಾತ್ರಿ ಮಲಗಿದವರು ಬೆಳಿಗ್ಗೆ ಎದ್ದು ಹೊರ ಬಂದ ಕೂಡಲೇ ಕೆಂಪು ನದಿ ಹರಿಯುತ್ತಿದೆ. ಎಲ್ಲರೂ ಶಾಕ್ ಆದರು. ಪೋರ್ಚುಗಲ್ ನ ಲೆವಿರಾ ಎಂಬ ಪುಟ್ಟಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಈ ಹಳ್ಳಿಯಲ್ಲಿ ನಡೆದಂತಹ ಘಟನೆಯ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಅಷ್ಟಕ್ಕೂ ರಸ್ತೆಯಲ್ಲಿ ಹರಿದಿದ್ದು ಕೆಂಪು ನದಿಯಲ್ಲ ಬದಲಿಗೆ ಅದು 22 ಮಿಲಿಯನ್ ಲೀಟರ್‍ ರೆಡ್ ವೈನ್.

ಪೋರ್ಚುಗಲ್ ನ ಲೆವಿರಾ ಎಂಬ ಪುಟ್ಟಹಳ್ಳಿಯಲ್ಲಿ ವೈನ್ ಟ್ಯಾಂಕ್ ಒಡೆದು ಸುಮಾರು 22 ಲಕ್ಷ ಲೀಟರ್‍ ವೈನ್ ಹೊರಬಂದಿದೆ. ಬೆಳಿಗ್ಗೆ ಎದ್ದ ಕೂಡಲೇ ಅಲ್ಲಿನ ಜನರು ಶಾಕ್ ಆಗಿದ್ದಾರೆ. ರಸ್ತೆಯಲ್ಲಿ ಕೆಂಪು ನದಿಯಂತೆ ರೆಡ್ ವೈನ್ ಹರಿದಿದೆ. ಇನ್ನೂ ಈ ಸಂಬಂಧ ವಿಡಿಯೋ ಸಹ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ಕಾರಣದಿಂದ ನದಿಗಳು ಹಾಗೂ ಜಲಮೂಲಗಳ ಜೊತೆಗೆ ಪರಿಸರ ಸಹ ಹಾಳಾಗಲಿದೆ ಎಂದು ಎಚ್ಚರಿಕೆ ಸಹ ಬಂದಿದೆ. ಇನ್ನೂ ವರದಿಯಂತೆ ಮನೆಯ ನೆಲಮಾಳಿಗೆಯಲ್ಲಿ ವೈನ್ ತುಂಬಿದ್ದು, ವೈನ್ ತುಂಬಿದ ಟ್ಯಾಂಕ್  ಒಡೆದು ವೈನ್ ರಸ್ತೆಗೆ ಬಂದಿದೆ. ಈ ಬಗ್ಗೆ ಲೆವಿರಾ ಡಿಸ್ಟಿಲರಿ ಕ್ಷಮೆಯಾಚಿಸಿದೆ. ಇನ್ನೂ ಹಾನಿಗೆ ಪರಿಹಾರ ಸಹ ಪಾವತಿ ಮಾಡಲಾಗುತ್ತದೆ ಹಾಗೂ ರಸ್ತೆ ಸ್ವಚ್ಚಗೊಳಿಸಲು ಹಣ ಸಹ ನೀಡುತ್ತೇವೆ ಎಂಬ ಜವಾಬ್ದಾರಿಯನ್ನು ಪಡೆದುಕೊಂಡಿದೆ.

ಇನ್ನೂ ಲೆವಿರಾ ಡಿಸ್ಟಿಲರಿ ಅಧಿಕಾರಿಗಳು ಈ ವಿಡಿಯೋ ಹಾಗೂ ಚಿತ್ರಗಳನ್ನು ಎಲ್ಲೂ ಪೋಸ್ಟ್ ಮಾಡಬಾರದು ಎಂದು ಹೇಳಲಾಗಿದೆ. ಆದರೂ ಸಹ ವಿಡಿಯೋ ಒಂದು ವೈರಲ್ ಆಗುತ್ತಿದೆ. ಇನ್ನೂ ಲೆವಿರಾ ಸಮೀಪದ ಸೆರ್ಟಿಮಾ ನದಿಗೆ ವೈನ್ ಸೇರಿ ಕಲುಷಿತವಾಗುವುದನ್ನು ತಡೆಯಲು ಅಲ್ಲಿನ ಅಗ್ನಿಶಾಮಕದಳ ತಕ್ಷಣ ಕ್ರಮ ತೆಗೆದುಕೊಂಡಿದೆ.