Film News

ಶಾಕ್ ಕೊಟ್ಟ ಗೋವಾ ಬ್ಯೂಟಿ ಇಲಿಯಾನಾ, ಪ್ರೆಗ್ನೆನ್ಸಿಯನ್ನು ಪ್ರಕಟಿಸಿದ ಇಲಿಯಾನಾ?

ತೆಲುಗಿನ ಪೋಕಿರಿ ಎಂಬ ಸಿನೆಮಾದ ಮೂಲಕ ಓವರ್‍ ನೈಟ್ ಸ್ಟಾರ್‍ ಆದ ಗೋವಾ ಮೂಲದ ನಟಿ ಇಲಿಯಾನ ಸದ್ಯ ಸಿನಿರಂಗದಿಂದ ದೂರ ಉಳಿದಿದ್ದಾರೆ.  ಸೌತ್ ಸಿನೆಮಾಗಳಲ್ಲಿ ಕೆರಿಯರ್‍ ಪೀಕ್ ನಲ್ಲಿರುವಾಗ ಆಕೆ ತೆಗೆದುಕೊಂಡ ಕೆಲವೊಂದು ನಿರ್ಧಾರಗಳು ಹಾಗೂ ತಪ್ಪು ಹೆಜ್ಜೆಗಳ ಕಾರಣದಿಂದ ಆಕೆಯ ಕೆರಿಯರ್‍ ವೀಕ್ ಆಯ್ತು. ಬಳಿಕ ಕೆಲವೊಂದು ವೈಯುಕ್ತಿಕ ಕಾರಣಗಳಿಂದ ಡಿಪ್ರೆಷನ್ ಗೂ ಸಹ ಗುರಿಯಾಗಿದ್ದರು. ಇದೀಗ ಆಕೆ ಮತ್ತೆ ಸಿನೆಮಾಗಳಲ್ಲಿ ಆಕ್ಟೀವ್ ಆಗಲು ಪ್ರಯತ್ನಗಳನ್ನು ನಡೆಸುತ್ತಿದ್ದರೂ ಸಹ ಆಕೆಗೆ ಮೊದಲಿನಂತೆ ಅವಕಾಶಗಳು ಬರುತ್ತಿಲ್ಲ. ಆದರೆ ಸೋಷಿಯಲ್ ಮಿಡಿಯಾದಲ್ಲಿ ಮಾತ್ರ ಆಕೆ ಅಭಿಮಾನಿಗಳೊಂದಿಗೆ ಟಚ್ ನಲ್ಲೇ ಇರುತ್ತಾರೆ.

ಸಿನೆಮಾಗಳಲ್ಲಿ ಕಾಣಿಸಿಕೊಳ್ಳದೇ ಇದ್ದರೂ ಸಹ ತನ್ನ ಸೋಷಿಯಲ್ ಮಿಡಿಯಾ ಮೂಲಕ ಅಭಿಮಾನಿಗಳೊಂದಿಗೆ ಟಚ್ ನಲ್ಲೇ ಇರುತ್ತಾರೆ ಇಲಿಯಾನಾ. ಸದಾ ಬಿಕಿನಿಯಲ್ಲೇ ಹಾಟ್ ಪೊಟೋಶೂಟ್ಸ್ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿರುತ್ತಾರೆ. ಸೋಷಿಯಲ್ ಮಿಡಿಯಾದಲ್ಲಿ ಬಿಕಿನಿ ಪೋಸ್ ಗಳ ಮೂಲಕ ಬಿಸಿಯನ್ನೇರಿಸುತ್ತಿದ್ದ ಇಲಿಯಾನಾ ಇದೀಗ ತಾನು ಗರ್ಭಿಣಿ ಎಂದು ಪೋಸ್ಟ್ ಮಾಡುವ ಮೂಲಕ ಹಾಟ್ ಟಾಪಿಕ್ ಆಗಿದ್ದಾರೆ. ಈ ಸುದ್ದಿಯನ್ನು ಕೇಳಿದ ಅಭಿಮಾನಿಗಳು ಶಾಕ್ ಆಗಿದ್ದಾರೆ. ಇಲಿಯಾನಾ ಇನ್ನೂ ಮದುವೆನೇ ಆಗಿಲ್ಲ ಗರ್ಭಿಣಿ ಎಂದು ಸೋಷಿಯಲ್ ಮಿಡಿಯಾದಲ್ಲಿ ಘೋಷಣೆ ಮಾಡಿದ್ದಾರೆ. ತನ್ನ ಇನ್ಸ್ಟಾ ಖಾತೆಯಲ್ಲಿ ಈ ವಿಚಾರವನ್ನು ಇಲಿಯಾನಾ ಪೋಸ್ಟ್ ಮಾಡಿದ್ದಾರೆ. ಇದೀಗ ಆಕೆಯ ಪೋಸ್ಟ್ ಸಖತ್ ವೈರಲ್ ಆಗುತ್ತಿದೆ.

ನಟಿ ಇಲಿಯಾನಾ ತನ್ನ ಸೋಷಿಯಲ್ ಮಿಡಿಯಾ ಖಾತೆಯಲ್ಲಿ ಮಗುವಿನ ಟೀ ಷರ್ಟ್ ಹಾಗೂ ಕತ್ತಿನಲ್ಲಿ ಮಾಮಾ (ಅಮ್ಮಾ) ಎಂಬ ಚೈನ್ ಒಂದನ್ನು ಶೇರ್‍ ಮಾಡಿದ್ದಾರೆ. ಟೀ ಶರ್ಟ್ ಮೇಲೆ ಅಂಡ್ ಸೋ ದಿ ಅಡ್ವೆಂಚರ್‍ ಬಿಗಿನ್ಸ್ ಎಂದು ಬರೆದಿದೆ. ಇದಕ್ಕೆ ಆಕೆ ಕಮ್ಮಿಂಗ್ ಸೂನ್, ನನ್ನ ಚಿನ್ನಾರಿ ಡಾರ್ಲಿಂಗ್ ನನ್ನು ಭೇಟಿಯಾಗಲು ಅತ್ಯಂತ ಆತುರದಲ್ಲಿದ್ದೇನೆ ಎಂದು ಕ್ಯಾಪ್ಷನ್ ಹಾಕಿದ್ದಾರೆ. ಈ ಪೋಸ್ಟ್ ಕಂಡ ಕೂಡಲೇ ಅಭಿಮಾನಿಗಳು ಸೇರಿದಂತೆ ಅನೇಕರು ಶಾಕ್ ಆಗಿದ್ದಾರೆ. ಇಲಿಯಾನಾ ಸಡನ್ ಆಗಿ ತನ್ನ ಪ್ರೆಗ್ನೆನ್ಸಿ ಘೋಷಣೆ ಮಾಡಿದ್ದು ಎಲ್ಲರೂ ಆಶ್ಚರ್ಯ ಪಡುತ್ತಿದ್ದಾರೆ. ಇದರಿಂದಾಗಿ ಅಭಿಮಾನಿಗಳೂ ಸೇರಿದಂತೆ ನೆಟ್ಟಿಗರಿಗೂ ಸಹ ಅನೇಕ ಅನುಮಾನಗಳು ಹುಟ್ಟಿಕೊಂಡಿವೆ. ಇಲ್ಲಿಯವರೆಗೂ ಮದುವೆಯ ಬಗ್ಗೆ ಯಾವುದೇ ಸುಳಿವು ಸಹ ಇಲ್ಲ. ಪ್ರೀತಿಯಲ್ಲಿದ್ದಾರೆ ಎಂಬ ಖಚಿತ ಮಾಹಿತಿ ಸಹ ಇಲ್ಲ. ಇದೀಗ ಆಕೆ ಗರ್ಭಿಣಿ ಎಂದು ಘೋಷಣೆ ಮಾಡಿದ್ದು ಅನೇಕ ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ.

ಇನ್ನೂ ಆಕೆ ಹಂಚಿಕೊಂಡ ಪೋಸ್ಟ್ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಮದುವೆಯ ಯಾವಾಗ ಆಯ್ತು, ಆ ಮಗುವಿಗೆ ತಂದೆ ಯಾರು, ತಂದೆಯ ಹೆಸರು ಹೇಳುವುದಿಲ್ಲವೇ ಎಂದು ಕಾಮೆಂಟ್ ಗಳೂ ಸಹ ಹರಿದು ಬರುತ್ತಿವೆ. ಇನ್ನೂ ಇಲಿಯಾನಾ ನಿಜಕ್ಕೂ ತಾಯಿ ಆಗುತ್ತಿದ್ದಾರಾ ಅಥವಾ ಸಿನೆಮಾ ಪ್ರಮೋಷನ್ ಗಾಗಿ ಮಾಡಿದ ಗಿಮಿಕ್ ಇರಬಹುದಾ ಎಂಬ ಅನುಮಾನಗಳು ಸಹ ಮತ್ತೊಂದು ಕಡೆ ಹುಟ್ಟಿಕೊಂಡಿವೆ. ಈ ಬಗ್ಗೆ ಇನ್ನಷ್ಟೆ ಕ್ಲಾರಿಟಿ ಸಿಗಬೇಕಿದೆ.

Most Popular

To Top