ಉಪನ್ಯಾಸಕನಿಗೆ ಲಾಂಗ್ ತೋರಿಸಿದ ವಿದ್ಯಾರ್ಥಿ, ತನ್ನ ಬಗ್ಗೆ ಹೆತ್ತವರಿಗೆ ದೂರು ನೀಡಿದಕ್ಕೆ ಲಾಂಗ್ ಮೂಲಕ ಬೆದರಿಕೆ….!

Follow Us :

ವಿದ್ಯೆ ನೀಡಿದ ಶಿಕ್ಷಕರಿಗೆ ವಿವಿಧ ರೀತಿಯಲ್ಲಿ ಗೌರವ ನೀಡುತ್ತಾರೆ. ಆದರೆ ಮಂಡ್ಯದಲ್ಲೊಬ್ಬ ವಿದ್ಯಾರ್ಥಿ ತನ್ನ ವಿರುದ್ದ ಪೋಷಕರಿಗೆ ದೂರು ನೀಡಿದ್ದ ಎಂದು ಉಪನ್ಯಾಸಕರಿಗೆ ಲಾಂಗ್ ತೋರಿಸಿ ದರ್ಪ ಮೆರೆದಿದ್ದಾನೆ. ಡಿಪ್ಲೋಮಾ ಉಪನ್ಯಾಸಕರಿಗೆ ಲಾಂಗ್ ತೋರಿಸಿದ ಘಟನೆ ನಡೆದಿದೆ.

ಮಂಡ್ಯದ ನಾಗಮಂಗಲ ತಾಲೂಕಿನ ಬಿಜಿ ನಗರದ ಕಾಲೇಜಿನಲ್ಲಿ ಈ ಘಟನೆ ನಡೆದಿದೆ. ಈ ಘಟನೆ ಆ.19 ರಂದು ನಡೆದಿದೆ ಎನ್ನಲಾಗಿದೆ. ಕುಣಿಗಲ್ ತಾಲೂಕಿನ ಅವರೇಗೆರೆ ಗ್ರಾಮದ ಉದಯ್ ಗೌಡ ಎಂಬ ವಿದ್ಯಾರ್ಥಿ ತಮ್ಮ ಕಾಲೇಜಿನ ಉಪನ್ಯಾಸಕ ಚಂದನ್ ಎಂಬುವವರಿಗೆ ಲಾಂಗ್ ತೋರಿಸಿದ್ದಾರೆ. ತಮ್ಮ ಮಗ ಸರಿಯಾಗಿ ತರಗತಿಗಳಿಗೆ ಬರುತ್ತಿಲ್ಲ. ಆತನ ವರ್ತನೆ ಸಹ ಸರಿಯಿಲ್ಲ. ಆತನಿಗೆ ಬುದ್ದಿ ಹೇಳಿ ಎಂದು ಉಪನ್ಯಾಸಕ ಚಂದನ್ ವಿದ್ಯಾರ್ಥಿ ಉದಯ್ ಗೌಡ ಪೋಷಕರಿಗೆ ದೂರು ನೀಡಿದ್ದರು. ಇದರಿಂದ ಕೆರಳಿದ ಉದಯ್ ಗೌಡ ಲಾಂಗ್ ಹಿಡಿದು ಉಪನ್ಯಾಸಕ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದಾನೆ.

ಇನ್ನೂ ತನ್ನ ವಿರುದ್ದ ಪೋಷಕರಿಗೆ ದೂರು ಹೇಳಿದ್ದಾರೆ ಎಂದು ಆಕ್ರೋಷಗೊಂಡ ವಿದ್ಯಾರ್ಥಿ ಉದಯ್ ಗೌಡ ಲಾಂಗ್ ಹಿಡಿದು ಉಪನ್ಯಾಸಕ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದಾನೆ. ಇನ್ನೂ ಈ ವೇಳೆ ಈ ದೃಶ್ಯಗಳನ್ನು ವಿದ್ಯಾರ್ಥಿಗಳು ಮೊಬೈಲ್ ನಲ್ಲಿ ವಿಡಿಯೋ ಸೆರೆಹಿಡಿದಿದ್ದಾರೆ. ಇನ್ನೂ ವಿದ್ಯಾರ್ಥಿಯ ವಿರುದ್ದ ಬೆಳ್ಳೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಬಳಿಕ ವಿದ್ಯಾರ್ಥಿ ಉದಯ್ ಗೌಡ ತಮ್ಮ ಪೋಷಕರೊಂದಿಗೆ ಬಂದು ಕ್ಷಮೆಯನ್ನು ಕೇಳಿದ್ದಾರೆ ಎಂದು ತಿಳಿದು ಬಂದಿದೆ.