Film News

ನ್ಯಾಷನಲ್ ಫಿಲ್ಮ್ ಅವಾರ್ಡ್ ಗೆದ್ದವರಿಗೆ ಶುಭ ಕೋರಿದ ರಶ್ಮಿಕಾ, ಕನ್ನಡ ಬಿಟ್ಟು ಎಲ್ಲರಿಗೂ ಶುಭ ಕೋರಿ ನಟಿ, ಕನ್ನಡಿಗರ ಆಕ್ರೋಷಕ್ಕೆ ಗುರಿಯಾದ ರಶ್ಮಿಕಾ ಮಂದಣ್ಣ….!

ಸ್ಟಾರ್‍ ನಟಿ ರಶ್ಮಿಕಾ ಮಂದಣ್ಣ ಕನ್ನಡ ಸಿನೆಮಾದ ಮೂಲಕ ರಾಷ್ಟ್ರ ಮಟ್ಟದಲ್ಲಿ ಫೇಂ ಪಡೆದುಕೊಂಡಿದ್ದಾರೆ. ಆದರೆ ರಶ್ಮಿಕಾ ಕನ್ನಡ ಭಾಷೆಯ ಸಿನೆಮಾಗಳನ್ನು ಕೀಳಾಗಿ ನೋಡುತ್ತಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಲೇ ಇದೆ. ಇದೀಗ ರಶ್ಮಿಕಾ ಮಂದಣ್ಣ ಮತ್ತೊಮ್ಮೆ ಕನ್ನಡಿಗರನ್ನು ಕೆರಳಿಸುವಂತಹ ಕೆಲಸ ಮಾಡಿದ್ದಾರೆ. ನ್ಯಾಷನಲ್ ಫಿಲಂ ಅವಾರ್ಡ್ 2023 ವಿಜೇತ ಪಟ್ಟಿಯನ್ನು ಅನೌನ್ಸ್ ಮಾಡಿದ್ದು, ವಿಜೇತರಿಗೆ ರಶ್ಮಿಕಾ ಶುಭ ಕೋರಿದ್ದಾರೆ. ಆದರೆ ಕನ್ನಡ ಸಿನೆಮಾ ಬಿಟ್ಟು, ಪರಭಾಷೆ ಚಿತ್ರಕ್ಕೆ, ನಟರಿಗೆ ಶುಭ ಕೋರಿದ್ದಾರೆ. ಇದರಿಂದ ಕನ್ನಡಿಗರು ಆಕೆಯ ವಿರುದ್ದ ಆಕ್ರೋಷ ಹೊರಹಾಕಿದ್ದಾರೆ.

ಕೇಂದ್ರ ಸರ್ಕಾರ ನ್ಯಾಷನಲ್ ಫಿಲ್ಮ್ ಅವಾರ್ಡ್‌ಗಳನ್ನು ಘೋಷಣೆ ಮಾಡಿದ್ದು. ಅದರಂತೆ ಅನೇಕ ಸಿನೆಮಾಗಳು ಕಲಾವಿದರನ್ನು ವಿವಿಧ ವಿಭಾಗಗಳಲ್ಲಿ ಪ್ರಶಸ್ತಿಗೆ ಅನೌನ್ಸ್ ಮಾಡಿದೆ. ರಶ್ಮಿಕಾ ಅಭಿನಯದ ಪುಷ್ಪಾ ಸಿನೆಮಾಗೂ ಸಹ ಅವಾರ್ಡ್ ಬಂದಿದೆ. ಅಲ್ಲು ಅರ್ಜುನ್ ರವರಿಗೆ ಬೆಸ್ಟ್ ಆಕ್ಟರ್‍ ಅವಾರ್ಡ್ ಸಿಕ್ಕಿದೆ. ಮ್ಯೂಸಿಕ್ ಡೈರೆಕ್ಟರ್‍ ದೇವಿಶ್ರೀ ಪ್ರಸಾದ್ ಗೆ ಬೆಸ್ಟ್ ಮ್ಯೂಸಿಕ್ ಡೈರೆಕ್ಟರ್‍ ಪ್ರಶಸ್ತಿ ಒಲಿದಿದೆ. ಸಿದ್ದಾರ್ಥ್ ಮೆಲ್ಹೋತ್ರಾಗೆ ಶೇರ್ಷಾ ಸಿನೆಮಾಗೆ ಸ್ಪೇಷಲ್ ಜ್ಯೂರಿ ಅವಾರ್ಡ್, ಉತ್ತಮ ನಟಿಯ ಅವಾರ್ಡ್ ಗಂಗೂಭಾತಿ ಕಾಥಿಯಾವಾಡಿ ಸಿನೆಮಾದ ನಟನೆಗಾಗಿ ಆಲಿಯಾ ಭಟ್ ಗೆ, ಮಿಮಿ ಸಿನಿಮಾದ ನಟನೆಗೆ ಕೃತಿ ಸನೋನ್ ಗೆದ್ದುಕೊಂಡಿದ್ದಾರೆ. ಈ ಎಲ್ಲರಿಗೂ ರಶ್ಮಿಕಾ ತಮ್ಮ ಇನ್ಸ್ಟಾ ಸ್ಟೋರಿಯಲ್ಲಿ ಪೊಟೋಗಳನ್ನು ಹಂಚಿಕೊಂಡು ಶುಭಾಷಯ ಕೋರಿದ್ದಾರೆ.

ಇನ್ನೂ ರಶ್ಮಿಕಾ ಮಂದಣ್ಣ ಕಿರಿಕ್ ಪಾರ್ಟಿ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ಈ ಸಿನೆಮಾದಲ್ಲಿ ರಕ್ಷಿತ್ ಶೆಟ್ಟಿ ಜೊತೆಗೆ ಆಕೆ ತೆರೆ ಹಂಚಿಕೊಂಡಿದ್ದರು. ಕನ್ನಡ ಸಿನೆಮಾದ ಮೂಲಕ ಕೆರಿಯರ್‍ ಆರಂಭಿಸಿ ಆಕೆ ಇದೀಗ ಸೌತ್ ಅಂಡ್ ನಾರ್ತ್‌ನಲ್ಲೂ ಸಹ ಬಹುಬೇಡಿಕೆ ನಟಿಯಾಗಿದ್ದಾರೆ. ಆದರೆ ಆಕೆ ಕನ್ನಡ ಸಿನೆಮಾಗಳಿಂದ ದೂರವೇ ಉಳಿದಿದ್ದಾರೆ. ಇದೀಗ ರಕ್ಷಿತ್ ಶೆಟ್ಟಿ ಅಭಿನಯದ 777 ಚಾರ್ಲಿ ಎಂಬ ಸಿನೆಮಾಗೂ ಅತ್ಯುತ್ತಮ ಪ್ರಾದೇಶಿಕ ಚಿತ್ರ  ಅವಾರ್ಡ್ ಪಡೆದುಕೊಂಡಿದೆ. ಆದರೆ ರಶ್ಮಿಕಾ ಈ ಸಿನೆಮಾಗೆ ಶುಭಾಷಯ ಕೋರಿಲ್ಲ. ಇದರಿಂದ ರಶ್ಮಿಕಾ ವಿರುದ್ದ ಕನ್ನಡಿಗರು ಆಕೆಯ ವಿರುದ್ದ ಕಿಡಿಕಾರುತ್ತಿದ್ದಾರೆ.

ಕನ್ನಡತಿಯಾಗಿ ಕನ್ನಡ ಸಿನೆಮಾಗೆ ಶುಭ ಕೋರದ ರಶ್ಮಿಕಾ ವಿರುದ್ದ ಇಂಟರ್‍ ನೆಟ್ ನಲ್ಲಿ ಟ್ರೋಲ್ ಸಹ ಜೋರಾಗಿ ನಡೆಯುತ್ತಿದೆ. ಈ ಹಿಂದೆ ಸಹ ರಶ್ಮಿಕಾ ಮಂದಣ್ಣ ಕಾಂತಾರ ಸಿನೆಮಾ ನೋಡಿಲ್ಲ ಎಂದು ಹೇಳಿ ಟ್ರೋಲ್ ಗಳಿಗೆ ತುತ್ತಾಗಿದ್ದರು. ಇದೀಗ ಕನ್ನಡ ಸಿನೆಮಾಗೆ ಶುಭ ಕೋರದೇ ಮತ್ತೊಮ್ಮೆ ಕನ್ನಡಿಗರ ಆಕ್ರೋಷಕ್ಕೆ ಗುರಿಯಾಗಿದ್ದಾರೆ.

Most Popular

To Top