News

ಬೆಟ್ಟಿಂಗ್ ಜಾಹೀರಾತು ಪ್ರದರ್ಶನ ಮಾಡಿದರೇ ಕಠಿಣ ಕ್ರಮದ ಎಚ್ಚರಿಕೆ ನೀಡಿದ ಕೇಂದ್ರ……!

ಬೆಟ್ಟಿಂಗ್ ಜಾಹೀರಾತು ಪ್ರಸಾರದ ಬಗ್ಗೆ ಕೇಂದ್ರ ಸರ್ಕಾರ ಹೊಸದೊಂದು ನಿಯಮವನ್ನು ಹೊರಡಿಸಿದೆ. ಇನ್ನು ಮುಂದೆ ಬೆಟ್ಟಿಂಗ್ ಅಥವಾ ಜೂಜನ್ನು ಜಾಹೀರಾತುಗಳನ್ನು ಪ್ರತ್ಯಕ್ಷವಾಗಿ ಆಗಲಿ ಪರೋಕ್ಷವಾಗಿ ಆಗಲಿ ಪ್ರಸಾರ ಮಾಡಬಾರದೆಂದು ಕೇಂದ್ರ ಮಾಹಿತಿ ಮತ್ತು ಪ್ರಸರಣ ಸಚಿವಾಲಯದಿಂದ ಸೂಚನೆ ಬಂದಿದೆ. ಅದರಂಥೆ ಮುದ್ರ, ಟಿವಿ ಮಾದ್ಯಮಗಳ ಜೊತೆಗೆ ಸೋಷಿಯಲ್ ಮಿಡಿಯಾ ಹಾಗೂ ಜಾಹೀರಾತು ಸಂಸ್ಥೆಗಳಿಗೂ ಅನ್ವಯವಾಗುತ್ತದೆ. ಈ ಸೂಚನೆಯನ್ನು ಧಿಕ್ಕರಿಸಿದರೇ ಸೂಕ್ತ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಎಚ್ಚರಿಕೆ ಸಹ ನೀಡಿದೆ.

ಮಾಹಿತಿ ಮತ್ತು ಪ್ರಸರಣ ಸಚಿವಾಲಯ ಹೇಳಿದಂತೆ ಬೆಟ್ಟಿಂಗ್ ನಂತಹ ಜಾಹೀರಾತುಗಳಿಗೆ ಕಪ್ಪುಹಣ ಬಳಕೆಯಾಗುತ್ತಿರುವ ಸಾಧ್ಯತೆ ದಟ್ಟವಾಗಿದೆ. ಜೂಜಿನ ಆಪ್ ಗಳ ಬಳಕೆದಾರರಿಂದ ಸಂಗ್ರಹವಾದ ಹಣವನ್ನು ಏಜೆಂಟ್ ಗಳು ಭಾರತದಿಂದ ಹೊರಗೆ ಸಾಗಿಸುತ್ತಿರುವ ಘಟನೆಗಳು ಬೆಳಕಿಗೆ ಬಂದಿದೆ. ಹಣದ ಅಕ್ರಮ ವರ್ಗಾವಣೆ ಜೊತೆಗೆ ಅದರಿಂದ ಯುವಕರು ಹಾಗೂ ಮಕ್ಕಳ ಹಣಕಾಸು ಹಾಗೂ ಮಾನಸಿಕ ಪರಿಸ್ಥಿತಿಗಳೂ ಸಹ ಕೆಡುತ್ತಿವೆ ಎಂದು ಸಚಿವಾಲಯ ತಿಳಿಸಿದೆ.

ಇನ್ನೂ ಕ್ರಿಕೆಟ್ ಟೂರ್ನಿಮೆಂಟ್ ಸೇರಿದಂತೆ ವಿವಿಧ ಕ್ರೀಡಾಕೂಟಗಳ ಸಮಯದಲ್ಲೂ ಸಹ ಬೆಟ್ಟಿಂಗ್ ಹಾಗೂ ಜೂಜಿನ ಬಗ್ಗೆ ಜಾಹೀರಾತುಗಳು ನೇರವಾಗಿ ಹಾಗೂ ಪರೋಕ್ಷವಾಗಿ ಪ್ರಸಾರವಾಗುತ್ತಿದೆ. ಅದರಲ್ಲೂ ಕ್ರಿಕೆಟ್ ನಂತಹ ಪ್ರಮುಖ ಕ್ರೀಡಾ ಕೂಟಗಳಲ್ಲಿ ಬೆಟ್ಟಿಂಗ್ ನಂತಹ ಜಾಹಿರಾತುಗಳು ಹೆಚ್ಚಾಗುತ್ತಿದೆ. ಆನ್ ಲೈನ್ ಜಾಹೀರಾತು ಮಧ್ಯವರ್ತಿಗಳು ಭಾರತೀಯ ವೀಕ್ಷಕರಿಗೆ ಅಂತಹ ಜಾಹಿರಾತುಗಳನ್ನು ತಲುಪಿಸಬಾರದು.  ಬೆಟ್ಟಿಂಗ್ ಹಾಗೂ ಜೂಜಿನ ಪ್ಲಾಟ್ ಫಾರ್ಮ್‌ಗಳನ್ನು ಪ್ರಸಾರ ಮಾಡುವುದಾಗಲೀ ಅಥವಾ ಮುದ್ರಿಸುವುದಾಗಲಿ ಅಕ್ರಮ ಚಟುವಟಿಕೆಯಾಗಿದೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸರಣ ಸಚಿವಾಲಯ ತಿಳಿಸಿತ್ತು. ಇದೀಗ ಬೆಟ್ಟಿಂಗ್ ಜಾಹೀರಾತು ಪ್ರಸಾರ ಮಾಡಿದರೇ ಕಾನೂನು ರೀತ್ಯ ಕ್ರಮ ತೆಗೆದುಕೊಳ್ಳುವುದಾಗಿ ಸಚಿವಾಲಯ ತಿಳಿಸಿದೆ.

Most Popular

To Top