ಮದುವೆ ಪ್ರಪೋಸಲ್ ರಿಜೆಕ್ಟ್ ಮಾಡಿದ ಟಿ.ವಿ. ನಿರೂಪಕನನ್ನೇ ಕಿಡ್ನಾಪ್ ಮಾಡಿದ ಯುವತಿ? ಅಷ್ಟಕ್ಕೂ ಆಗಿದ್ದೇನು ಗೊತ್ತಾ?

Follow Us :

ಐದು ಸ್ಟಾರ್ಟಪ್ ಕಂಪನಿಗಳ ವ್ಯವಸ್ಥಾಪಕ ನಿರ್ದೇಶಕಿ ಭೋಗಿರೆಡ್ಡಿ ತ್ರಿಷಾ ಎಂಬಾಕೆ ಖ್ಯಾತ ಟಿ.ವಿ. ಆಂಕರ್‍ ಪ್ರಣವ್ ಸಿಸ್ತಲಾ ಎಂಬಾತನನ್ನು ಕಿಡ್ನಾಪ್ ಮಾಡಿದ್ದಾಳೆ. ಮದುವೆ ಪ್ರಪೋಸಲ್ ನಿರಾಕರಿಸಿದ್ದ ಎಂಬ ಕಾರಣದಿಂದ ಟಿ.ವಿ. ಆಂಕರ್‍ ನನ್ನು ಕಿಡ್ನಾಪ್ ಮಾಡಿದ್ದಾಳೆ. ಅಷ್ಟಕ್ಕೂ ಆತನನ್ನು ಕಿಡ್ನಾಪ್ ಮಾಡಲು ಕಾರಣವಾದರೂ ಏನು ಎಂಬ ವಿಚಾರಕ್ಕೆ ಬಂದರೇ,

ಸ್ಟಾರ್ಟಪ್ ಕಂಪನಿಯ ನಿರ್ದೇಶಕಿಯಾಗಿದ್ದ ಭೋಗಿರೆಡ್ಡಿ ತ್ರಿಷಾ ಹೈದರಾಬಾದ್ ಮೂಲದ ಉದ್ಯಮಿಯಾಗಿದ್ದು, ಮ್ಯಾಟ್ರಿಮೋನಿ ಯಲ್ಲಿ ರಿಜಿಸ್ಟರ್‍ ಮಾಡಿಕೊಂಡಿದ್ದಾಳೆ. ಟಿ.ವಿ.ಆಂಕರ್‍ ಪ್ರಣವ್ ಸಿಸ್ತಲಾ ಎಂಬುವವರನ್ನು ಆಕೆ ಮ್ಯಾಟ್ರಿಮೋನಿ ಸೈಟ್ ನಲ್ಲಿ ಹಿಂಬಾಲಿಸಿದ್ದಾಳೆ. ಆದರೆ ಅದೊಂದು ನಕಲಿ ಪ್ರೊಫೈಲ್ ಆಗಿತ್ತು. ಆತ ನಿಜಕ್ಕೂ ಪ್ರಣವ್ ಸಿಸ್ತಲಾ ಎಂದು ನಂಬಿ ನಕಲಿ ಪ್ರೊಫೈಲ್ ಕ್ರಿಯೇಟ್ ಮಾಡಿದ ವ್ಯಕ್ತಿಯ ಖಾತೆಗೆ ನಲವತ್ತು ಲಕ್ಷ ಸಹ ಪಾವತಿಸಿದ್ದಾಳಂತೆ. ಹಣ ಪಡೆದ ಬಳಿಕ ಆ ವ್ಯಕ್ತಿ ತನ್ನಿಂದ ತಪ್ಪಿಸಿಕೊಳ್ಳು ಆರಂಭಿಸಿದ್ದನಂತೆ. ಬಳಿಕ ಆಕೆ ವಂಚನೆಯಾಗಿರುವ ಬಗ್ಗೆ ಅರಿವಿಗೆ ಬಂದು, ಪ್ರೊಫೈಲ್ ನಲ್ಲಿ ನೀಡಲಾದ ಮೊಬೈಲ್ ಸಂಖ್ಯೆಯನ್ನು ಸಂಪರ್ಕ ಮಾಡಿದ್ದು. ಅದು ಖ್ಯಾತ ಆಂಕರ್‍ ಪ್ರಣವ್ ಸಿಸ್ತಲಾ ರವರದ್ದೇ ಆಗಿರುತ್ತದೆ. ಆದರೆ ಚೈತನ್ಯ ರೆಡ್ಡಿ ಎಂಬಾತ ಪ್ರಣವ್ ಪೊಟೋ ಬಳಸಿಕೊಂಡು ಭಾರತ್ ಮ್ಯಾಟ್ರಿಮೋನಿಯಲ್ಲಿ ನಕಲಿ ಖಾತೆ ಕ್ರಿಯೇಟ್ ಮಾಡಿದ್ದು ಈ ಬಗ್ಗೆ ಪ್ರಣವ್ ಸೈಬರ್‍ ಪೊಲೀಸರಿಗೆ ದೂರು ಸಹ ನೀಡಿದ್ದ ಎಂದು ಹೇಳಲಾಗಿದೆ.

ಬಳಿಕ ಇದೆಲ್ಲಾ ನಡೆದರೂ ಪ್ರಣವ್ ಮೇಲೆ ತ್ರಿಷಾಗೆ ಪ್ರೀತಿ ಮೂಡಿದೆ. ಈ ಕಾರಣದಿಂದ ಆತನಿಗೆ ಮತ್ತೆ ಆಕೆ ಕರೆ ಮಾಡಲು ಶುರು ಮಾಡಿದ್ದಾಲೆ. ಆದರೆ ಪ್ರಣವ್ ಆಕೆಯ ಪೋನ್ ನಂಬರ್‍ ಬ್ಲಾಕ್ ಮಾಡಿದ್ದಾನೆ. ಇದರಿಂದ ಆಕೆ ಕೋಪಗೊಂಡು ನಾಲ್ವರು ಕಿಡ್ನಾಪರ್‍ ಗಳನ್ನು ಬಾಡಿಗೆಗೆ ಪಡೆದುಕೊಂಡು ಆತನನ್ನು ಕಿಡ್ನಾಪ್ ಮಾಡಲು ಪ್ಲಾನ್ ಮಾಡಿದ್ದಾಳೆ. ಕಳೆದ ಫೆ.11 ರಂದು ನಾಲ್ವರು ಬಾಡಿಗೆ ಗೂಂಡಾಗಳು ಪ್ರಣವ್ ನನ್ನು ಅಪಹರಿಸಿ ಉದ್ಯಮಿಯ ಕಚೇರಿಗೆ ಕರೆದುಕೊಂಡು ಹೋಗಿ  ಚೆನ್ನಾಗಿ ಥಳಿಸಿದ್ದಾರೆ. ಇನ್ನು ಮುಂದ ತ್ರಿಷಾಳ ಎಲ್ಲಾ ಕರೆಗಳನ್ನು ಸ್ವೀಕರಿಸುವುದಾಗಿ ಒಪ್ಪಿಸಿದ್ದಾರೆ. ಬಳಿಕ ಪ್ರಣವ್ ನನ್ನು ಬಿಡುಗಡೆ ಮಾಡಿದ್ದಾರೆ. ಆದರೆ ಪ್ರಣವ್ ಪೊಲೀಸರಿಗೆ ದೂರು ನೀಡಿದ್ದು, ತ್ರಿಷಾ ಸೇರಿದಂತೆ ಐವರು ಸಹಚರರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.