Film News

ಸ್ಲಿಮ್ ಲುಕ್ ನಲ್ಲಿ ಕಾಣಸಿಕೊಂಡ ಕಾಂತಾರ ಬ್ಯೂಟಿ ಸಪ್ತಮಿ, ಸ್ಲಿಮ್ ಲುಕ್ ಕಂಡು ಶಾಕ್ ಆದ ಫ್ಯಾನ್ಸ್……!

ಕಳೆದೆರಡು ವರ್ಷಗಳ ಹಿಂದೆ ತೆರೆಕಂಡ ರಿಷಭ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ ಕಾಂತಾರ ಸಿನೆಮಾ ಈಗಾಗಲೇ ದೊಡ್ಡ ಕ್ರೇಜ್ ಪಡೆದುಕೊಂಡಿದ್ದು, ಬಾಕ್ಸ್ ಆಫೀಸ್ ನಲ್ಲಿ ಒಳ್ಳೆಯ ಕಲೆಕ್ಷನ್ ಮಾಡುತ್ತಿದೆ. ದೇಶದ ಅನೇಕ ಸಿನೆಮಾ ರಂಗಗಳ ಸೆಲೆಬ್ರೆಟಿಗಳಿಗೂ ಸಹ ಈ ಸಿನೆಮಾವನ್ನು ಮನಸಾರೆ ಹೊಗಳಿದ್ದಾರೆ. ಈ ಸಿನೆಮಾದ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್‍ ಆದ ಸಪ್ತಮಿ ಗೌಡ ಇದೀಗ ಬಹುಬೇಡಿಕೆ ನಟಿಯಾಗಿದ್ದಾರೆ. ಸೋಷಿಯಲ್ ಮಿಡಿಯಾದಲ್ಲೂ ಸಹ ಆಕ್ಟೀವ್ ಆಗಿರುವ ಸಪ್ತಮಿ ಇದೀಗ ಸ್ಲಿಮ್ ಲುಕ್ಸ್ ನಲ್ಲಿ ಕಾಣಿಸಿಕೊಂಡಿದ್ದು, ಆಕೆಯ ಪೊಟೋಗಳು ವೈರಲ್ ಆಗುತ್ತಿವೆ.

ಕಾಂತಾರ ಬ್ಯೂಟಿ ಸಪ್ತಮಿ ಗೌಡ ಪಾಪ್ ಕಾರ್ನ್ ಮಂಕಿ ಟೈಗರ್‍ ಎಂಬ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಸಪ್ತಮಿ ಗೌಡ ರಿಷಭ್ ಶೆಟ್ಟಿಯವರ ಕಾಂತಾರ ಸಿನೆಮಾದ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್‍ ಆದರು. ಕಾಂತಾರ ಸಿನೆಮಾದ ಬಳಿಕ ಸಪ್ತಮಿ ಗೌಡ ರವರಿಗೆ ಭಾರಿ ಆಫರ್‍ ಗಳು ಹುಡುಕಿಕೊಂಡು ಬರುತ್ತಿವೆ. ಈ ಹಾದಿಯಲ್ಲೇ ಆಕೆ ವಿವೇಕ್ ಅಗ್ನಿಹೋತ್ರಿ ರವರ ದಿ ವ್ಯಾಕ್ಸಿನ್ ವಾರ್‍ ಸಿನೆಮಾದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಇದರ ಜೊತೆಗೆ ಕಾಳಿ ಎಂಬ ಕನ್ನಡ ಸಿನೆಮಾದಲ್ಲಿ ಅಭಿಷೇಕ್ ಅಂಬರೀಶ್ ಜೊತೆಗೂ ನಟಿಸುತ್ತಿದ್ದಾರೆ. ಇನ್ನೂ ಸಾಲು ಸಾಲು ಸಿನೆಮಾಗಳ ನಡುವೆ ಸೋಷಿಯಲ್ ಮಿಡಿಯಾದಲ್ಲೂ ಸಹ ಬ್ಯುಸಿಯಾಗಿದ್ದಾರೆ. ಬ್ಯಾಕ್ ಟು ಬ್ಯಾಕ್ ಪೊಟೋಶೂಟ್ಸ್ ಮೂಲಕ ಎಲ್ಲರ ನಿದ್ದೆಗೆಡಿಸುತ್ತಿರುತ್ತಾರೆ. ಇದೀಗ ಆಕೆ ಸ್ಲಿಮ್ ಲುಕ್ಸ್ ನಲ್ಲಿ ಕಾಣಸಿಕೊಂಡಿದ್ದು, ಅಭಿಮಾನಿಗಳು ಶಾಕ್ ಆಗಿದ್ದಾರೆ.

ನಟಿ ಸಪ್ತಮಿ ಗೌಡ ಸಹ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ಆಕ್ಟೀವ್ ಆಗಿದ್ದು, ಬ್ಯಾಕ್ ಟು ಬ್ಯಾಕ್ ಪೋಸ್ಟ್ ಗಳ ಮೂಲಕ ಅಭಿಮಾನಿಗಳೊಂದಿಗೆ ಟಚ್ ನಲ್ಲೇ ಇರುತ್ತಾರೆ. ಇದೀಗ ಆಕೆ ಸ್ಟೈಲಿಷ್ ಪೊಟೋಗಳನ್ನು ಹಂಚಿಕೊಂಡಿದ್ದಾರೆ. ಬ್ಲಾಕ್ ಟಾಪ್ ಹಾಗೂ ಪ್ಯಾಂಟ್ ನಲ್ಲಿ ಆಕೆ ಕಾಣಿಸಿಕೊಂಡಿದ್ದಾರೆ. ಈ ಪೊಟೋಗಳಲ್ಲಿ ಆಕೆ ತುಂಬಾ ಮುದ್ದಾಗಿ ಸಹ ಕಾಣಿಸಿಕೊಂಡಿದ್ದಾರೆ. ಆದರೆ ಮೊದಲಿಗಿಂತ ಆಕೆ ತುಂಬಾ ಸ್ಲಿಮ್ ಆಗಿ ಕಾಣಿಸಿಕೊಂಡಿದ್ದು, ಅಭಿಮಾನಿಗಳು ಹಾಗೂ ನೆಟ್ಟಿಗರು ಶಾಕ್ ಆಗಿದ್ದಾರೆ. ಜೊತೆಗೆ ಆಕೆಯ ಪೊಟೋಗಳಿಗೆ ವಿವಿಧ ರೀತಿಯ ಕಾಮೆಂಟ್ ಗಳನ್ನು ಸಹ ಹರಿಬಿಡುತ್ತಿದ್ದಾರೆ. ಸೂಪರ, ಪ್ರೆಟ್ಟಿ, ಕ್ಯೂಟ್ ಎಂಬೆಲ್ಲಾ ಕಾಮೆಂಟ್ ಗಳ ಜೊತೆಗೆ ಹಾರ್ಟ್ ಎಮೋಜಿ, ಫೈರಿಂಗ್ ಎಮೋಜಿಗಳನ್ನು ಹರಿಬಿಡುತ್ತಿದ್ದಾರೆ.

ಕಾಂತಾರ ಸಿನೆಮಾದ ಬಳಿಕ ಸಪ್ತಮಿಗೌಡ ಕ್ರೇಜ್ ಹೆಚ್ಚಾಯ್ತು ಎಂದು ಹೇಳಬಹುದಾಗಿದೆ. ಬಳಿಕ ಬಾಲಿವುಡ್ ದಿ ವ್ಯಾಕ್ಸಿನ್ ವಾರ್‍ ಎಂಬ ಸಿನೆಮಾದಲ್ಲೂ ಸಹ ನಟಿಸಿದ್ದರು. ಈ ಸಿನೆಮಾ ಅಂದುಕೊಂಡಷ್ಟು ಸಕ್ಸಸ್ ಕಾಣಲಿಲ್ಲ ಎಂದೇ ಹೇಳಬಹುದು. ಆಕೆಗೆ ಸಿನೆಮಾ ಅವಕಾಶಗಳು ಹೆಚ್ಚಾಗಿ ಬರುತ್ತಿದ್ದರು. ಆಕೆ ಅಳೆದು ತೂಗಿ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ.

Most Popular

To Top