Film News

ಹಣೆಗೆ ಬೊಟ್ಟು ಇಟ್ಟು ಪೋಸ್ ಕೊಟ್ಟ ಶಾರುಖ್ ಪುತ್ರಿ ಸುಹಾನಾ, ಕೆಂಪು ಸೀರೆಯಲ್ಲಿ ಟ್ರೆಡಿಷನಲ್ ಲುಕ್ಸ್ ಕೊಟ್ಟ ಸುಹಾನಾ ಪೊಟೋ ವೈರಲ್….!

ಬಾಲಿವುಡ್ ಬಾದ್ ಷಾ ಶಾರುಖ್ ಖಾನ್ ರವರಂತೆ ಅವರ ಪುತ್ರಿ ಸುಹಾನಾ ಖಾನ್ ಸಹ ತುಂಬಾನೆ ಫೇಮಸ್ ಆಗಿದ್ದಾರೆ. ಸಿನಿರಂಗಕ್ಕೆ ಇನ್ನೂ ಎಂಟ್ರಿ ಕೊಡುವುದಕ್ಕೂ ಮುಂಚೆಯೇ ಆಕೆ ಸಿಕ್ಕಾಪಟ್ಟೆ ಫೇಮಸ್ ಆಗಿದ್ದಾರೆ. ಆಕೆಯ ಮೇಲೆ ಬಾಲಿವುಡ್ ಸಿನಿರಂಗದ ಸಹ ತುಂಬಾನೆ ಕಣ್ಣಿಟ್ಟಿದೆ. ಆಕೆಗೆ ಸಂಬಂಧಿಸಿದ ಅನೇಕ ವಿಚಾರಗಳು ಸೋಷಿಯಲ್ ಮಿಡಿಯಾದಲ್ಲಿ ಹರಿದಾಡುತ್ತಲೇ ಇರುತ್ತದೆ. ಅದರಲ್ಲೂ ಆಕೆಯ ಪೊಟೋಗಳಂತೂ ಕಡಿಮೆ ಸಮಯದಲ್ಲೇ ಸಖತ್ ವೈರಲ್ ಆಗುತ್ತಿರುತ್ತದೆ. ಇದೀಗ ಟ್ರೆಡಿಷನಲ್ ಆಗಿ ಕಾಣಿಸಿಕೊಂಡು ಎಲ್ಲರ ಗಮನ ಸೆಳೆದಿದ್ದಾರೆ. ಆಕೆಯ ಈ ಪೊಟೋಗಳು ಸಖತ್ ವೈರಲ್ ಆಗುತ್ತಿವೆ.

ಶಾರುಖ್ ಪುತ್ರಿ ಸುಹಾನಾ ಖಾನ್ ಸೋಷಿಯಲ್ ಮಿಡಿಯಾದಲ್ಲಿ ಸ್ಟಾರ್‍ ಆಗಿದ್ದಾರೆ. ಸಿನೆಮಾಗಳಲ್ಲಿ ಎಂಟ್ರಿ ಕೊಡುವುದಕ್ಕೂ ಮುಂಚೆಯೇ ಆಕೆ ಸ್ಟಾರ್‍ ನಟಿಯರಂತೆ ಫೇಂ ಪಡೆದುಕೊಂಡಿದ್ದಾರೆ. ಇನ್ನೂ ಶಾರುಖ್ ಖಾನ್ ಗೆ ಆರ್ಯನ್ ಖಾನ್ ಹಾಗೂ ಸುಹಾನಾ ಖಾನ್ ಇಬ್ಬರು ಮಕ್ಕಳಿದ್ದಾರೆ. ಸುಹಾನಾ ಖಾನ್ ದಿ ಆರ್ಚೆಸ್ ಎಂಬ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದು, ಈ ಸಿನೆಮಾ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಇನ್ನೂ ಸುಹಾನಾ ಸಿನೆಮಾಗಳಲ್ಲಿ ಫೇಂ ಪಡೆದುಕೊಳ್ಳುವುದಕ್ಕೂ ಮುಂಚೆ ಸೋಷಿಯಲ್ ಮಿಡಿಯಾದಲ್ಲಂತೂ ಸ್ಟಾರ್‌ ಆಗಿಬಿಟ್ಟಿದ್ದಾರೆ ಎಂದು ಹೇಳಬಹುದಾಗಿದೆ. ಆಕೆ ತನ್ನ ಇನ್ಸ್ಟಾ ಖಾತೆಯಲ್ಲಿ ಬರೊಬ್ಬರಿ 39 ಲಕ್ಷಕ್ಕೂ ಅಧಿಕ ಮಂದಿ ಫಾಲೋವರ್ಸ್ ಹೊಂದಿದ್ದಾರೆ. ಸೊಷಿಯಲ್ ಮಿಡಿಯಾದಲ್ಲಿ ಆಕೆ ಸ್ಟಾರ್‍ ಹಿರೋಯಿನ್ ಗಳಿಗೂ ಕಡಿಮೆಯಿಲ್ಲ ಎಂಬಂತೆ ಬ್ಲಾಸ್ಟಿಂಗ್ ಪೋಸ್ ಗಳ ಮೂಲಕ ಎಲ್ಲರನ್ನೂ ರಂಜಿಸುತ್ತಿರುತ್ತಾರೆ. ಈ ಹಾದಿಯಲ್ಲೆ ಆಕೆಯ ಲೇಟೆಸ್ಟ್ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.

ಇದೀಗ ಸುಹಾನಾ ಖಾನ್ ಕೆಂಪು ಸೀರೆಯನ್ನುಟ್ಟು, ಹಣೆಗೆ ಬಿಂದಿ ಇಟ್ಟು ಕಾಣಿಸಿಕೊಂಡಿದ್ದಾರೆ. ತನ್ನ ಸ್ನೇಹಿತರೊಂದಿಗೆ ಪೊಟೋಗೆ ಪೋಸ್ ಕೊಟ್ಟಿದ್ದಾರೆ. ಸದ ಮಾಡ್ರನ್ ಲುಕ್ಸ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದ ಸುಹಾನಾ ಇದೀಗ ಮೊದಲ ಬಾರಿಗೆ ಟ್ರೆಡಿಷನಲ್ ಆಗಿ ಕಾಣಿಸಿಕೊಂಡಿದ್ದು, ಅಭಿಮಾನಿಗಳು ಫಿದಾ ಆಗಿದ್ದಾರೆ. ಈ ಪೊಟೋವನ್ನು ಆಕೆ ತನ್ನ ಇನ್ಸ್ಟಾ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ. ಈ ಪೋಸ್ಟ್ ಬಂದ ಕಡಿಮೆ ಸಮಯದಲ್ಲೇ ಪುಲ್ ವೈರಲ್ ಆಗುತ್ತಿದೆ. ಅನೇಕ ಅಂತರಾಷ್ಟ್ರೀಯ ಬ್ರಾಂಡ್ ಗಳಿಗೆ ಅಂಬಾಸಿಡರ್‍ ಆಗಿರುವ ಸುಹಾನಾ ಖಾನ್ ಟ್ರೆಡಿಷನಲ್ ಆಗಿಯೂ ಸಹ ತುಂಬಾ ಚೆನ್ನಾಗಿ ಕಾಣಿಸಿಕೊಂಡಿದ್ದಾರೆ. ಇನ್ನೂ ಸುಹಾನಾ ಖಾನ್ ಲೇಟೆಸ್ಟ್ ಪೊಟೋ ನೋಡಿದ ನೆಟ್ಟಿಗರೂ ಸೇರಿದಂತೆ ಆಕೆಯ ಫಾಲೋವರ್ಸ್ ವಿವಿಧ ರೀತಿಯ ಕಾಮೆಂಟ್ ಗಳ ಮೂಲಕ ಮೆಚ್ಚುಗೆ ಸೂಚಿಸುತ್ತಿದ್ದಾರೆ.

ಇನ್ನೂ ಸುಹಾನಾ ಖಾನ್ ರನ್ನು ಸಹ ಸಿನೆಮಾಗಳಲ್ಲಿ ನೋಡಲು ಆಕೆಯ ಅಭಿಮಾನಿಗಳು ಕಾಯುತ್ತಿದ್ದು, ದಿ ಆರ್ಚೇಸ್ ಸಿನೆಮಾದ ಮೂಲಕ ಅಭಿಮಾನಿಗಳ ಆಸೆ ಪೂರೈಸಲಿದ್ದಾರೆ. ಇನ್ನೂ ಆಕೆ ಸದಾ ಹಾಟ್ ಪೊಟೋಗಳ ಮೂಲಕ ಕಾಣಿಸಿಕೊಳ್ಳುತ್ತಿರುತ್ತಾರೆ. ಆಕೆ ಧರಿಸುವ ಬಟ್ಟೆಗಳ ಕಾರಣದಿಂದ ಅನೇಕ ಬಾರಿ ಟ್ರೋಲ್ ಸಹ ಆಗುತ್ತಿರುತ್ತಾರೆ.

Most Popular

To Top