ಪೋರ್ನ್ ಸಿನೆಮಾಗಳಲ್ಲಿ ನಟಿಸಿದ ಬಗ್ಗೆ ರಿಯಾಕ್ಟ್ ಆದ ಸನ್ನಿ ಲಿಯೋನ್, ಹಳೆಯ ನೆನಪುಗಳನ್ನು ಮೆಲುಕು ಹಾಕಿದ ಶೃಂಗಾರ ತಾರೆ……!

Follow Us :

ಒಂದು ಕಾಲದಲ್ಲಿ ಬಾಲಿವುಡ್ ವಲಯವನ್ನು ತನ್ನ ನೃತ್ಯದ ಮೂಲಕ ಶೇಕ್ ಮಾಡಿದಂತಹ ನಟಿ ಹಾಟ್ ಬಾಂಬ್ ಶೃಂಗಾರ ತಾರೆ ಸನ್ನಿಲಿಯೋನ್ ಸಹ ಒಬ್ಬರಾಗಿದ್ದಾರೆ. ಇನ್ನೂ ಸನ್ನಿ ಬಾಲಿವುಡ್ ಅಂಗಳಕ್ಕೆ ಕಾಲಿಟ್ಟು ಸುಮಾರು ವರ್ಷಗಳು ಕಳೆದಿದೆ. ಬಾಲಿವುಡ್ ನಲ್ಲಿ ಅನೇಕ ಸಿನೆಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಮೊದಲಿಗೆ ಪೋರ್ನ್ ಸಿನೆಮಾಗಳಲ್ಲಿ ನಟಿಸಿದ್ದ ಸನ್ನಿ ಇದೀಗ ಅದನ್ನೆಲ್ಲಾ ಬಿಟ್ಟು ಸೌತ್ ಅಂಡ್ ನಾರ್ತ್‌ನಲ್ಲಿ ಸಿನೆಮಾಗಳಲ್ಲಿ ನಟಿಸುತ್ತಾ ಕೆರಿಯರ್‍ ಸಾಗಿಸುತ್ತಿದ್ದಾರೆ. ಇದೀಗ ಆಕೆ ಪೋರ್ನ್ ಸಿನೆಮಾಗಳಲ್ಲಿ ನಟಿಸಿದ್ದರ ಬಗ್ಗೆ ಕೆಲವೊಂದು ಕಾಮೆಂಟ್ಸ್ ಮಾಡಿದ್ದಾರೆ.

ಲಂಡನ್ ನಲ್ಲಿ ಹುಟ್ಟಿ ಬೆಳೆದಂತಹ ಸನ್ನಿ ಲಿಯೋನ್ ಮೊದಲಿಗೆ ಅಶ್ಲೀಲ ಸಿನೆಮಾಗಳಲ್ಲಿ ನಟಿಸಿದ್ದರು. ಬಳಿಕ 2012 ರಿಂದ ಅಂತಹ ಸಿನೆಮಾಗಳಿಂದ ದೂರವಾಗಿ ಹಿಂದಿ ಸಿನೆಮಾಗಳು ಹಾಗೂ ಕೆಲವೊಂದು ಸಿನೆಮಾಗಳಲ್ಲಿ ಐಟಂ ಸಾಂಗ್ಸ್ ಮೂಲಕ ಬೇಡಿಕೆ ಹೆಚ್ಚಿಸಿಕೊಂಡರು. ಅದರಲ್ಲೂ 2011 ರ ಸಮಯದಲ್ಲಿ ಬಿಗ್ ಬಾಸ್ ಶೋ 5 ನೇ ಸೀಸನ್ ನಲ್ಲಿ ಸನ್ನಿ ಸಹ ಭಾಗಿಯಾಗಿ ಇಡೀ ದೇಶದ ಗಮನ ಸೆಳೆದರು. ಆಗಾಗಲೇ ಆಕೆಯ ವಿರುದ್ದ ಇಂಡಿಯಾದಲ್ಲಿ ತುಂಬಾ ವಿರೋದಗಳೂ ಸಹ ಇತ್ತು. ಆಕೆ ಇಂಡಿಯಾಗೆ ಬಂದರೇ ಸಾಯಿಸುತ್ತೇವೆ ಎಂಬ ಬೆದರಿಕೆಗಳೂ ಸಹ ಬಂದಿತ್ತಂತೆ. ಈ ಬಗ್ಗೆ ಸನ್ನಿ ಅನೇಕ ಬಾರಿ ಹೇಳಿಕೊಂಡಿದ್ದಾರೆ. ಆದರೆ ಬಿಗ್ ಬಾಸ್ ಶೋ ನಿರ್ವಾಹಕರು ಆಕೆಯನ್ನು ಬಲವಂತ ಮಾಡಿ ಶೋ ಗೆ ಕರೆತಂದರು. ಈ ಶೋ ಬಳಿಕ ಆಕೆ ಲಂಡನ್ ಗೆ ವಾಪಸ್ಸಾದರು.

ಈ ಶೋ ಬಳಿಕ ಆಕೆಯ ಕೆರಿಯರ್‍ ಬದಲಾಯ್ತು ಎಂದು ಹೇಳಬಹುದು. ಬಳಿಕ ಅಶ್ಲೀಲ ಸಿನೆಮಾಗಳಲ್ಲಿ ನಟಿಸುವುದನ್ನು ಬಿಟ್ಟುಬಿಟ್ಟರು. ಬಳಿಕ ಆಕೆ ಜಿಸ್ಮ 2 ಎಂಬ ಹಿಂದಿ ಸಿನೆಮಾದ ಮೂಲಕ ಬಾಲಿವುಡ್ ಅಂಗಳಕ್ಕೆ ಕಾಲಿಟ್ಟರು. ಈ ಸಿನೆಮಾದ ಬಳಿಕ ಆಕೆ ಕನ್ನಡ, ಹಿಂದಿ, ತಮಿಳು, ತೆಲುಗು ಹಾಗೂ ಮಲಯಾಳಂ ಸಿನೆಮಾಗಳಲ್ಲಿ ನಟಿಸಲು ಶುರು ಮಾಡಿದರು. ಇನ್ನು ಇತ್ತಿಚಿಗೆ ನಡೆದಂತಹ ಸಂದರ್ಶನವೊಂದರಲ್ಲಿ ಸನ್ನಿ ಲಿಯೋನಿ ಕೆಲವೊಂದು ಇಂಟ್ರಸ್ಟಿಂಗ್ ಕಾಮೆಂಟ್ಸ್ ಮಾಡಿದ್ದಾರೆ. ಆಕೆ ಅಡಲ್ಟ್ ಸಿನೆಮಾ ಇಂಡಸ್ಟ್ರಿಗಳ ಪೈಕಿ ಅತ್ಯುತ್ತಮ್ಮ ಕಂಪನಿಗಳಲ್ಲಿ ಕೆಲಸ ಮಾಡಿದ್ದಾಗಿ ಹೇಳಿದ್ದಾರೆ. ಜೊತೆಗೆ ಉದಾಹರಣೆಯಾಗಿ ಬಾಲಿವುಡ್ ಕರಣ್ ಜೋಹರ್‍ ರವರ ಧರ್ಮ ಪ್ರೊಡಕ್ಷನ್ ಹಾಗೂ ಆದಿತ್ಯ ಚೋಪ್ರಾ ರವರ ಯಶ್ ರಾಜ್ ಫಿಲಂಸ್ ಸಂಸ್ಥೆಗಳಿಗೆ ಹೋಲಿಕೆ ಮಾಡಿದ್ದಾರೆ. ಇನ್ನೂ ಶೃಂಗಾರ ತಾರೆಯಾಗಿ ನಾನು ತುಂಬಾನೆ ಕಷ್ಟಪಟ್ಟು ಕೆಲಸ ಮಾಡಿದೆ. ನನ್ನನ್ನು ನೇಮಿಸಿಕೊಂಡ ಕಂಪನಿಗಳು ಕೋರಿದ್ದು, ನನ್ನಿಂದ ಪಡೆದುಕೊಂಡರು. ಆಗಲೇ ನನಗೆ ಅಪಾರ ಸಂಖ್ಯೆಯ ಅಭಿಮಾನಿಗಳಿದ್ದರು. ಅವರಗಾಗಿಯೇ ನಾನು ಶೃಂಗಾರ ಸನ್ನಿವೇಶಗಳಲ್ಲಿ ನಟಿಸಬೇಕೆಂದು ನಿರ್ಣಯ ತೆಗೆದುಕೊಂಡಿದ್ದೆ.

ಜೊತೆಗೆ ಆ ಸಮಯದಲ್ಲಿ ನಾನು ಆರ್ಥಿಕವಾಗಿ ಸಹ ಚೆನ್ನಾಗಿರಲಿಲ್ಲ. ಆದರೆ ಇಂಡಿಯಾದಲ್ಲಿ ಬಿಗ್ ಬಾಸ್ ಸೀಸನ್ ನಲ್ಲಿ ಭಾಗಿಯಾದ ಬಳಿಕ ನನ್ನ ಜೀವನ ಬದಲಾಯಿತು. ಇಲ್ಲಿ ಯಾರೂ ಸಹ ನನಗೆ ಅಡಲ್ಟ್ ಸೀನ್ ಗಳನ್ನು ಮಾಡ್ತೀರಾ ಎಂದು ಯಾರೂ ಸಹ ಕೇಳಲಿಲ್ಲ. ಎಲ್ಲ ಒಳ್ಳೆಯ ಅವಕಾಶಗಳು ಬಂವು. ಆದ್ದರಿಂದ ಪೋರ್ನ್ ಸಿನೆಮಾಗಳಿಗೆ ಗುಡ್ ಬೈ ಹೇಳಿ ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದೇನೆ ಎಂದು ಕೆಲವೊಂದು ವಿಚಾರಗಳನ್ನು ಹಂಚಿಕೊಂಡಿದ್ದಾರೆ.