ನನ್ನ ಜೀವನ, ನನ್ನ ಇಷ್ಟ, ನಿಮಗ್ಯಾಕೋ ನೋವು ಎಂದ ಸ್ಟಾರ್ ಕಿಡ್ ಮಂಚು ಲಕ್ಷ್ಮೀ, ರೂಮರ್ ಗಳ ಬಗ್ಗೆ ಫೈರ್ ಆದ ನಟಿ……!

Follow Us :

ತೆಲುಗು ಸಿನಿರಂಗದ ದೊಡ್ಡ ಕುಟುಂಬಗಳಲ್ಲಿ ಒಂದಾದ ಮಂಚು ಕುಟುಂಬದ ಬಗ್ಗೆ ಅತೀ ಹೆಚ್ಚು ಟ್ರೋಲ್ ಗಳಾಗುತ್ತಿರುತ್ತವೆ. ಅದರಲ್ಲೂ ಮೋಹನ್ ಬಾಬು ರವರ ಸಂತಾನವಾದ ವಿಷ್ಣು, ಲಕ್ಷ್ಮೀ ಬಗ್ಗೆ ಮಾತ್ರ ತುಂಬಾನೆ ಟ್ರೋಲ್ ಗಳು ಬರುತ್ತಿರುತ್ತವೆ. ಟ್ರೋಲರ್‍ ಗಳ ಬಗ್ಗೆ ಅವರು ಅನೇಕ ಬಾರಿ ಕಠಿಣವಾಗಿ ಎಚ್ಚರಿಕೆಗಳನ್ನು ಕೊಟ್ಟರೂ ಸಹ ಟ್ರೋಲರ್‍ ಗಳು ಮಾತ್ರ ಟ್ರೋಲ್ ಮಾಡುವುದು ಬಿಟ್ಟಿಲ್ಲ. ಇದೀಗ ಲಕ್ಷ್ಮೀ ಮತ್ತೊಮ್ಮೆ ಟ್ರೊಲರ್‍ ಗಳ ವಿರುದ್ದ ಗುಡುಗಿದ್ದು, ನನ್ನ ಜೀವನ ನನ್ನ ಇಷ್ಟ ನಿಮಗೇಕೆ ನೋವು ಎಂದು ಸ್ಟ್ರಾಂಗ್ ಆಗಿ ರಿಯಾಕ್ಟ್ ಆಗಿದ್ದಾರೆ. ಈ ಸಂಬಂಧ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.

ಮಂಚು ಲಕ್ಷ್ಮೀ ವಿಮಾನ ನಿಲ್ದಾಣದಲ್ಲಿ ಕಾರ್ಪೆಟ್ಸ್ ಶುಭ್ರವಾಗಿಲ್ಲ. ಬ್ಯುಸಿನೆಸ್ ಕ್ಲಾಸ್ ನಲ್ಲೂ ಸಹ ಕಾರ್ಪೆಟ್ಸ್ ಅಷ್ಟೊಂದು ದಾರುಣವಾಗಿರಬೇಕಾ, ನನ್ನ ಐ ಪೋನ್ ಆ ಕಾರ್ಪೆಟ್ಸ್ ಗಳನ್ನು ನೈಜತೆಗಿಂತ ಕೊಂಚ ಬೆಟರ್‍ ಆಗಿಯೇ ತೋರಿಸಿದೆ. ಹೇಳಬೇಕಾದರೇ ಅವು ತುಂಬಾ ಅಶುಭ್ರವಾಗಿದೆ. ಶುಭ್ರತೆ ನಮ್ಮ ಹಕ್ಕು ಎಂದು ವಿಡಿಯೋ ಪೋಸ್ಟ್ ಮಾಡಿದ್ದರು. ಈ ವಿಡಿಯೋ ಗೆ ನೆಟ್ಟಿಗರು ವಿವಿಧ ರೀತಿಯ ಕಾಮೆಂಟ್ ಗಳ ಮೂಲಕ ಟ್ರೋಲ್ ಮಾಡಿದ್ದರು. ನೀನು ಬ್ಯುಸಿನೆಸ್ ಕ್ಲಾಸ್ ನಲ್ಲಿ ಪ್ರಯಾಣ ಮಾಡುತ್ತೀಯಾ, ಐಪೊನ್ ಬಳಸುತ್ತೀಯಾ ಎಂದು ನಮಗೆ ತಿಳಿಯಬೇಕೆ? ನಿನ್ನ ಬಳಿ ಹಣ ಇದೆ, ಹೇಗಾದರೂ ಎಂಜಾಯ್ ಮಾಡುತ್ತೀಯಾ ಎಂದು ನೆಗೆಟೀವ್ ಕಾಮೆಂಟ್ಸ್ ಹೊರಬಂದಿದ್ದವು. ಈ ಟ್ರೋಲ್ ಗಳ ವಿರುದ್ದ ಇದೀಗ ಮಂಚು ಲಕ್ಷ್ಮೀ ಗುಡುಗುತ್ತಾ ವಿಡಿಯೋ ಹಂಚಿಕೊಂಡಿದ್ದಾರೆ.

ಈ ಟ್ರೋಲರ್‍ ಗಳಿಗೆ ಕೌಂಟರ್‍ ಕೊಡುತ್ತಾ, ನಾನು ಬ್ಯುಸಿನೆಸ್ ಕ್ಲಾಸ್ ನಲ್ಲಿ ತಿರುಗಾಡುತ್ತೇನೆ, ಐಪೋನ್ ಬಳಸುತ್ತೇನೆ. ಅದನ್ನು ಕೆಳೋಕೆ  ನಿನ್ಯಾರು. ನೀನೇದಾರೂ ನನಗೆ ಹಣ ಕೊಡುತ್ತೀಯಾ, ನಾನು ಕಷ್ಟಪಟ್ಟು ಸಂಪಾದನೆ ಮಾಡುವ ಹಣದಿಂದ ಎಂಜಾಯ್ ಮಾಡುತ್ತಿದ್ದೇನೆ. ನಿಮಗೆ ಬಯಕೆಗಳು ಇರುವುದಿಲ್ಲವೇ, ನನಗೆ ಪ್ರವೈಟ್ ಜೆಟ್ ಇದ್ದರೇ ಚೆನ್ನಾಗಿರುತ್ತದೆ ಎಂದು ನಿಮಗೂ ಸಹ ಕೋರಿಕೆ ಇರುವುದಿಲ್ಲ. ನನಗೆ ಹಣ ಅಪ್ಪ ಅಮ್ಮ ಕೊಡುವುದಿಲ್ಲ. ಚಿಕ್ಕಂದಿನಿಂದಲೇ ನನ್ನನ್ನು ಅದೇ ರೀತಿ ಬೆಳೆಸಿದ್ದಾರೆ. ನಾನು ಎಂಜಾಯ್ ಮಾಡುವ ಪ್ರತಿ ರೂಪಾಯಿ ನನ್ನ ಕಷ್ಟ. ನಾನು ಹಣವಂತರ ಕುಟುಂಬದಲ್ಲಿ ಹುಟ್ಟಿದ್ದೇನೆ. ಅಂತಹ ನಾನು ಅಮೇರಿಕಾದಲ್ಲಿ ಊಟಕ್ಕೂ ಸಹ ಸಮಸ್ಯೆ ಅನುಭವಿಸಿದ್ದೆ. ಹಣ ಸಂತೋಷ ಕೊಡೊಲ್ಲ, ಕೇವಲ ಫ್ರೀಡಂ ಕೊಡುತ್ತೆ ಅಷ್ಟೆ ಎಂದಿದ್ದಾರೆ.

ಜೊತೆಗೆ ನನ್ನ ಮನೆ, ಮಕ್ಕಳನ್ನೂ  ನೋಡಿಕೊಳ್ಳುತ್ತಾ, ಪಾತ್ರೆ ತೊಳೆಯುತ್ತಾ ಬದುಕಿರಬೇಕಾ? ಹೆಂಗಸರು ಏನು ಮಾಡಿದರೂ ತಪ್ಪೇನಾ, ನಮಗೂ ಕೆರಿಯರ್‍ ಇರಬಾರದೇ, ಹೆಂಗಸರು ಈ ಕೆಲಸ ಮಾಡುವುದು ತಪ್ಪಲ್ಲ. ಯಾರ ಕೆರಿಯರ್‍ ನಲ್ಲಿ ಅವರು ಬೆಳೆದರೇ ತಪ್ಪೇನು. ಜೀವನ ತುಂಬಾ ಚಿಕ್ಕದು. ಕತ್ತಲಲ್ಲಿ ಮುಗಿಯುತ್ತದೆ. ಒಬ್ಬರಿಗಾಗಿ ಬದುಕಬೇಡ. ನಿನಗೆ ಇಷ್ಟ ಬಂದಂತೆ ನೀನು ಬದುಕು ಎಂದು ವಿಡಿಯೋ ಮೂಲಕ ಹೇಳಿದ್ದಾರೆ. ಇನ್ನೂ ಆಕೆ ಅಭಿನಯದ ಅಗ್ನಿ ನಕ್ಷತ್ರ ಸಿನೆಮಾದ ಶೂಟಿಂಗ್ ಪೂರ್ಣಗೊಂಡಿದ್ದು, ಶೀಘ್ರದಲ್ಲೇ ಬಿಡುಗಡೆಯಾಗಲಿದೆ.