ಕೆಜಿಎಫ್ ಬ್ಯೂಟಿ ಶ್ರೀನಿಧಿ ಶೆಟ್ಟಿ ಲೇಟೆಸ್ಟ್ ಪೊಟೋಶೂಟ್ಸ್ ವೈರಲ್, ಸಿಲ್ವರ್ ಕಲರ್ ಸೀರೆಯಲ್ಲಿ ಸ್ಟನ್ನಿಂಗ್ ಲುಕ್ಸ್ ಕೊಟ್ಟ ಬ್ಯೂಟಿ……!

Follow Us :

ಇಡೀ ವಿಶ್ವವನ್ನೇ ಕನ್ನಡ ಸಿನಿರಂಗದ ಕಡೆ ಮುಖ ಮಾಡಿ ನೋಡಿದಂತೆ ಮಾಡಿದ ಸಿನೆಮಾ ಕೆಜಿಎಫ್ ಮೂಲಕ ಅನೇಕರು ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ಫೇಂ ಪಡೆದುಕೊಂಡರು. ಈ ಸಿನೆಮಾದ ಮೂಲಕ ನಟಿ ಶ್ರೀನಿಧಿ ಶೆಟ್ಟಿ ಭಾರಿ ಕ್ರೇಜ್ ಪಡೆದುಕೊಂಡರು. ಈ ಸಿನೆಮಾದಲ್ಲಿ ಆಕೆಯ ಪಾತ್ರ ಕಡಿಮೆಯಾಗಿದ್ದರೂ ಸಹ ತೆರೆಯ ಮೇಲೆ ಇದ್ದಷ್ಟು ಸಮಯ ಪ್ರೇಕ್ಷಕರನ್ನು ರಂಜಿಸಿ ಒಳ್ಳೆಯ ಮಾರ್ಕ್ಸ್ ಪಡೆದುಕೊಂಡರು. ಇದೀಗ ಆಕೆ ಸೋಷಿಯಲ್ ಮಿಡಿಯಾದಲ್ಲೂ ಸಹ ಸಖತ್ ಸದ್ದು ಮಾಡುತ್ತಿದ್ದಾರೆ. ಇದೀಗ ಆಕೆ ಹಂಚಿಕೊಂಡ ಲೇಟೆಸ್ಟ್ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ.

ಯಂಗ್ ಬ್ಯೂಟಿ ಶ್ರೀನಿಧಿ ಕೆಜಿಎಫ್ ಸಿನೆಮಾದ ಮೂಲಕ ರಾಷ್ಟ್ರಮಟ್ಟದಲ್ಲಿ ಗುರ್ತಿಸಿಕೊಂಡರು. ಕೆಜಿಎಫ್ ಸಿನೆಮಾದಲ್ಲಿ ಆಕೆಯ ಪಾತ್ರ ಕಡಿಮೆಯಿದ್ದರೂ ಸಹ ಸಿಕ್ಕ ಅವಕಾಶವನ್ನು ಸಮರ್ಪಕವಾಗಿ ಬಳಸಿಕೊಂಡರು. ಆಕೆಗೆ ಸಿಕ್ಕ ದೃಶ್ಯಗಳ ಮೂಲಕವೇ ಅಭಿಮಾನಿಗಳನ್ನು ಆಕರ್ಷಣೆ ಮಾಡುವತ್ತ ಪರಿಪೂರ್ಣವಾಗಿ ತಮ್ಮನ್ನು ತಾವು ತೊಡಗಿಸಿಕೊಂಡರು. ಕೆಜಿಎಫ್-1 ಸಿನೆಮಾದ ಬಳಿಕ ಆಕೆಗೆ ದೊಡ್ಡ ಆಫರ್‍ ಗಳು ಬಂದರೂ ಸಹ ಆಕೆ ಕೆಜಿಎಫ್-2 ಸಿನೆಮಾಗಾಗಿ ಯಾವುದೇ ಸಿನೆಮಾಗಳನ್ನು ಒಪ್ಪಿಕೊಂಡಿರಲಿಲ್ಲ. ಬಳಿಕ ವಿಕ್ರಂ ಚಿಯಾನ್ ಜೊತೆಗೆ ಕೋಬ್ರಾ ಸಿನೆಮಾದಲ್ಲಿ ಕಾಣಿಡಿಕೊಂಡರು. ಇನ್ನೂ ಸದ್ಯ ಶ್ರೀನಿಧಿ ಸೋಷಿಯಲ್ ಮಿಡಿಯಾದಲ್ಲಿ ಪುಲ್ ಆಕ್ಟೀವ್ ಆಗಿದ್ದು, ಬ್ಯಾಕ್ ಟು ಬ್ಯಾಕ್ ಪೊಟೋಶೂಟ್ಸ್ ಮೂಲಕ ಸದ್ದು ಮಾಡುತ್ತಿದ್ದಾರೆ.

ಇನ್ನೂ ನಟಿ ಶ್ರೀನಿಧಿ ಶೆಟ್ಟಿ ಸೋಷಿಯಲ್ ಮಿಡಿಯಾದ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿರುತ್ತಾರೆ. ವಿವಿಧ ರೀತಿಯ ಡ್ರೆಸ್ ಗಳಲ್ಲಿ ಪೊಟೋಶೂಟ್ಸ್ ಮಾಡಿಸುತ್ತಾ ಅಭಿಮಾನಿಗಳನ್ನು ಹಾಗೂ ನೆಟ್ಟಿಗರನ್ನು ಸೆಳೆಯುತ್ತಿರುತ್ತಾರೆ. ಇದೀಗ ಆಕೆ ಟ್ರೆಡಿಷಿನಲ್ ವೇರ್‍ ನಲ್ಲಿ ಮಿಂಚಿದ್ದಾರೆ. ಬ್ಯೂಟಿಪುಲ್ ಲುಕ್ಸ್ ಮೂಲಕ ಅಭಿಮಾನಿಗಳ ನಿದ್ದೆ ಕದ್ದಿದ್ದಾರೆ. ಲೆಹಂಗಾ ಧರಿಸಿ ಸ್ಟನ್ನಿಂಗ್ ಪೋಸ್ ಕೊಟ್ಟಿದ್ದಾರೆ. ಸಿಲ್ವರ್‍ ಕಲರ್‍ ಲೆಹಂಗಾ, ಸ್ಲೀವ್ ಲೆಸ್ ಬ್ಲೌಸ್ ನಲ್ಲಿ ಎಲ್ಲರನ್ನು ಮಂತ್ರಮುಗ್ದರನ್ನಾಗಿ ಮಾಡಿದ್ದಾರೆ. ಸದ್ಯ ಆಕೆ ಸಿನೆಮಾಗಳಲ್ಲಿ ಕಾಣಿಸಿಕೊಳ್ಳದೇ ಇದ್ದರೂ ಸಹ ಸೋಷಿಯಲ್ ಮಿಡಿಯಾದಲ್ಲಿ ಮಾತ್ರ ಆಕ್ಟಿವ್ ಆಗಿದ್ದು, ಸದಾ ಬ್ಯಾಕ್ ಟು ಬ್ಯಾಕ್ ಪೊಟೋಶೂಟ್ಸ್ ಮೂಲಕ ಸದ್ದು ಮಾಡುತ್ತಿರುತ್ತಾರೆ.

ಸದ್ಯ ಆಕೆ ಹಂಚಿಕೊಂಡಂತಹ ಲೇಟೆಸ್ಟ್ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಅಭಿಮಾನಿಗಳು ಹಾಗೂ ನೆಟ್ಟಿಗರು ವಿವಿಧ ರೀತಿಯ ಕಾಮೆಂಟ್ ಗಳ ಮೂಲಕ ಮತಷ್ಟು ವೈರಲ್ ಮಾಡುತ್ತಿದ್ದಾರೆ. ಇನ್ನೂ ಶ್ರೀನಿಧಿ ಶೆಟ್ಟಿ ನಂದಮೂರಿ ಬಾಲಕೃಷ್ಣ ರವರ ಸಿನೆಮಾದಲ್ಲಿ ನಟಿಸುವ ಅವಕಾಶ ಗಿಟ್ಟಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಶೀಘ್ರದಲ್ಲೇ ಅಧಿಕೃತ ಪ್ರಕಟನೆ ಹೊರಬರಲಿದೆ ಎಂದು ತಿಳಿದುಬಂದಿದೆ.