ಪೌರಕಾರ್ಮಿಕರ ಪಾದಪೂಜೆ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರವಾದ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್…..!

ಕರ್ನಾಟಕದ ಚಿಕ್ಕಬಳ್ಳಾಪುರ ವಿಧಾನಸಭಾ ‌ಕ್ಷೇತ್ರದ ಶಾಸಕ ಪ್ರದೀಪ್ ಈಶ್ವರ್‍ ತುಂಬಾನೆ ಸದ್ದು ಮಾಡುತ್ತಿದ್ದಾರೆ. ಅವರ ಮನೆ ಮನೆ ಭೇಟಿ ಸೇರಿದಂತೆ ಭಾಷಣಗಳ ಮೂಲಕ ರಾಜ್ಯದಾಧ್ಯಂತ ಹೆಸರು ವಾಸಿಯಾಗುತ್ತಿದ್ದಾರೆ. ಇದೀಗ ಅವರು ಪೌರಕಾರ್ಮಿಕರ ದಿನಾಚರಣೆಯ ಅಂಗವಾಗಿ ಪೌರಕಾರ್ಮಿಕರ ಪಾದಪೂಜೆ ಮಾಡಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಚಿಕ್ಕಬಳ್ಳಾಪುರ ನಗರದಲ್ಲಿ ನಗರಸಭೆಯ ಪೌರಕಾರ್ಮಿಕರ ನೂತನ ವಿಶ್ರಾಂತಿ ಗೃಹಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿಯಾದ ಶಾಸಕ ಪ್ರದೀಪ್ ಈಶ್ವರ್‍ ಕಾರ್ಯಕ್ರಮಕ್ಕೂ ಮುನ್ನಾ ಪೌರಕಾರ್ಮಿಕರ ಪಾದಪೂಜೆ ಮಾಡಿದ್ದಾರೆ. ನಗರವನ್ನು ಸ್ವಚ್ಚಗೊಳಿಸುವಂತಹ ಪೌರ ಕಾರ್ಮಿಕ ಪಾದ ತೊಳೆದು ನಮಸ್ಕಾರ ಮಾಡಿದ್ದಾರೆ. ಶಾಸಕರ ಸರಳತೆ ಹಾಗು ಪೌರಕಾರ್ಮಿಕರಿಗೆ ಅವರು ನೀಡಿದ ಗೌರವಕ್ಕೆ ಅನೇಕರು ಮೆಚ್ಚುಗೆ ಸೂಚಿಸಿದ್ದಾರೆ.

ಶಾಸಕರಾದ ಬಳಿಕ ಪ್ರದೀಪ್ ಈಶ್ವರ್‍ ರವರು ಮತಷ್ಟು ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ಕ್ಷೇತ್ರ ವ್ಯಾಪ್ತಿಯ ಸಾವಿರಾರು ಸಂಖ್ಯೆಯ ಮಕ್ಕಳಿಗೆ ಗಣೇಶ ಹಬ್ಬದ ಅಂಗವಾಗಿ ಕಲರ್ ಬಟ್ಟೆ ಕೊಡಿಸಿದ್ದಾರೆ. ಜೊತೆಗೆ ಅವರದ್ದೇ ವೆಬ್ ಸೈಟ್ ಒಂದನ್ನು ಸಹ ಪ್ರಾರಂಭಿಸಿದ್ದು. ಮನೆ ಮನೆಗೂ ಸ್ಕ್ಯಾನರ್ ಕೊಟ್ಟಿದ್ದಾರೆ. ಸಮಸ್ಯೆಗಳ ಬಗ್ಗೆ ದೂರು ನೀಡಿದರೇ 24 ಗಂಟೆಗಳ ಒಳಗೆ ಸಮಸ್ಯೆಗಳ ಬಗ್ಗೆ ಕ್ರಮ ತೆಗೆದುಕೊಳ್ಳುವಂತಹ ಕೆಲಸ ಸಹ ನಡೆಯುತ್ತಿದೆ.