Film News

ಮುಂದಿನ ಸೀಸನ್ ನಲ್ಲಿ ಅಂತಹ ಸನ್ನಿವೇಶಗಳು ಇರೊಲ್ಲ, ರಾಣಾ ನಾಯ್ಡು ಸಿರೀಸ್ ಬಗ್ಗೆ ಮೊದಲ ಬಾರಿ ರಿಯಾಕ್ಟ್ ಆದ ವೆಂಕಟೇಶ್……!

ಕಳೆದ ಮಾ.10 ರಿಂದ ನೆಟ್ ಫ್ಲಿಕ್ಸ್ ನಲ್ಲಿ ಪ್ರಸಾರವಾಗುತ್ತಿರುವ ರಾಣಾ ನಾಯುಡು ಸಿರೀಸ್ ಮಿಶ್ರ ಪ್ರತಿಕ್ರಿಯೆಯನ್ನು ಪಡೆದುಕೊಂಡರೂ ಸಹ ಭಾರಿ ವಿರೋಧವನ್ನು ಕಾಣುತ್ತಿದೆ. ಈ ಸಿರೀಸ್ ನಲ್ಲಿ ಪ್ರಮುಖ ಪಾತ್ರಗಳಲ್ಲಿ ತೆಲುಗು ಸೀನಿಯರ್‍ ನಟ ವಿಕ್ಟರಿ ವೆಂಕಟೇಶ್ ಹಾಗೂ ಯಂಗ್ ಹಿರೋ ರಾಣಾ ದಗ್ಗುಬಾಟಿ ಕಾಣಿಸಿಕೊಂಡಿದ್ದಾರೆ. ಇನ್ನೂ ಈ ಸಿರೀಸ್ ಗಾಗಿ ಅಭಿಮಾನಿಗಳು ಭಾರಿ ನಿರೀಕ್ಷೆಯೊಂದಿಗೆ ಕಾಯುತ್ತಿದ್ದರು. ಇದೀಗ ಈ ಸಿರೀಸ್ ನೆಟ್ ಫ್ಲಿಕ್ಸ್ ನಲ್ಲಿ ಸ್ಟ್ರೀಮೀಂಗ್ ಆಗುತ್ತಿದ್ದು, ಅನೇಕ ವಿಮರ್ಶೆಗಳನ್ನು ಎದುರಿಸುತ್ತಿದೆ. ಇದೀಗ ಮೊದಲ ಬಾರಿಗೆ ವೆಂಕಟೇಶ್ ರಿಯಾಕ್ಟ್ ಆಗಿದ್ದಾರೆ.

ಸಾಮಾನ್ಯವಾಗಿ ವೆಬ್ ಸಿರೀಸ್ ಗಳಿಗೆ ಸೆನ್ಸಾರ್‍ ನಿಂಬಂಧನೆಗಳು ಹೆಚ್ಚು ಇರುವುದಿಲ್ಲ ಎನ್ನಲಾಗಿದೆ. ಈ ಕಾರಣದಿಂದಲೇ ಕೆಲವೊಂದು ವೆಬ್ ಸಿರೀಸ್ ಗಳಲ್ಲಿ ನ್ಯೂಡಿಟಿ ತುಂಬಾನೆ ಇರುತ್ತದೆ ಎನ್ನಬಹುದಾಗಿದೆ. ಈ ಹಾದಿಯಲ್ಲೇ ರಾಣಾ ನಾಯುಡು ಸಿರೀಸ್ ನಲ್ಲೂ ಸಹ ಅಸಭ್ಯಕರವಾದ ಮಾತುಗಳು, ಕೆಲವೊಂದು ದೃಶ್ಯಗಳು ಹೆಚ್ಚಾಗಿದೆ. ಈ ಸೀರಿಸ್ ನಲ್ಲಿ ಯಾವುದೇ ಸೆನ್ಸಾರ್‍ ಇಲ್ಲದಂತೆ ಅಸಭ್ಯಕರವಾದ ಮಾತುಗಳು, ಕೆಲವೊಂದು ದೃಶ್ಯಗಳು ಕ್ರೈಂ ದೃಶ್ಯಗಳು ಇದೆ. ಇನ್ನೂ ವೆಂಕಟೇಶ್ ಪಾತ್ರದ ಬಗ್ಗೆ ಅವರ ಅಭಿಮಾನಿಗಳು ಸಹ ಅಸಹನ ವ್ಯಕ್ತಪಡಿಸಿದ್ದರು. ಈಗಾಗಲೇ ಈ ಸಿರೀಸ್ ನಲ್ಲಿನ ಬೋಲ್ಡ್ ದೃಶ್ಯಗಳ ಬಗ್ಗೆ ರಾಣಾ ದಗ್ಗುಬಾಟಿ ರಿಯಾಕ್ಟ್ ಆಗಿದ್ದರು. ಇದೀಗ ವೆಂಕಟೇಶ್ ರವರೂ ಸಹ ರಿಯಾಕ್ಟ್ ಆಗಿದ್ದಾರೆ.

ತೇಜ ನಿರ್ದೇಶನದಲ್ಲಿ ತೆರೆಗೆ ಬರಲಿರುವ ಅಹಿಂಸಾ ಎಂಬ ಸಿನೆಮಾದಲ್ಲಿ ವೆಂಕಟೇಶ್ ಸಹೋದರ ಸುರೇಶ್ ಬಾಬು ಕಿರಿಯ ಪುತ್ರ ಅಭಿರಾಮ್ ನಟನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನೆಮಾದ ಪ್ರಮೋಷನ್ ಸಹ ಜೋರಾಗಿಯೇ ನಡೆಯಿತ್ತಿದೆ. ಇದೀಗ ಈ ಪ್ರಮೋಷನ್ ಕಾರ್ಯಕ್ರಮಗಳಲ್ಲಿ ವೆಂಕಟೇಶ್ ಸಹ ಎಂಟ್ರಿ ಕೊಟ್ಟಿದ್ದಾರೆ. ಇತ್ತಿಚಿಗೆ ನಡೆದ ಸಂದರ್ಶನವೊಂದರಲ್ಲಿ ಭಾಗಿಯಾದ ವೆಂಕಟೇಶ್ ಗೆ ರಾಣಾ ನಾಯ್ಡು ವೆಬ್ ಸಿರೀಸ್ ಕುರಿತಂತೆ ಪ್ರಶ್ನೆಗಳು ಎದುರಾಗಿದೆ. ಈ ಪ್ರಶ್ನೆಗಳಿಗೆ ವೆಂಕಟೇಶ್ ರಿಯಾಕ್ಟ್ ಆಗಿದ್ದಾರೆ. ರಾಣಾ ನಾಯ್ಡು ಸಿರೀಸ್ ಬಗ್ಗೆ ಒಳ್ಳೆಯ ರೆಸ್ಪಾನ್ಸ್ ಬರುತ್ತಿದೆ. ಆದರೆ ಸಿರೀಸ್ ನಲ್ಲಿನ ಬೋಲಡ್ ದೃಶ್ಯಗಳ ಬಗ್ಗೆ ಆಲೋಚನೆ ಮಾಡುತ್ತಾ ಇರಬಾರದು ಎಂದಿದ್ದಾರೆ.

ಇನ್ನೂ ರಾಣಾ ನಾಯ್ಡು ಮೊದಲ ಸೀಸನ್ ನಲ್ಲಿ ಕೆಲವೊಂದು ದೃಶ್ಯಗಳು ಪ್ರಭಾವಿತವಾಗಿದ್ದು ವಾಸ್ತವವೇ. ಆದರೆ ಮುಂದಿನ ಸೀಸನ್ ನಲ್ಲಿ ಮಾತ್ರ ಎಲ್ಲರಿಗೂ ಇಷ್ಟವಾಗುವಂತೆ ಇರುತ್ತದೆ. ಮೊದಲನೇ ಸೀಸನ್ ಗಿಂತ ಎರಡನೇ ಸೀಜನ್ ಪ್ರೇಕ್ಷಕರನ್ನು ತುಂಬಾ ರಂಜಿಸುತ್ತದೆ ಎಂದು ಹೇಳಿದ್ದಾರೆ. ಇನ್ನೂ ರಾಣಾ ನಾಯ್ಡು ಸಿರೀಸ್ ನೆಕ್ಸ್ಟ್ ಸೀಸನ್ ಯಾವ ರೀತಿಯಲ್ಲಿ ಪ್ರೇಕ್ಷಕರನ್ನು ಆಕರ್ಷಣೆ ಮಾಡಲಿದೆ ಎಂಬುದನ್ನು ಕಾದು ನೋಡಬೇಕಿದೆ.

Most Popular

To Top