ಪ್ಯಾಂಟ್ ಲೆಸ್ ಆಗಿ ಕಾಣಿಸಿಕೊಂಡ ಮೆಗಾ ಡಾಟರ್ ನಿಹಾರಿಕಾ, ಮೆಗಾ ಫ್ಯಾನ್ಸ್ ಕೆಂಗಣ್ಣಿಗೆ ಗುರಿಯಾದ ನಟಿ….!

Follow Us :

ಮೆಗಾ ಕುಟುಂಬದ ಏಕೈಕ ನಟಿ ನಿಹಾರಿಕಾ ಕೊಣಿದೆಲಾ ಸಿನೆಮಾಗಳಲ್ಲಿ ಎಂಟ್ರಿ ಕೊಟ್ಟು ನಟಿಯಾಗಿ ಕೆಲವೊಂದು ಸಿನೆಮಾಗಳಲ್ಲಿ ಕಾಣಿಸಿಕೊಂಡರೂ ಸಹ ಆಕೆ ಅಂದುಕೊಂಡಷ್ಟು ಸಕ್ಸಸ್ ಕಾಣದೆ ವಿಫಲರಾದರು. ಬಳಿಕ ವೆಬ್ ಸಿರೀಸ್ ಹಾಗೂ ನಿರ್ಮಾಣದತ್ತ ಮುಖ ಮಾಡಿದರು. ಇನ್ನೂ ಆಕೆ ಸಿನೆಮಾಗಳಲ್ಲಿ ಟ್ರೆಡಿಷನಲ್ ಆಗಿಯೇ ಕಾಣಿಸಿಕೊಂಡಿದ್ದರು. ಇನ್ನೂ ಕೆಲವು ದಿನಗಳಿಂದ ನಿಹಾರಿಕಾಗೆ ಸಂಬಂಧಿಸಿದ ವೈಯುಕ್ತಿಕ ವಿಚಾರಗಳು ಸಖತ್ ವೈರಲ್ ಆಗುತ್ತಿವೆ. ಆಕೆ ತನ್ನ ಪತಿಯೊಂದಿಗೆ ಬೇರೆಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಇದರ ಜೊತೆಗೆ ಆಕೆ ಸೋಷಿಯಲ್ ಮಿಡಿಯಾದಲ್ಲೂ ಸಹ ಹಾಟ್ ಪೊಟೋಶೂಟ್ಸ್ ಮೂಲಕ ಎಲ್ಲರನ್ನೂ ಶಾಕ್ ಆಗುವಂತೆ ಮಾಡುತ್ತಿದ್ದಾರೆ.

ನಟಿ ನಿಹಾರಿಕಾ ಕೊಣಿದೆಲಾ ಸಿನೆಮಾಗಳಿಗಿಂತ ವೈಯುಕ್ತಿಕ ವಿಚಾರಗಳಿಂದ ಹೆಚ್ಚು ಸುದ್ದಿಯಾದರು. ಸುಮಾರು ದಿನಗಳ ಹಿಂದೆ ಆಕೆ ಪಬ್ ಕೇಸ್ ನಲ್ಲಿ ಸಿಲುಕಿಕೊಂಡಿದ್ದರು. ಕೆಲವು ದಿನಗಳಿಂದ ನಿಹಾರಿಕಾ ಹಾಗೂ ಚೈತನ್ಯ ಜೊನ್ನಲ ಗಡ್ಡ ವಿಚ್ಚೇದನ ಪಡೆದುಕೊಳ್ಳಲು ಮುಂದಾಗಿದ್ದಾರೆ ಎಂಬ ರೂಮರ್‍ ಬಿರುಗಾಳಿಯಂತೆ ಹರಿದಾಡುತ್ತಿದ್ದು, ಚೈತನ್ಯ ತನ್ನ ಸೋಷಿಯಲ್ ಮಿಡಿಯಾ ಖಾತೆಯಿಂದ ಮದುವೆಯ ಪೊಟೋಗಳನ್ನು ಡಿಲೀಟ್ ಮಾಡಿದ್ದು, ಒಬ್ಬರೊನ್ನಬ್ಬರು ಸೋಷಿಯಲ್ ಮಿಡಿಯಾದಲ್ಲಿ ಅನ್ ಫಾಲೋ ಮಾಡಿದ್ದು, ಈ ರೂಮರ್‍ ಗಳಿಗೆ ಮತಷ್ಟು ಬಲ ತಂದುಕೊಟ್ಟಿದೆ ಎನ್ನಲಾಗಿದೆ. ಈ ರೂಮರ್‍ ಶುರುವಾದ ಬಳಿಕ ಆಕೆ ಸೋಷಿಯಲ್ ಮಿಡಿಯಾದಲ್ಲಿ ಏನೇ ಹಂಚಿಕೊಂಡರು ಕ್ಷಣಗಳಲ್ಲೆ ಸಖತ್ ವೈರಲ್ ಆಗುತ್ತಿರುತ್ತದೆ. ಈ ಹಾದಿಯಲ್ಲೆ ಆಕೆ ಹಂಚಿಕೊಂಡ ಲೇಟೆಸ್ಟ್ ಪೊಟೋಗಳು ಸಖತ್ ವೈರಲ್ ಆಗುತ್ತಿವೆ.

ನಿಹಾರಿಕಾ ಕೊಣಿದೆಲಾ ಸೋಷಿಯಲ್ ಮಿಡಿಯಾದಲ್ಲಿ ಇತ್ತಿಚಿಗೆ ಗ್ಲಾಮರ್‍ ಡೋಸ್ ಏರಿಸುತ್ತಿದ್ದಾರೆ. ದಿನೇ ದಿನೇ ತೆರೆದ ಪುಸ್ತಕದಂತೆ ಗ್ಲಾಮರ್‍ ಶೋ ಮಾಡಲು ಮುಂದಾಗುತ್ತಿದ್ದಾರೆ. ಅದರಲ್ಲೂ ಆಕೆ ಇತ್ತೀಚಿಗೆ  ತುಂಬಾನೆ ಹಾಟ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದೀಗ ಆಕೆ ಪ್ಯಾಂಟ್ ಲೆಸ್ ಆಗಿ ಹಾಟ್ ಪೋಸ್ ಕೊಟ್ಟಿದ್ದಾರೆ. ಈ ಪೊಟೋಗಳಲ್ಲಿ ಆಕೆ ಹಾಟ್ ಆಗಿ ಕಾಣಿಸಿಕೊಂಡಿದ್ದು, ವಿಭಿನ್ನ ರೀತಿಯ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದ್ದಾರೆ. 360 ಆಂಗಲ್ ನಲ್ಲಿ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಡೆನಿಮ್ ಟಾಪ್ ಧರಿಸಿ ನೆವರ್‍ ಬಿಪೋರ್‍ ಎಂಬಂತೆ ಪೋಸ್ ಕೊಟ್ಟಿದ್ದಾರೆ. ಇನ್ನೂ ಮೆಗಾ ಫ್ಯಾನ್ಸ್ ಮಾತ್ರ ಈ ಪೊಟೋಗಳ ಬಗ್ಗೆ ಫೈರ್‍ ಆಗುತ್ತಿದ್ದಾರೆ. ಸ್ವಲ್ಪ ಪದ್ದತಿಯಾಗಿರು ಎಂದು ಸಲಹೆಗಳನ್ನೂ ಸಹ ನೀಡುತ್ತಿದ್ದಾರೆ. ಇನ್ನೂ ಆಕೆಯ ಈ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.

ಇನ್ನೂ ನಟಿ ನಿಹಾರಿಕಾ ಡೆಡ್ ಫಿಕ್ಸೆಲ್ಸ್ ಎಂಬ ವೆಬ್ ಸಿರೀಸ್ ಮೂಲಕ ಮತ್ತೆ ಬಣ್ಣದ ಲೋಕಕ್ಕೆ ರೀ ಎಂಟ್ರಿ ಕೊಟ್ಟಿದ್ದಾರೆ. ಈ ಸಿರೀಸ್ ಹಾಟ್ ಸ್ಟಾರ್‍ ನಲ್ಲಿ ಕಳೆದ ಮೇ.19 ರಿಂದ ಸ್ಟ್ರೀಮಿಂಗ್ ಆಗುತ್ತಿದೆ. ಈ ಸಿರೀಸ್ ವಿಡಿಯೋ ಗೇಮ್ ಆಧಾರಿತ ಕಥೆಯನ್ನು ಒಳಗೊಂಡಿದೆ. ಈ ಸಿರೀಸ್ ನಲ್ಲಿ ಆಕೆ ಕೆಲವೊಂದು ಬೋಲ್ಡ್ ಡೈಲಾಗ್ ಗಳನ್ನು ಸಹ ಹಾಕಿದ್ದು, ವೈರಲ್ ಆಗುತ್ತಿದೆ. ಇನ್ನೂ ನಿಹಾರಿಕಾ ಇದೀಗ ಸಿನೆಮಾಗಳ ಮೇಲೆ ಪೂರ್ಣ ಪೋಕಸ್ ಇಟ್ಟಿದ್ದಾರೆ.ಈ ಹಾದಿಯಲ್ಲೇ ಆಕೆ ಹೈದರಾಬಾದ್ ನಲ್ಲಿ ಕಛೇರಿಯನ್ನು ಸಹ ಪ್ರಾರಂಭಿಸಿದ್ದಾರೆ.