ನನ್ನನ್ನು ಹಿಯಾಳಿಸಿದ ಮಹಿಳಾ ವಕೀಲರ ಮೇಲೆ ಕೇಸನ್ನು ಹಾಕುತ್ತೇನೆ ಎಂದ ಸ್ಟಾರ್ ಡೈರೆಕ್ಟರ್ ಆರ್.ಜಿ.ವಿ……..!

Follow Us :

ಸದಾ ಒಂದಲ್ಲ ಒಂದು ರೀತಿಯ ವಿವಾದಗಳಿಗೆ ನಾಂದಿ ಹಾಡುವಂತಹವರಲ್ಲಿ ಟಾಲಿವುಡ್ ಸ್ಟಾರ್‍ ಡೈರೆಕ್ಟರ್‍ ರಾಮ್ ಗೋಪಾಲ್ ವರ್ಮಾ ಮುಂದಿರುತ್ತಾರೆ. ಇತ್ತೀಚಿಗೆ ವಿವಾದಾತ್ಮಕ ಹೇಳಿಕೆ ನೀಡಿದ ಕಾರಣದಿಂದ ಗುಂಟೂರು ಜಿಲ್ಲೆಯ ಪೇದಕಾಕಾನಿಯ ಬಾರ್‍ ಅಸೋಸಿಯೇಷನ್ ಗೆ ಸೇರಿದ ಕೆಲ ಮಹಿಳಾ ವಕೀಲರು ರಾಮ್ ಗೋಪಾಲ್ ವರ್ಮಾ ಹಾಗೂ ಆಚಾರ್ಯ ನಾಗಾರ್ಜುನ್ ಯೂನಿವರ್ಸಿಟಿಯ ಪ್ರೊಫೆಸರ್‍ ರಾಜಶೇಖರ್‍ ಮೇಲೆ ಪೊಲೀಸರಿಗೆ ದೂರು ನೀಡಿದ್ದರು. ಇದಕ್ಕೆ ರಾಮ್ ಗೋಪಾಲ್ ವರ್ಮಾ ರಿಯಾಕ್ಟ್ ಆಗಿದ್ದು, ನನ್ನ ಕಡಿಮೆ ಮಾಡಿ ನನ್ನ ಭಾವನೆಗಳಿಗೆ ಧಕ್ಕೆ ಮಾಡಿದಂತಹ ಮಹಿಳಾ ವಕೀಲರ ಮೇಲೆ ಕೇಸು ಹಾಕುತ್ತೇನೆ ಎಂದು ಹೇಳಿದ್ದಾರೆ.

ಇತ್ತೀಚಿಗೆ ಗುಂಟೂರಿನ ಆಚಾರ್ಯ ನಾಗಾರ್ಜುನ್ ಯೂನಿವರ್ಸಿಟಿಯಲ್ಲಿ ನಡೆದ ಅಕಾಡೆಮಿಕ್ ಕಾರ್ಯಕ್ರಮವೊಂದರಲ್ಲಿ ರಾಮ್ ಗೋಪಾಲ್ ವರ್ಮಾ ಭಾಗಿಯಾಗಿದ್ದರು.  ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಆರ್‍.ಜಿ.ವಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ್ದರು. ಈ ವೇಳೆ ಆತ ತನ್ನದೇ ಆದ ಸ್ಟೈಲ್ ನಲ್ಲಿ ಹೇಳಿದ್ದರು. ಚೆನ್ನಾಗಿ ಕುಡಿಯಿರಿ, ಚೆನ್ನಾಗಿ ತಿನ್ನಿ ಎಂದು ಹೇಳುವುದರ ಜೊತೆಗೆ ಮಹಿಳೆಯರ ಬಗ್ಗೆ ಮಾತನಾಡಿದ್ದರು. ಆತನ ಹೇಳಿಕೆಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗಿತ್ತು. ಇನ್ನೂ ಈ ಕಾರ್ಯಕ್ರಮಕ್ಕೆ ವರ್ಮಾ ರವರನ್ನು ಮುಖ್ಯ ಅತಿಥಿಯಾಗಿ ಕರೆದ ಪ್ರೊ. ರಾಜಶೇಖರ್‍ ರವರ ವಿರುದ್ದ ಟಿಡಿಪಿ ಮಹಿಳಾ ಘಟಕ ಆಕ್ರೋಷ ವ್ಯಕ್ತಪಡಿಸಿತ್ತು. ಜೊತೆಗೆ ತೆಲುಗು ಮಹಿಳಾ ಅಧ್ಯಕ್ಷೆ ವಂಗಲಪೂಡಿ ಅನಿತಾ ಎಂಬುವವರು ಸಹ ಮಹಿಳಾ ಕಮಿಷನ್ ಗೆ ದೂರು ನೀಡಿದ್ದರು. ಈ ಹಾದಿಯಲ್ಲೇ ಮಹಿಳಾ ವಕೀಲರೂ ಸಹ ಪೊಲೀಸರಿಗೆ ದೂರು ನೀಡಿದ್ದಾರೆ.

ಇನ್ನೂ ಈ ಬಗ್ಗೆ ದೂರು ನೀಡಿದ ಬಳಿಕ ಮಾತನಾಡಿದ ಮಹಿಳಾ ವಕೀಲರು ಮಹಿಳೆಯರ ಭಾವನೆಗಳು ಧಕ್ಕೆ ಯಾಗುವಂತಹ ರೀತಿಯಲ್ಲಿ ಆರ್‍.ಜಿ.ವಿ ಮಾತನಾಡಿದ್ದಾರೆ. ವಿದ್ಯಾರ್ಥಿಗಳ ಮುಂದೆ ಅಸಭ್ಯಕರವಾಗಿ ಆರ್‍.ಜಿ.ವಿ ಮಾತನಾಡಿದ ರೀತಿ, ಆತನ ಹಾವ ಭಾವಗಳ ರೀತಿ ಅಸಭ್ಯಕರವಾಗಿತ್ತು. ವರ್ಮಾ ಮಾತುಗಳ ಬಗ್ಗೆ ಅವರ ಪೋಷಕರು ಯಾವ ರೀತಿಯಲ್ಲಿ ರಿಯಾಕ್ಟ್ ಆಗುತ್ತಾರೋ ತಿಳಿಯದು ನಾವು ಮಾತ್ರ ಪೊಲೀಸರಿಗೆ ದೂರು ನೀಡಿದ್ದೇವೆ. ಆರ್‍.ಜಿ.ವಿ ವಿರುದ್ದ ಕ್ರಮ ತೆಗೆದುಕೊಳ್ಳುವವರೆಗೂ ನಾವು ಹೋರಾಟ ಮಾಡುತ್ತೇವೆ ಎಂದು ಮಹಿಳಾ ವಕೀಲರು ಆಗ್ರಹಿಸಿದ್ದಾರೆ.

ಇನ್ನೂ ಈ ಸುದ್ದಿ ಆರ್‍.ಜಿ.ವಿ ಕಿವಿಗೆ ಬಿದ್ದ ಬಳಿಕ ಆತ ಟ್ವಿಟರ್‍ ಮೂಲಕ ರಿಯಾಕ್ಟ್ ಆಗಿದ್ದಾರೆ. ಆತ ಮಾತನಾಡಿದ ಹೇಳಿಕೆಗಳನ್ನು ಗೂಗಲ್ ಡಾಕ್ಯುಮೆಂಟ್ ನಲ್ಲಿ ಸೇವ್ ಮಾಡಿದ್ದು, ಆ ಡಾಕ್ಯುಮೆಂಟ್ ಶೇರ್‍ ಮಾಡಿ ತನ್ನ ಮನೊಭಾವಗಳನ್ನು ಕಡಿಮೆ ಮಾಡಿದ ಹಾಗೂ ಧಕ್ಕೆ ಮಾಡಿದಂತಹ ವಕೀಲರ ಮೇಲೆ ಕೇಸನ್ನು ಹಾಕುತ್ತೇನೆ ಎಂದು ಟ್ವೀಟ್ ಮೂಲಕ ತಿಳಿಸಿದ್ದಾರೆ. ಇನ್ನೂ ಈ ವಿವಾದ ಯಾವ ರೀತಿಯ ಸ್ವರೂಪ ಪಡೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ.