Film News

ಹೆಂಡ ಕುಡಿದ ಕೀರ್ತಿ ಸುರೇಶ್, ಎತ್ತಿದ ಬಾಟಲ್ ಇಳಿಸದೇ ಕುಡಿದ ಕೀರ್ತಿ, ವೈರಲ್ ಆದ ವಿಡಿಯೋ….!

ಮಹಾನಟಿ ಸಿನೆಮಾದ ಮೂಲಕ ನ್ಯಾಷನಲ್ ಅವಾರ್ಡ್ ಪಡೆದುಕೊಂಡ ಕೀರ್ತಿ ಸುರೇಶ್ ಸದ್ಯ ಬ್ಯಾಕ್ ಟು ಬ್ಯಾಕ್ ಸಿನೆಮಾಗಳ ಮೂಲಕ ತನ್ನ ಹವಾ ಮುಂದುವರೆಸುತ್ತಿದ್ದಾರೆ. ಮೊದಲಿಗೆ ತುಂಬಾ ಸಂಪ್ರದಾಯಬದ್ದವಾಗಿ ಕಾಣಿಸಿಕೊಂಡ ಈಕೆ ಸರ್ಕಾರು ವಾರಿ ಪಾಠ ಸಿನೆಮಾದ ಬಳಿಕ ಮತಷ್ಟು ಹಾಟ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸರಿಯಾದ ಹಿಟ್ ಗಾಗಿ ಕಾಯುತ್ತಿದ್ದ ಸಮಯದಲ್ಲಿ ಸರ್ಕಾರು ವಾರಿ ಪಾಠ ಸಿನೆಮಾ ಬ್ಲಾಕ್ ಬ್ಲಸ್ಟರ್‍ ಹಿಟ್ ನೀಡಿತ್ತು. ಬಳಿಕ ಬ್ಯಾಕ್ ಟು ಬ್ಯಾಕ್ ಆಫರ್‍ ಗಳನ್ನು ಪಡೆದುಕೊಂಡರು. ಇದೀಗ ದಸರಾ ಸಿನೆಮಾದ ಮೂಲಕ ಅಭಿಮಾನಿಗಳ ಮುಂದೆ ಬರಲಿದ್ದಾರೆ. ಈ ಸಿನೆಮಾದ ಪ್ರಮೋಷನ್ಸ್ ಸಹ ಜೋರಾಗಿ ನಡೆಯುತ್ತಿದ್ದು, ಅದರ ಭಾಗವಾಗಿ ವಿಡಿಯೋ ಒಂದು ವೈರಲ್ ಆಗುತ್ತಿದೆ.

ಟಾಲಿವುಡ್ ನ್ಯಾಚುರಲ್ ಸ್ಟಾರ್‍ ನಾನಿ ಹಾಗೂ ಕೀರ್ತಿ ಸುರೇಶ್ ಕಾಂಬಿನೇಷನ್ ನಲ್ಲಿ ಮೊದಲ ಪ್ಯಾನ್ ಇಂಡಿಯಾ ಸಿನೆಮಾ ತೆರೆಗೆ ಬರಲಿದೆ. ಈ ಸಿನೆಮಾದ ಪ್ರಮೋಷನ್ ಕಾರ್ಯಕ್ರಮಗಳನ್ನು ಚಿತ್ರತಂಡ ಭರದಿಂದ ಆಯೋಜನೆ ಮಾಡುತ್ತಿದೆ. ಸಂದರ್ಶನಗಳು, ಈವೆಂಟ್ ಗಳ ಮೂಲಕ ಸಿನಿಮಾ ಪ್ರೇಕ್ಷಕರಿಗೆ ರೀಚ್ ಆಗುವಂತೆ ಪ್ಲಾನ್ ಮಾಡುತ್ತಿದ್ದಾರೆ. ಇನ್ನೂ ಇತ್ತಿಚಿಗೆ ಮುಂಬೈನಲ್ಲಿ ನಡೆದ ಪ್ರಮೋಷನ್ಸ್ ವೇಳೆ ಕೀರ್ತಿ ಸುರೇಶ್ ಗೆ ಸಂಬಂಧಿಸಿದ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಈ ಕಾರ್ಯಕ್ರಮದಲ್ಲಿ ಟಾಲಿವುಡ್ ಸ್ಟಾರ್‍ ರಾಣಾ ದಗ್ಗುಬಾಟಿ ಸಹ ಹಾಜರಾಗಿದ್ದು, ಮತಷ್ಟು ಸದ್ದು ಮಾಡಿದ್ದಾರೆ.

ಇನ್ನೂ ಇದೀಗ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಆಂಕರ್‍ ಹೆಂಡ ಕುಡಿಯುವ ಟಾಸ್ಕ್ ನೀಡುತ್ತಾರೆ. ಬಳಿಕ ನಾನಿ ಹಾಗೂ ರಾಣಾ ಮಿನಿ ಬಾಟಲ್ ಗಳನ್ನು ಕುಡಿದು ಬಿಡುತ್ತಾರೆ. ಕೀರ್ತಿ ಸುರೇಶ್ ಅವರಿಬ್ಬರಿಗೂ ಬಾಟಲಿಗಳನ್ನು ಸರ್ವ ಮಾಡಿ, ತಾನು ಸಹ ಒಂದ ಬಾಟಲ್ ಏರಿಸುತ್ತಾರೆ. ಅದರಲ್ಲೂ ಎತ್ತಿದ ಬಾಟಲಿಯನ್ನು ಇಳಿಸದೇ ಪುಲ್ ಕುಡಿದು ಎಲ್ಲರನ್ನೂ ಆಶ್ಚರ್ಯ ಪಡಿಸುತ್ತಾರೆ. ಇನ್ನೂ ಅಲ್ಲಿದ್ದ ರಾಣಾ ಹಾಗೂ ನಾನಿ ಸಹ ಕೀರ್ತಿ ಸುರೇಶ್ ರನ್ನು ಕಂಡು ಶಾಕ್ ಆಗುತ್ತಾರೆ. ಸದ್ಯ ಈ ವಿಡಿಯೋ ಚಿತ್ರತಂಡ ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇನ್ನೂ ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಜೊತೆಗೆ ಕೀರ್ತಿ ಸುರೇಶ್ ಅಭಿಮಾನಿಗಳು ಶಾಕ್ ಆಗುತ್ತಾ ಕಾಮೆಂಟ್ ಗಳನ್ನು ಲೈಕ್ ಗಳನ್ನು ಹರಿಬಿಡುತ್ತಿದ್ದಾರೆ.

ನಟಿ ಕೀರ್ತಿ ಸುರೇಶ್ ಮೆಗಾಸ್ಟಾರ್‍ ಚಿರಂಜೀವಿ ಅಭಿನಯಿಸುತ್ತಿರುವ ಭೋಳಾ ಶಂಕರ್‍ ಸಿನೆಮಾದಲ್ಲೂ ಸಹ ಚಿರು ತಂಗಿಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇನ್ನೂ ನಾನಿ ಅಭಿನಯದ ದಸರಾ ಸಿನೆಮಾದಲ್ಲೂ ಸಹ ಆಕೆ ನಟಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನೆಮಾ ಇದೇ ಮಾ.30 ರಂದು ತೆರೆಗೆ ಬರಲಿದ್ದು, ಈ ಸಿನೆಮಾದ ಪ್ರಮೋಷನ್ ಕಾರ್ಯಕ್ರಮಗಳೂ ಸಹ ಭರದಿಂದ ಸಾಗುತ್ತಿವೆ.

Most Popular

To Top