Film News

ತಮ್ಮ ಮೇಲಿನ ರೂಮರ್ ಬಗ್ಗೆ ಸ್ಟ್ರಾಂಗ್ ಆಗಿ ರಿಯಾಕ್ಟ್ ಆಗಿ ಅದಿತಿ, ಸಿದ್ದಾರ್ಥ್ ಜೊತೆಗಿನ ರಿಲೇಷನ್ ಶಿಪ್ ಬಗ್ಗೆ ಕ್ಲಾರಿಟಿ ಕೊಟ್ಟ ನಟಿ……!

ನಟ ಸಿದ್ದಾರ್ಥ್ ಹಾಗೂ ಅದಿತಿ ರಾವ್ ಸುಮಾರು ದಿನಗಳಿಂದ ಡೇಟಿಂಗ್ ನಲ್ಲಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಲೇ ಇದೆ. ಅದಕ್ಕೆ ಬಲ ಕೊಡುವಂತಹ ಅನೇಕ ಸನ್ನಿವೇಶಗಳೂ ಸಹ ನಡೆದಿದೆ.  ಅದರಲ್ಲೂ ಇತ್ತೀಚಿಗೆ ನಡೆದ ಕೆಲವೊಂದು ಕಾರಣಗಳಿಂದ ಅವರು ಬಹಿರಂಗವಾಗಿಯೇ ಪ್ರೀತಿಸಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಮಹಾಸಮುದ್ರಂ ಸಿನೆಮಾದ ಬಳಿಕ  ಈ ಜೋಡಿ ಪ್ರೇಮ ಪಯಣ ಸಾಗಿಸುತ್ತಿದ್ದಾರೆ ಎಂಬ ರೂಮರ್‍ ಗಳು ಶುರುವಾದವು. ಇದೀಗ ಅದಿತಿ ತಮ್ಮ ಬಗೆಗಿನ ರೂಮರ್‍ ಬಗ್ಗೆ ರಿಯಾಕ್ಟ್ ಆಗಿದ್ದಾರೆ.

ಕಾಲಿವುಡ್ ಲವರ್‍ ಬಾಯ್ ಸಿದ್ದಾರ್ಥ್ ಹಾಗೂ ನಟಿ ಅದಿತಿ ರಾವ್ ಹೈದರಿ ಡೇಟಿಂಗ್ ನಡೆಸುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಲೇ ಇದೆ. ಇದರ ಜೊತೆಗೆ ಕೆಲವೊಂದು ಕಾರ್ಯಕ್ರಮಗಳಲ್ಲಿ ಸಹ ಅವರಿಬ್ಬರೂ ಜೋಡಿಯಾಗಿ ಕಾಣಿಸಿಕೊಂಡು ಆ ಸುದ್ದಿಗೆ ಮತಷ್ಟು ಬಲ ಕೊಟ್ಟಂತಾಗಿದೆ. ಇತ್ತೀಚಿಗೆ ತೆಲುಗು ನಟ ಶರ್ವಾನಂದ ಎಂಗೇಜ್ ಮೆಂಟ್ ನಲ್ಲೂ ಸಹ ಅವರಿಬ್ಬರೂ ಒಟ್ಟಿಗೆ ಬಂದು ಪೊಟೋಗಳಿಗೆ ಪೋಸ್ ಸಹ ಕೊಟ್ಟಿದ್ದರು. ಇದು ಸಾಲದು ಎಂಬಂತೆ ಇತ್ತೀಚಿಗೆ ಹಾಡೊಂದಕ್ಕೆ ರೀಲ್ಸ್ ಸಹ ಜೊತೆಯಲ್ಲಿ ಮಾಡಿದ್ದು ಅವರು ಡೇಟಿಂಗ್ ನಲ್ಲಿದ್ದಾರೆ ಎಂದು ಅನೇಕರು ಅನುಮಾನಗಳನ್ನು ವ್ಯಕ್ತಪಡಿಸಿದ್ದರು. ಇದೀಗ ಸಂದರ್ಶನವೊಂದರಲ್ಲಿ ಅದಿತಿ ಈ ಬಗ್ಗೆ ಕೊಂಚ ಸ್ಟ್ರಾಂಗ್ ಆಗಿಯೇ ರಿಯಾಕ್ಟ್ ಆಗಿದ್ದಾರೆ.

ಇತ್ತೀಚಿಗೆ ನಡೆದ ಸಂದರ್ಶನವೊಂದರಲ್ಲಿ ಅದಿತಿಗೆ ರಿಲೇಷನ್ ಶಿಪ್ ರೂಮರ್‍ ಬಗ್ಗೆ ಪ್ರಶ್ನೆ ಕೇಳಿದ್ದಾರೆ. ಸಿದ್ದಾರ್ಥ್ ಜೊತೆಗೆ ನೀವು ರಿಲೇಷನ್ ಶಿಪ್ ನಲ್ಲಿದ್ದೀರಾ? ಈ ಬಗ್ಗೆ ಪ್ರಚಾರ ಆಗುತ್ತಿರುವ ಬಗ್ಗೆ ನಿಮ್ಮ ಉತ್ತರ ಏನು ಎಂದು ಆಂಕರ್‍ ಪ್ರಶ್ನೆ ಕೇಳಿದ್ದಾರೆ. ಅದಕ್ಕೆ ಅದಿತಿ ಸಹ ಉತ್ತರ ನೀಡಿದ್ದಾರೆ. ಈ ಪ್ರಶ್ನೆ ಪ್ರೇಕ್ಷರಿಂದಾಗಲಿ ಅಥವಾ ಫ್ಯಾನ್ಸ್ ನಿಂದಾಗಲಿ ಬರಲಿಲ್ಲ. ಜೊತೆಗೆ ಅಂತಹುದು ಏನಾದರೂ ಇದ್ದರೇ ನಾನೇ ಮೊದಲು ಹೇಳುತ್ತೇನೆ. ಎಲ್ಲರೊಂದಿಗೆ ಹಂಚಿಕೊಳ್ಳುವ ವಿಚಾರ ಏನಾದರೂ ಇದ್ದರೇ ನಾನೇ ಮೊದಲು ಎಲ್ಲರಿಗೂ ತಿಳಿಸುತ್ತೇನೇ. ಜೊತೆಗೆ ನಮ್ಮ ಬಗ್ಗೆ ತಿಳಿಯುವ ಆಸಕ್ತಿ ಅನೇಕರಲ್ಲಿದೆ. ಮತ್ತೆ ಕೆಲವರಿಗೆ ನಮ್ಮ ಸಿನೆಮಾಗಳ ಬಗ್ಗೆ, ನಮ್ಮನ್ನು ದೊಡ್ಡ ಪರದೆಯ ಮೇಲೆ ನೋಡಬೇಕು ಎಂಬ ಇಂಟ್ರಸ್ಟ್ ಇರುತ್ತದೆ. ಅಭಿಮಾನಿಗಳ ಪ್ರೀತಿಯಿಂದಲೇ ನಾನು ಸಿನೆಮಾಗಳಲ್ಲಿ ಖ್ಯಾತಿ ಪಡೆದುಕೊಳ್ಳುತ್ತಿದ್ದೇನೆ. ಅವರಿಗಾಗಿ ಮತಷ್ಟು ಕಷ್ಟಪಡಲು ಸಹ ಸಿದ್ದ ಎಂದು ಅದಿತಿ ಬ್ರಿಲಿಯಂಟ್ ಆಗಿ ಉತ್ತರ ನೀಡಿದ್ದಾರೆ.

ಇನ್ನೂ ಮತ್ತೊಮ್ಮೆ ಆಂಕರ್‍ ಅದೇ ಪ್ರಶ್ನೆಯನ್ನು ಕೇಳಿದರೇ ಆಗ ಅದಿತಿ ಬೇಸರ ವ್ಯಕ್ತಪಡಿಸಿದ್ದಾರೆ. ನಾನು ಏನು ಹೇಳಿದರೂ ನಿಮಗೆ ಇಷ್ಟ ಬಂದಿದ್ದು ಬರೆಯುತ್ತೀರಿ. ಅದಕ್ಕಾಗಿ ನಾನು ಏನು ಮಾಡಲಿ ಎಂದು ಉತ್ತರಿಸಿದ್ದಾರೆ. ಈ ಪ್ರಶ್ನೆ ಅಭಿಮಾನಿಗಳಿಂದಲೇ ಬರುತ್ತಿದೆ ಎಂದು ಆಂಕರ್‍ ಕೇಳಿದ್ದಾರೆ. ಅದಕ್ಕೆ ನನ್ನ ಅಭಿಮಾನಿಗಳು ಈ ಪ್ರಶ್ನೆ ನನಗೆ ಎಂದು ಕೇಳಿಲ್ಲ ಎಂದಿದ್ದಾರೆ. ಸದ್ಯ ಅದಿತಿ ತಮ್ಮ ರಿಲೇಷನ್ ಶಿಪ್ ಬಗ್ಗೆ ಮಾತನಾಡಿದ್ದು, ಎಲ್ಲಾ ಸುಳ್ಳು ಎಂಬ ಅರ್ಥದಲ್ಲಿ ಹೇಳಿದ್ದಾರೆ ಆದರೆ ಅವರ ಬಗೆಗಿನ ರೂಮರ್‍ ಗಳು ಮಾತ್ರ ಕಡಿಮೆಯಾಗಿಲ್ಲ.

Most Popular

To Top