Film News

ಪವನ್ ಕಲ್ಯಾಣ್ ವಿರುದ್ದ ಸಟೈರಿಕಲ್ ಟ್ವೀಟ್ ಮಾಡಿದ ವರ್ಮಾ, ಪವನ್ ಕಲ್ಯಾಣ್ ನನ್ನ ಪೋಸ್ಟರ್ ಕಾಪಿ ಹೊಡೆದಿದ್ದಾನೆ ಎಂದ ಆರ್.ಜಿ.ವಿ…..!

ತೆಲುಗು ಸಿನಿರಂಗದಲ್ಲಿ ಸದಾ ಒಂದಲ್ಲ ಒಂದು ವಿವಾದಾತ್ಮಕ ಹೇಳಿಕೆಗಳನ್ನು ನೀಡುವ ಮೂಲಕ ಕಾಂಟ್ರವರ್ಸಿ ನಿರ್ದೇಶಕ ಎಂದೇ ಖ್ಯಾತಿ ಪಡೆದುಕೊಂಡ ರಾಮ್ ಗೋಪಾಲ್ ವರ್ಮಾ ಇದೀಗ ಜನಸೇನಾ ಮುಖ್ಯಸ್ಥ ಪವನ್ ಕಲ್ಯಾಣ್ ರವರನ್ನು ವ್ಯಂಗ ಮಾಡಿದ್ದಾರೆ. ಪವನ್ ಕಲ್ಯಾಣ್ ನನ್ನ ಪೋಸ್ಟರ್‍ ಅನ್ನು ಕಾಪಿ ಹೊಡೆದಿದ್ದಾನೆ ಎಂದು ಟ್ವೀಟ್ ಮಾಡಿದ್ದಾರೆ. ವರ್ಮಾ ಮಾಡಿದ ಟ್ವೀಟ್ ಇದೀಗ ಸೋಷಿಯಲ್  ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.

ಸಿನೆಮಾಗಳಿಗಿಂತ ಸದಾ ವಿವಾದಗಳಿಂದಲೇ ಸುದ್ದಿಯಾಗುವ ರಾಮ್ ಗೋಪಾಲ್ ವರ್ಮಾ ಸೋಷಿಯಲ್ ಮಿಡಿಯಾದಲ್ಲಂತೂ ಸದಾ ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಿರುತ್ತಾರೆ. ಇನ್ನೂ ತನಗೆ ಇಷ್ಟವಾಗದ ವ್ಯಕ್ತಿಗಳನ್ನು ಟಾರ್ಗೆಟ್ ಮಾಡುತ್ತಾ, ಅವರನ್ನು ಆಟ ಆಡಿಕೊಳ್ಳುತ್ತಿರುತ್ತಾರೆ. ಅದರಲ್ಲೂ ಇತ್ತೀಚಿಗೆ ರಾಜಕೀಯವಾಗಿಯೂ ಸಹ ತುಂಬಾನೆ ಆಕ್ಟೀವ್ ಆಗಿದ್ದಾರೆ. ಸದ್ಯ ಆತ ಯಾವುದೇ ಪಾರ್ಟಿಗೆ ಸೇರದಿದ್ದರೂ ಸಹ ರಾಜಕೀಯ ಮಾಡುತ್ತಿರುತ್ತಾರೆ. ಅದರಲ್ಲೂ ಮುಖ್ಯವಾಗಿ ಅವರು ವೈ.ಎಸ್.ಆರ್‍ ಪಾರ್ಟಿ ಹಾಗೂ ಜಗನ್ ರವರನ್ನು ಬೆಂಬಲಿಸುತ್ತಾ, ಟಿಡಿಪಿ ಮುಖಂಡ ಚಂದ್ರಬಾಬು ನಾಯ್ಡು, ಪವರ್‍ ಸ್ಟಾರ್‍ ಪವನ್ ಕಲ್ಯಾಣ್ ರವರನ್ನು ಟಾರ್ಗೆಟ್ ಮಾಡಿ ವಿವಿಧ ರೀತಿಯ ಕಾಮೆಂಟ್ ಗಳನ್ನು ಮಾಡುತ್ತಿರುತ್ತಾರೆ.

ಇನ್ನೂ ಕಳೆದೆರಡು ದಿನಗಳ ಹಿಂದೆ ಪವರ್‍ ಸ್ಟಾರ್‍ ಪವನ್ ಕಲ್ಯಾಣ್ ರವರು ಚಂದ್ರಬಾಬು ನಾಯ್ಡು ರವರ ಬಂಧನದ ವಿಚಾರಕ್ಕೆ ಸಂಬಂಧಿಸಿದಂತೆ ನಡುರಸ್ತೆಯಲ್ಲಿ ಮಲಗಿ ಪ್ರತಿಭಟನೆ ಮಾಡಿದ್ದರು.  ಬಂಧನಕ್ಕೆ ಒಳಗಾದ ಚಂದ್ರಬಾಬು ರವರನ್ನು ಭೇಟಿಯಾಗಲು ಪವನ್ ಕಲ್ಯಾಣ್ ಹೋಗಲು ಪೊಲೀಸರು ಅಡ್ಡಿಮಾಡಿದ ಹಿನ್ನೆಲೆಯಲ್ಲಿ ಪವನ್ ಕಲ್ಯಾಣ್ ನಡು ರಸ್ತೆಯಲ್ಲೆ ಮಲಗಿ ಪ್ರತಿಭಟನೆ ಮಾಡಿದರು. ಬಳಿಕ ಅವರನ್ನು ಪೊಲೀಸರು ಬಂಧನಕ್ಕೆ ತೆಗೆದುಕೊಂಡರು. ಇನ್ನೂ ಈ ಸನ್ನಿವೇಶವನ್ನು ರಾಮ್ ಗೋಪಾಲ್ ವರ್ಮಾ ಬಳಸಿಕೊಂಡಿದ್ದಾರೆ. ಪವನ್ ಕಲ್ಯಾಣ್ ರವರ ಮೇಲೆ ಕೌಂಟರ್‍ ಗಳನ್ನು ಹಾಕಿದ್ದಾರೆ. ಪವನ್ ಕಲ್ಯಾಣ್ ರಸ್ತೆಯ ಮೇಲೆ ಕಾಲಿನ ಮೇಲೆ ಕಾಲು ಹಾಕಿಕೊಂಡು ಮಲಗಿದ ಪೊಟೋ ಶೇರ್‍ ಮಾಡಿ, ತಮ್ಮ ವ್ಯೂಹಂ ಸಿನೆಮಾದ ಪೋಸ್ಟರ್‍ ಸಹ ಶೇರ್‍ ಮಾಡಿ ಪವನ್ ಕಲ್ಯಾಣ್ ರವರನ್ನು ‌ವ್ಯಂಗಮಾಡಿದ್ದಾರೆ.

ಇನ್ನೂ ವರ್ಮಾ ಹಂಚಿಕೊಂಡ ಈ ಟ್ವೀಟ್ ಇದೀಗ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ. ಸದ್ಯ ರಾಮ್ ಗೋಪಾಲ್ ವರ್ಮಾ ಆಂಧ್ರ ಸಿಎಂ ಜಗನ್ ಮೋಹನ್ ರೆಡ್ಡಿ ರವರಿಗೆ ಬೆಂಬಲವಾಗಿ ವ್ಯೂಹಂ ಎಂಬ ಸಿನೆಮಾವನ್ನು ನಿರ್ದೇಶನ ಮಾಡಿದ್ದಾರೆ. ಈ ಸಿನೆಮಾದಲ್ಲಿ ಜಗನ್ ರವರ ಪಾದಯಾತ್ರೆ, ಸಿಎಂ ಆಗಿದ್ದು ಸೇರಿದಂತೆ ಅನೇಕ ವಿಚಾರಗಳನ್ನು ತೆರೆಗೆ ತರಲಿದ್ದಾರೆ ಎನ್ನಲಾಗಿದೆ. ಜೊತೆಗೆ ಈ ಸಿನೆಮಾದಲ್ಲಿ ಪವನ್ ಕಲ್ಯಾಣ್ ಹಾಗೂ ಚಂದ್ರಬಾಬು ರವರ ಪಾತ್ರಗಳು ಸಹ ಇರಲಿದೆ ಎನ್ನಲಾಗುತ್ತಿದೆ. ಈಗಾಗಲೇ ಈ ಸಿನೆಮಾದ ಪೋಸ್ಟರ್‍ ಗಳು, ಫಸ್ಟ್ ಗ್ಲಿಂಪ್ಸ್, ವಿಡಿಯೋ, ಸ್ಪೇಷಲ್ ಲುಕ್ಸ್ ರಿಲೀಸ್ ಆಗಿದ್ದು, ಒಳ್ಳೆಯ ರೆಸ್ಪಾನ್ಸ್ ಸಹ ಪಡೆದುಕೊಂಡಿದೆ. ಈ ಸಿನೆಮಾದ ಮೇಲೆ ಭಾರಿ ನಿರೀಕ್ಷೆ ಸಹ ಹುಟ್ಟಿದೆ ಎಂದು ಹೇಳಬಹುದಾಗಿದೆ.

Most Popular

To Top