Film News

ಸ್ವಿಮ್ಮಿಂಗ್ ಪೂಲ್ ಬಳಿ ಥಂಡರ್ ಥೈಸ್ ಶೋ ಮಾಡುತ್ತಾ ಇಂಟರ್ ನೆಟ್ ನಲ್ಲಿ ಬಿಸಿಯನ್ನೇರಿಸಿದ ಸ್ಟಾರ್ ಆಂಕರ್ ಶ್ರೀಮುಖಿ….!

ತೆಲುಗು ಕಿರುತರೆಯ ಸ್ಟಾರ್‍ ಅಂಕರ್‍ ಗಳಲ್ಲಿ ಶ್ರೀಮುಖಿ ಇತ್ತಿಚಿಗೆ ಸೋಷಿಯಲ್ ಮಿಡಿಯಾದಲ್ಲಿ ಸೌಂದರ್ಯದ ಸುನಾಮಿಯನ್ನು ಸೃಷ್ಟಿ ಮಾಡುತ್ತಿದ್ದಾರೆ. ದಿನದಿಂದ ದಿನಕ್ಕೆ ಕ್ರೇಜಿ, ಹಾಟ್ ಪೊಟೋಶೂಟ್ಸ್ ಮೂಲಕ ಹಾಟ್ ಟ್ರೀಟ್ ನೀಡುತ್ತಿದ್ದಾರೆ. ತೆಲುಗು ಆಂಕರ್‍ ಗಳಲ್ಲಿ ತನ್ನದೇ ಆದ ಕ್ರೇಜ್ ಸೃಷ್ಟಿಸಿಕೊಂಡು ಕಿರುತೆರೆಯಲ್ಲಿ ಮುನ್ನುಗ್ಗುತ್ತಿದ್ದಾರೆ. ಆಂಕರ್‍ ಶ್ರೀಮುಖಿ ಕಿರುತೆರೆಯಲ್ಲಿ ಅನೇಕ ಶೋಗಳನ್ನು ಮಾಡುವ ಮೂಲಕ ಸ್ಟಾರ್‍ ನಟಿಯರಂತೆ ಫ್ಯಾನ್ ಫಾಲೋಯಿಂಗ್ ಸಹ ಬೆಳೆಸಿಕೊಂಡಿದ್ದಾರೆ. ಇದೀಗ ಸ್ವಿಮ್ಮಿಂಗ್ ಪೂಲ್ ಬಳಿ ಥಂಡರ್‍ ಥೈಸ್ ಶೋ ಮಾಡುವ ಮೂಲಕ ಇಂಟರ್‍ ನೆಟ್ ನಲ್ಲಿ ಬಿಸಿಯನ್ನೇರಿಸಿದ್ದಾರೆ.

ಕಿರುತೆರೆಯಲ್ಲಿ ಶ್ರೀಮುಖಿ ಹವಾ ಜೋರಾಗಿಯೇ ನಡೆಯುತ್ತಿದೆ ಎಂದು ಹೇಳಬಹುದಾಗಿದೆ. ಕೈ ತುಂಬಾ ಸಂಪಾದನೆ ಮಾಡುತ್ತಿದ್ದಾರೆ. ಇತ್ತಿಚಿಗಷ್ಟೆ ಆಕೆ ಹೊಸ ಮನೆಯನ್ನು ಸಹ ನಿರ್ಮಾಣ ಮಾಡಿದ್ದಾರೆ. ಕೋಟ್ಯಂತರ ರೂಪಾಯಿ ಬೆಲೆಬಾಳುವಂತಹ ಮನೆ ಇದಾಗಿದೆ. ಇತ್ತೀಚಿಗಷ್ಟೆ ಈ ಮನೆಯ ಗೃಹ ಪ್ರವೇಶ ಸಹ ಅದ್ದೂರಿಯಾಗಿ ನೆರವೇರಿದೆ. ಇನ್ನೂ ಆಂಕರ್‍ ಆಗಿ ಆಕೆ ಸದ್ಯ ಟಾಪ್ ಸ್ಥಾನದಲ್ಲಿದ್ದಾರೆ. ಜೊತೆಗೆ ಸಿನೆಮಾಗಳಲ್ಲೂ ಸಹ ಸಕ್ಸಸ್ ಸಾಧಿಸಲು ಪ್ರಯತ್ನಗಳನ್ನು ನಡೆಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಆಕೆ ಕ್ಯಾರೆಕ್ಟರ್‍ ರೋಲ್ಸ್ ನಲ್ಲೂ ಸಹ ನಟಿಸುತ್ತಿದ್ದಾರೆ. ಕ್ರೇಜಿ ಅಂಕುಲ್ಸ್ ಸಿನೆಮಾದಲ್ಲಿ ಆಕೆ ನಟಿಯಾಗಿ ಕಾಣಿಸಿಕೊಂಡಿದ್ದರು. ಇನ್ನೂ ಆಕೆಗೆ ಕೆಲವೊಂದು ಸಿನೆಮಾಗಳಲ್ಲಿ ಸಣ್ಣಪುಟ್ಟ ಪಾತ್ರಗಳ ಅವಕಾಶಗಳು ಬರುತ್ತಿದ್ದರೂ ಸಹ ಆಕೆ ಬಿಗ್ ಬ್ರೇಕ್ ನೀಡುವಂತಹ ಸಿನೆಮಾಗಾಗಿ ಕಾಯುತ್ತಿದ್ದಾರೆ.

ಇನ್ನೂ ಶ್ರೀಮುಖಿ ತಾನು ಸ್ಟಾರ್‍ ನಟಿಯರಿಗಿಂತ ಕಡಿಮೆ ಏನು ಇಲ್ಲ ಎಂಬಂತೆ ಸೋಷಿಯಲ್ ಮಿಡಿಯಾದಲ್ಲಿ ಪುಲ್ ಆಕ್ಟೀವ್ ಆಗಿರುತ್ತಾರೆ. ಆನ್ ಸ್ಕ್ರೀನ್ ಆಗಲಿ, ಆಫ್ ಸ್ಕ್ರೀನ್ ಆಗಲಿ ಬ್ಯೂಟಿಪುಲ್ ಅಂಡ್ ಹಾಟ್ ಆಗಿ ಪೋಸ್ ಕೊಡುತ್ತಿರುತ್ತಾರೆ. ಆಕೆ ಹಂಚಿಕೊಳ್ಳುವಂತಹ ಪೊಟೋಗಳು ಕ್ಷಣದಲ್ಲೇ ಎಲ್ಲಾ ಕಡೆ ಸಖತ್ ವೈರಲ್ ಆಗುತ್ತಿರುತ್ತವೆ. ಸದ್ಯ ಶೂಟಿಂಗ್ ಗಳಿಂದ ಬಿಡುವು ಪಡೆದುಕೊಂಡ ಶ್ರೀಮುಖಿ ವೆಕೇಷನ್ ಗೆ ಹಾರಿದ್ದಾರೆ. ವೇಕೇಷನ್ ನಲ್ಲಿ ಆಕೆ ಎಂಜಾಯ್ ಮಾಡುತ್ತಾ ಕೆಲವೊಂದು ಪೊಟೋಗಳನ್ನು ಹಂಚಿಕೊಂಡಿದ್ದಾರೆ. ಸ್ವಿಮ್ಮಿಂಗ್ ಪೂಲ್ ಬಳಿಕ ಆಕೆ ತನ್ನ ದೇಹದ ಮೈಮಾಟ ಪ್ರದರ್ಶನ ಮಾಡಿದ್ದಾರೆ. ಕಲರ್‍ ಪುಲ್ ಸ್ವಿಮ್ ಸ್ಯೂಟ್ ನಲ್ಲಿ ಗ್ಲಾಮರಸ್ ಪೋಸ್‌ ಗಳನ್ನು ಕೊಟ್ಟಿದ್ದಾರೆ. ಥಂಡರ್‍ ಥೈಸ್ ಶೋ ಮಾಡುತ್ತಾ ಅಭಿಮಾನಿಗಳನ್ನು ಸೆಳೆದಿದ್ದಾರೆ. ಇನ್ನೂ ಆಕೆಯ ಈ ಲೇಟೆಸ್ಟ್ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ. ಅಭಿಮಾನಿಗಳು ಹಾಗೂ ನೆಟ್ಟಿಗರು ಕ್ರೇಜಿ ಕಾಮೆಂಟ್ ಗಳ ಮೂಲಕ ಮತ್ತಷ್ಟು ವೈರಲ್ ಮಾಡುತ್ತಿದ್ದಾರೆ.

ಕೊನೆಯದಾಗಿ ಆಕೆ ಮೆಗಾಸ್ಟಾರ್‍ ಚಿರಂಜೀವಿಯವರ ಭೋಳಾ ಶಂಕರ್‍ ಸಿನೆಮಾದಲ್ಲೂ ಸಹ ಆಕೆ ನಟಿಸಿದ್ದು, ಖುಷಿ ಸಿನೆಮಾದ ಸೊಂಟದ ದೃಶ್ಯ ರಿ ಕ್ರಿಯೇಟ್ ಮಾಡಿದ್ದು, ಈ ಸಂಬಂಧ ಸೋಷಿಯಲ್ ಮಿಡಿಯಾದಲ್ಲಿ ಟ್ರೋಲ್ ಮಾಡಲಾಗಿತ್ತು. ಸದ್ಯ ಕಿರುತೆರೆಯಲ್ಲಿ ಸ್ಟಾರ್‍ ಆಂಕರ್‍ ಆಗಿರುವ ಶ್ರೀಮುಖಿ ಇದೀಗ ಸಿನೆಮಾಗಳಲ್ಲೂ ಸಹ ಕ್ರೇಜ್ ಪಡೆದುಕೊಳ್ಳಲು ಪ್ರಯತ್ನಗಳನ್ನು ಮಾಡುತ್ತಿದ್ದಾರೆ.

Most Popular

To Top