ತನ್ನ ಮನಸ್ಸಲ್ಲಿರುವ ಆಸೆಯನ್ನು ಹೊರಹಾಕಿದ ಡೇವಿಡ್ ವಾರ್ನರ್, ಮಹೇಶ್, ಅಲ್ಲು ಅರ್ಜುನ್ ಜೊತೆ ಸಿನೆಮಾ ಮಾಡಬೇಕು ಅದರಲ್ಲಿ ರಶ್ಮಿಕಾ ಇರಬೇಕು ಎಂದ ಸ್ಟಾರ್ ಕ್ರಿಕೆಟಿಗ….!

Follow Us :

ಕ್ರಿಕೆಟ್ ರಂಗದ ಸ್ಟಾರ್‍ ಡೇವಿಡ್ ವಾರ್ನರ್‍ ಬಗ್ಗೆ ಎಲ್ಲರಿಗೂ ತಿಳಿದೇ ಇದೆ. ಇತ್ತಿಚಿಗೆ ಕ್ರಿಕೆಟಿಗರೂ ಸಹ ಸಿನೆಮಾಗಳ ಮೇಲೆ ಭಾರಿ ಕ್ರೇಜ್ ಪಡೆದುಕೊಂಡಿದ್ದಾರೆ. ಅನೇಕ ಸಿನೆಮಾಗಳಲ್ಲಿನ ಹಾಡುಗಳಿಗೆ, ಡೈಲಾಗ್ ಗಳಿಗೆ ರೀಲ್ಸ್ ಮಾಡಿದ ಅನೇಕ ಕ್ರಿಡಾಪಟುಗಳನ್ನು ಸಹ ನಾವು ಕಂಡಿದ್ದೇವೆ. ಐಪಿಎಲ್ ಸಿರೀಸ್ ಮೂಲಕ ಸ್ಟಾರ್‍ ಡಮ್ ಪಡೆದುಕೊಂಡ ಡೇವಿಡ್ ವಾರ್ನರ್‍ ಮೂಲತಃ ಆಸ್ಟ್ರೇಲಿಯಾದವರು. ಆದರೆ ಐಪಿಲ್ ಮೂಲಕ ಭಾರಿ ಫೇಂ ಪಡೆದುಕೊಂಡರು. ಇದೀಗ ತಮ್ಮ ಮನಸ್ಸಿನಲ್ಲಿರುವ ಮಹದಾಸೆಯೊಂದನ್ನು ಅವರು ಹೊರಹಾಕಿದ್ದಾರೆ.

ಐಪಿಎಲ್ ನಲ್ಲಿ ಸನ್ ರೈಸರ್‍ ಪರವಾಗಿ ಆಡುತ್ತಿರುವ ಡೇವಿಡ್ ಹೈದರಾಬಾದ್ ನಲ್ಲಿರುವಾಗ ತೆಲುಗು ಸಿನೆಮಾ ಹಿರೋಗಳ ಹಾಡುಗಳಿಗೆ ಡ್ಯಾನ್ಸ್ ಮಾಡಿದ್ದರು. ಅಲಾ ವೈಕುಂಠಪುರಂಲೋ ಸಿನೆಮಾದಲ್ಲಿನ ಬುಟ್ಟ ಬೊಮ್ಮ ಹಾಡಿಗೆ ಸ್ಟೆಪ್ಸ್ ಹಾಕಿ ಆ ಹಾಡನ್ನು ವಿಶ್ವಮಟ್ಟದಲ್ಲಿ ಪ್ರಚಾರ ಮಾಡಿದ್ದರು. ಬಳಿಕ ಅನೇಕರು ಡೇವಿಡ್ ವಾರ್ನರ್‍ ಕ್ರಿಕೆಟ್ ನಿಂದ ವಿರಾಮ ಪಡೆದ ಬಳಿಕ ಸಿನೆಮಾಗಳಲ್ಲಿ ನಟಿಸಿದರೇ ಚೆನ್ನಾಗಿರುತ್ತದೆ ಎಂದು ಅಭಿಪ್ರಾಯ ಪಡುತ್ತಿದ್ದಾರೆ. ಇದೀಗ ಈ ಬಗ್ಗೆ ಡೇವಿಡ್ ವಾರ್ನರ್‍ ಸಹ ತನ್ನ ಮನಸ್ಸಿನಲ್ಲಿರುವ ಮಹದಾಸೆಯನ್ನು ಹೊರಹಾಕಿದ್ದಾರೆ. ಆತ ಸಿನೆಮಾಗಳಲ್ಲಿ ನಟಿಸುವ ಆಸೆಯನ್ನು ತಿಳಿಸಿದ್ದು, ಅದರಲ್ಲಿ ಯಾರು ಯಾರು ಇರಬೇಕೆಂದು ಸಹ ಹೇಳಿದ್ದಾರೆ.

ಡೇವಿಡ್ ವಾರ್ನರ್‍ ಸಿನೆಮಾಗಳಲ್ಲಿ ನಟಿಸಲು ಆಸೆಯನ್ನು ವ್ಯಕ್ತಪಡಿಸಿದ್ದಾರೆ. ಆತನಿಗೆ ಮಹೇಶ್ ಬಾಬು, ಅಲ್ಲು ಅರ್ಜುನ್ ಜೊತೆಗೆ ಸಿನೆಮಾಗಳಲ್ಲಿ ನಟಿಸಬೇಕು. ಅದರಲ್ಲಿ ಫಿಮೇಲ್ ಲೀಡ್ ಆಗಿ ರಶ್ಮಿಕಾ ಮಂದಣ್ಣ ಇರಬೇಕು. ಆಕೆ ಅಲ್ಲು ಅರ್ಜುನ್ ಜತೆಗೆ ನಟಿಸಿದ್ದು, ನಾನು ವಿಲನ್ ಆಗಿ ಕೆಲಸ ಮಾಡುತ್ತೇನೆ. ನನಗೆ ಅಂತಹ ಕ್ಯಾರೆಕ್ಟರ್‍ ಹೊಂದಾಣಿಕೆ ಆಗುತ್ತದೆ ಎಂದು ಇತ್ತೀಚಿಗೆ ನಡೆದ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಈ ಹಿಂದೆ ಡೇವಿಡ್ ಪುಷ್ಪಾ-2 ಸಿನೆಮಾದ ಗಂಗಮ್ಮ ತಾಯಿ ಗೆಟಪ್ ನ ಪೊಟೋಗಳನ್ನು ಸಹ ಸೋಷಿಯಲ್ ಮಿಡಿಯಾ ಮೂಲಕ ಹಂಚಿಕೊಂಡಿದ್ದರು. ಜೊತೆಗೆ ಡೇವಿಡ್ ಹಾಗೂ ಆತನ ಪುತ್ರಿ ಅಲ್ಲು ಅರ್ಜುನ್ ಹುಟ್ಟುಹಬ್ಬಕ್ಕೆ ಸ್ಪೇಷಲ್ ವಿಡಿಯೋ ಮೂಲಕ ಶುಭ ಕೋರಿದ್ದರು.

ಇನ್ನೂ ಡೇವಿಡ್ ವಾರ್ನರ್‍ ಸಿನೆಮಾಗಳಲ್ಲಿ ನಟಿಸುವ ಆಸೆಯನ್ನು ಹೊರಹಾಕಿದ್ದು, ಇದರಿಂದ ಅವರ ಅಭಿಮಾನಿಗಳು ಪುಲ್ ಖುಷಿಯಾಗಿದ್ದಾರೆ. ಇದರ ಜೊತೆಗೆ ಮತ್ತೊಂದು ಸುದ್ದಿ ಸಹ ಕೇಳಿಬರುತ್ತಿದೆ. ಅಲ್ಲು ಅರ್ಜುನ್ ಸಹ ಡೇವಿಡ್ ಜೊತೆಗೆ ನಟಿಸಲು ಉತ್ಸುಕರಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಅವರ ಕಾಂಬಿನೇಷನ್ ನಲ್ಲಿ ಸಿನೆಮಾ ಬರುತ್ತಾ ಎಂಬುದನ್ನು ಕಾದು ನೋಡಬೇಕಿದೆ.