ತಮ್ಮ ಲವ್ ಸ್ಟೋರಿ ರಿವೀಲ್ ಮಾಡಿದ ನರೇಶ್, ಪವಿತ್ರಾಗೆ ಪ್ರಪೋಸ್ ಮಾಡಿದ ಆಕೆಯ ರಿಯಾಕ್ಷನ್ ಕಂಡು ಬೆವರಿದ್ದರಂತೆ ನರೇಶ್…..!

Follow Us :

ಸಿನಿರಂಗದಲ್ಲಿ ಲವ್, ಮ್ಯಾರೇಜ್ ಹಾಗೂ ಬ್ರೇಕಪ್ ಗಳು ನಡೆಯುತ್ತಲೇ ಇರುತ್ತದೆ. ಈ ಹಾದಿಯಲ್ಲೇ ತೆಲುಗು ಸಿನಿರಂಗದ ಸೀನಿಯರ್‍ ನಟ ನರೇಶ್ ಹಾಗೂ ಪವಿತ್ರಾ ಲೋಕೇಶ್ ಸಹ ಡೇಟಿಂಗ್ ನಲ್ಲಿದ್ದಾರೆ. ಈ ಸುದ್ದಿ ಸುಮಾರು ತಿಂಗಳುಗಳಿಂದ ಸೋಷಿಯಲ್ ಮಿಡಿಯಾದಲ್ಲಿ ದೊಡ್ಡ ಮಟ್ಟದ ಚರ್ಚೆ ಆಗುತ್ತಲೇ ಇರುತ್ತದೆ. ಇದೀಗ ನರೇಶ್ ಮೊದಲ ಬಾರಿಗೆ ತಮ್ಮ ಲವ್ ಸ್ಟೋರಿಯ ಬಗ್ಗೆ ರಿವೀಲ್ ಮಾಡಿದ್ದಾರೆ. ಪವಿತ್ರಾಗೆ ಪ್ರಪೋಸ್ ಮಾಡಿದಾಗ ಆಕೆ ರಿಯಾಕ್ಷನ್ ಕಂಡು ನರೇಶ್ ಬೆವತುಕೊಂಡಿದ್ದರಂತೆ. ಆತನ ಹೇಳಿಕೆಗಳು ಇದೀಗ ಎಲ್ಲಾ ಕಡೆ ಸಖತ್ ವೈರಲ್ ಆಗುತ್ತಿವೆ.

ಸಿನಿರಂಗದಲ್ಲಿ ಇದೀಗ ನರೇಶ್ ಹಾಗೂ ಪವಿತ್ರಾ ಲೊಕೇಶ್ ಹಾಟ್ ಅಂಡ್ ಕ್ರೇಜಿ ಕಪಲ್ಸ್ ಆಗಿದ್ದಾರೆ. ಸುಮಾರು ದಿನಗಳಿಂದ ಅವರದ್ದೆ ಚರ್ಚೆ ಜೋರಾಗಿತ್ತು. ಇದೀಗ ಅವರಿಬ್ಬರು ಮಳ್ಳಿ ಪೆಳ್ಳಿ ಎಂಬ ಸಿನೆಮಾದ ಮೂಲಕ ತೆರೆಯ ಮೇಲೆ ರಂಜಿಸಲಿದ್ದಾರೆ. ಈ ಸಿನೆಮಾದ ಪ್ರಮೋಷನ್ ಸಹ ಪ್ಯಾನ್ ಇಂಡಿಯಾ ಸಿನೆಮಾ ರೇಂಜ್ ನಲ್ಲೇ ಮಾಡುತ್ತಿದ್ದಾರೆ. ಈ ಪ್ರಮೋಷನ್ ವೇಳೆಯಲ್ಲೇ ಆ ಸಿನೆಮಾಗಿಂತ ಅವರ ವೈಯುಕ್ತಿಕ ವಿಚಾರಗಳೇ ಹೆಚ್ಚಾಗಿ ಕೇಳಿಬರುತ್ತಿವೆ. ಈ ಹಾದಿಯಲ್ಲೇ ನರೇಶ್ ಹಾಗೂ ಪವಿತ್ರ ಸಹ ಅನೇಕ ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದು, ಇದೀಗ ಮೊದಲ ಬಾರಿಗೆ ತಮ್ಮ ಲವ್ ಸ್ಟೋರಿಯ ಬಗ್ಗೆ ವಿಚಾರ ಹಂಚಿಕೊಂಡಿದ್ದಾರೆ. ಆಕೆಯೊಂದಿಗೆ ಹೇಗೆ ಪ್ರೀತಿ ಹುಟ್ಟಿತ್ತು. ಎಲ್ಲಿ ಆರಂಭವಾಯ್ತು ಎಂದು ತಿಳಿಸಿದ್ದಾರೆ.

ಇನ್ನೂ ನರೇಶ್ ಪವಿತ್ರಾ ರವರನ್ನು ಆಲಯಂ ಎಂಬ ಸಿನೆಮಾದಲ್ಲಿ ಭೇಟಿಯಾಗಿದ್ದರಂತೆ. ಆ ಸಮಯದಲ್ಲಿ ಪವಿತ್ರಾ ತನ್ನೊಂದಿಗೆ ಮಾತನಾಡಿಲ್ಲವಂತೆ. ಆಕೆಗೆ ಕೊಬ್ಬು ಇರಬಹುದು ಎಂದುಕೊಂಡರಂತೆ. ಇದಾದ ಹತ್ತು ವರ್ಷಗಳ ಬಳಿಕ ಹ್ಯಾಪಿ ವೆಡ್ಡಿಂಗ್ ಎಂಬ ಸಿನೆಮಾದಲ್ಲಿ ಮತ್ತೆ ಭೇಟಿಯಾಗಿದ್ದೆವು. ಈ ವೇಳೆ ಆಕೆ ಮಾತನಾಡುತ್ತಿದ್ದರಂತೆ.  ತನ್ನ ಬಗ್ಗೆ ಅನೇಕ ವಿಚಾರಗಳನ್ನು ತಿಳಿದುಕೊಂಡರಂತೆ. ಅದು ನರೇಶ್ ಗೆ ಆಶ್ಚರ್ಯಪಡುವಂತೆ ಮಾಡಿತ್ತಂತೆ. ಅದೇ ಸಮಯದಲ್ಲಿ ಸುಂದರವಾಗಿದ್ದಾಳೆ, ಎಂದು ಪಾಸೀಟಿವ್ ಎನರ್ಜಿ ಸಹ ಆತನಲ್ಲಿ ಮೂಡಿತ್ತಂತೆ.  ಬಳಿಕ ಆಕೆಯೊಂದಿಗೆ ಮಾತನಾಡಿಲ್ಲವಂತೆ. ಮತ್ತೊಮ್ಮೆ ಸಮ್ಮೊಹನಂ ಎಂಬ ಸಿನೆಮಾದ ಶೂಟಿಂಗ್ ಸಮಯದಲ್ಲಿ ಭೇಟಿಯಾಗಿದ್ದರಂತೆ. ಈ ವೇಳೆ ಆಕೆಯ ಸ್ಟೈಲ್ ಇಷ್ಟ ಆಯ್ತು ಎಂದು ಆಕೆಗೆ  ನೇರವಾಗಿಯೇ ಹೇಳಿದ್ದರಂತೆ. ಮತ್ತೊಂದು ದಿನದ ಶೂಟೀಂಗ್ ಅಡುಗೆ ಕೋಣೆಯಲ್ಲಿ ನಡೆಯುತ್ತಿದ್ದು, ಈ ವೇಳೆ ಆಕೆಯ ನಡವಳಿಕೆ ಇಷ್ಟಪಟ್ಟರಂತೆ. ಸುಂದರವಾದ ಮಹಿಳೆಯನ್ನು ನೋಡಿದರೇ ಆಕೆ ಬೆಡ್ ರೂಂನಲ್ಲಿದ್ದರೇ ಚೆನ್ನಾಗಿರುತ್ತದೆ ಅನ್ನಿಸುತ್ತದೆ ಆದರೆ ನನಗೆ ಮಾತ್ರ ಅಂತಹ ಮಹಿಳೆ ಅಡುಗೆ ಕೋಣೆಯಲ್ಲಿದ್ದರೇ ಚೆನ್ನಾಗಿರುತ್ತದೆ ಎಂದು ಅನ್ನಿಸಿತಂತೆ.

ಬಳಿಕ ಆಕೆಗೆ ಒಂದು ಸಂದೇಶ ಕಳುಹಿಸಿದ್ದರಂತೆ. ಅದಕ್ಕೆ ಆಕೆ ಏನು ರಿಪ್ಲೆ ಕೊಡಲಿಲ್ಲವಂತೆ. ಮತ್ತೆ ಆರು ತಿಂಗಳ ಬಳಿಕ ಬೆಂಗಳೂರಿನಲ್ಲಿ ಶೂಟಿಂಗ್ ಗಾಗಿ ಬಂದಾಗ ಭೇಟಿಯಾಗಿದ್ದರಂತೆ. ಬಳಿಕ ಅವರು ಭೇಟಿಯಾಗಿ ಮಧ್ಯಾಹ್ನದಿಂದ ಸಂಜೆಯ ವರೆಗೂ ಮಾತನಾಡಿಕೊಂಡರಂತೆ. ಬಳಿಕ ಇಬ್ಬರ ನಡುವೆ ಒಳ್ಳೆಯ ಸಂಬಂಧ ಏರ್ಪಟ್ಟಿತ್ತಂತೆ. ಮತ್ತೆ ಭೇಟಿಯಾದಾಗ ಅವರಿಬ್ಬರಲ್ಲಿ ಪ್ರೀತಿ ಹುಟ್ಟಿದೆಯಂತೆ. ಆಕೆ ನನಗೆ ಪರ್ಫೆಕ್ಟ್ ಜೋಡಿಯೆಂದು ಡಿನ್ನರ್‍ ಗೆ ಕರೆದುಕೊಂಡು ಹೋಗಿ ಪ್ರಪೋಸ್ ಮಾಡಿದ್ದರಂತೆ. ಆಕೆ ಏನು ರಿಯಾಕ್ಷನ್ ಕೊಡದೇ ಇದ್ದಾಗ ಆಕೆ ಸೈಲೆಂಟ್ ಆಗಿದ್ದರಂತೆ. ಇದೇ ವೇಳೆ ಆತ ಬೆವರಿದ್ದನಂತೆ. ಆದರೆ ಆಕೆ ಹೋಗುವ ಸಮಯದಲ್ಲೇ ಕೀಪ್ ಲವ್ವಿಂಗ್ ಮಿ ಎಂದು ಹೇಳಿದ್ದರಂತೆ. ಈ ರೀತಿ ಅನೇಕ ಘಟನೆಗಳು ನಡೆದ ಬಳಿಕ ಮತ್ತೊಮ್ಮೆ ಡಿಸೆಂಬರ್‍ 31 ರಂದು ಶುಭಾಷಯ ಕೋರಲು ಹೋಗಿ ಮತ್ತೆ ಕೇಳಿದಾಗ ಆಕೆ ಲವ್ ಯೂ ಅಂತ ಒಪ್ಪಿಕೊಂಡರಂತೆ. ಇನ್ನೂ ಸಿನೆಮಾ ಸ್ಟೋರಿಯಂತೆ ಅವರ ಲವ್ ಸ್ಟೋರಿ ಸಾಗಿದ್ದಾಗಿ ಹೇಳಿಕೊಂಡಿದ್ದು, ಅವರ ಈ ಕಾಮೆಂಟ್ ಗಳು ವೈರಲ್ ಆಗುತ್ತಿವೆ.