Film News

ತೆಲುಗು ಹಿರೋ ಒಬ್ಬರು ಹನ್ಸಿಕಾಗೆ ಕಿರುಕುಳ ನೀಡಿದ ಸುದ್ದಿಯ ಬಗ್ಗೆ ಹನ್ಸಿಕಾ ಸ್ಪಷ್ಟನೆ…!

ಸೌತ್ ಸಿನಿರಂಗದಲ್ಲಿ ಮೊದಲನೇ ಸಿನೆಮಾದ ಮೂಲಕ ಕ್ರೇಜ್ ಪಡೆದುಕೊಂಡು ಭಾರಿ ಸಕ್ಸಸ್ ಕಂಡುಕೊಂಡ ನಟಿಯರ ಸಾಲಿಗೆ ಆಪಲ್ ಬ್ಯೂಟಿ ಹನ್ಸಿಕಾ ಮೊಟ್ವಾನಿ ಸಹ ಸೇರುತ್ತಾರೆ. ಬಾಲನಟಿಯಾಗಿ ಬಣ್ಣದ ಲೋಕಕ್ಕೆ ಕಾಲಿಟ್ಟ ಈಕೆ ಕಡಿಮೆ ಸಮಯದಲ್ಲೇ ಹಿರೋಯಿನ್ ಆಗಿ ಪಾದಾರ್ಪಣೆ ಮಾಡಿದ್ದಾರೆ. ಐಕಾನ್ ಸ್ಟಾರ್‍ ಅಲ್ಲು ಅರ್ಜುನ್ ಹಿರೋ ಆಗಿ ನಟಿಸಿದ ದೇಶಮುದುರು ಎಂಬ ಸಿನೆಮಾದ ಮೂಲಕ ಹಿರೋಯಿನ್ ಆಗಿ ಕಾಣಿಸಿಕೊಂಡಿದ್ದು, ಈ ಸಿನೆಮಾ ಆಕೆಗೆ ಒಳ್ಳೆಯ ಬ್ರೇಕ್ ನೀಡಿತ್ತು. ಬಳಿಕ ಆಕೆ ಅಭಿನಯಿಸಿದ ಅನೇಕ ಸಿನೆಮಾಗಳು ಬಾಕ್ಸ್ ಆಫೀಸ್ ನಲ್ಲಿ ಒಳ್ಳೆಯ ಕಲೆಕ್ಷನ್ ಸಹ ಮಾಡಿದೆ.

ನಟಿ ಹನ್ಸಿಕಾ ಮೊದಲನೇ ಸಿನೆಮಾದ ಮೂಲಕ ಸಕ್ಸಸ್ ಕಂಡುಕೊಂಡಿದ್ದು, ಬಳಿಕ ಬ್ಯಾಕ್ ಟು ಬ್ಯಾಕ್ ತಮಿಳು, ಕನ್ನಡ ಹಾಗೂ ತೆಲುಗು ಭಾಷೆಗಳಲ್ಲೂ ಸಹ ಅವಕಾಶಗಳನ್ನು ಗಿಟ್ಟಿಸಿಕೊಂಡರು. ಒಂದು ಸಮಯದಲ್ಲಿ ಬಹುಬೇಡಿಕೆ ನಟಿಯಾಗಿದ್ದರು. ಸಿನಿರಂಗದಲ್ಲಿ ಸ್ಟಾರ್‍ ನಟಿಯಾಗಿದ್ದ ಈಕೆ ಕಳೆದ ವರ್ಷವಷ್ಟೆ ಆಕೆ ತಾನು ಪ್ರೀತಿಸಿದ ವ್ಯಕ್ತಿಯನ್ನು ಮದುವೆಯಾದರು. ಸದ್ಯ ಮದುವೆ ಜೀವನವನ್ನು ಆಕೆ ಸಂತೋಷದಿಂದ ಕಳೆಯುತ್ತಿದ್ದಾರೆ. ಇನ್ನೂ ಕಳೆದೆರಡು ದಿನಗಳಿಂದ ಹನ್ಸಿಕಾ ಸಂದರ್ಶನವೊಂದರಲ್ಲಿ ತನಗೆ ತೆಲುಗು ಹಿರೋ ಒಬ್ಬ ಡೇಟ್ ಗೆ ಬಾ ಎಂದು ಒತ್ತಾಯಿಸಿದ್ದ, ಕಿರುಕುಳ ನೀಡುತ್ತಿದ್ದ ಎಂದು ಹೇಳಿದ್ದಾಗಿ ಸುದ್ದಿ ಪ್ರಸಾರ ಆಗುತ್ತಿತ್ತು. ಇದೀಗ ಹನ್ಸಿಕಾ ಈ ಬಗ್ಗೆ ರಿಯಾಕ್ಟ್ ಆಗಿದ್ದಾರೆ. ಈ ಸುದ್ದಿಯ ಬಗ್ಗೆ ಆಕೆ ಹೇಳಿದ್ದಾದರೂ ಏನು ಎಂಬ ವಿಚಾರಕ್ಕೆ ಬಂದರೇ,

ಇನ್ನೂ ಈ ರೂಮರ್‍ ಗಳು ಹನ್ಸಿಕಾ ವರೆಗೂ ತಲುಪಿದ್ದು, ಆಕೆ ಈ ಬಗ್ಗೆ ರಿಯಾಕ್ಟ್ ಆಗಿದ್ದಾರೆ. ಸದ್ಯ ತನ್ನ ಬಗ್ಗೆ ಬರುತ್ತಿರುವ ಈ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ಅದೆಲ್ಲಾ ಫೇಕ್, ಒಂದು ಸುದ್ದಿಯನ್ನು ಯಾರೇ ಆಗಲಿ ಪ್ರಕಟಿಸುವಾಗ ಅದರ ಪೂರ್ವಾಪರವನ್ನು ಪರಿಶೀಲನೆ ಮಾಡಬೇಕು. ಏನು ತಿಳಿಯದೇ ಕುರುಡರಂತೆ ಪ್ರಕಟ ಮಾಡುವುದು ಸರಿಯಲ್ಲ. ಅಂತಹ ಸುದ್ದಿ ಪ್ರಸಾರ ಮಾಡುವಾಗ ಅದರ ಬಗ್ಗೆ ವಾಸ್ತವತೆಯನ್ನು ಸಹ ತಿಳಿದುಕೊಳ್ಳಬೇಕು. ನಾನು ಆ ರೀತಿಯ ಹೇಳಿಕೆಗಳನ್ನು ಎಂದಿಗೂ ಕೊಟ್ಟಿಲ್ಲ ಎಂದು ಹೇಳುವ ಮೂಲಕ ತನ್ನ ಬಗ್ಗೆ ಬಂದಂತಹ ರೂಮರ್‍ ಗೆ ಚೆಕ್ ಇಟ್ಟಿದ್ದಾರೆ. ಇನ್ನೂ ಹನ್ಸಿಕಾ ನೀಡಿರುವ ಈ ಹೇಳಿಕೆಗಳು ಇದೀಗ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ.

ಕಳೆದ ವರ್ಷ ಡಿಸೆಂಬರ್‍ 4 ರಂದು ಜೈಪುರ್‍ ನಲ್ಲಿ ಹನ್ಸಿಕಾ ತನ್ನ ಬ್ಯುಸಿನೆಸ್ ಪಾರ್ಟನರ್‍ ಸೊಹೈಲ್ ನನ್ನು ವಿವಾಹವಾದರು. ಸದ್ಯ ಪತಿಯೊಂದಿಗೆ ವೈವಾಹಿಕ ಜೀವನ ಎಂಜಾಯ್ ಮಾಡುತ್ತಿದ್ದಾರೆ. ಇನ್ನೂ ಮದುವೆಯಾದರೂ ಸಹ ಗ್ಲಾಮರ್‍ ಶೋನಲ್ಲಿ ಮಾತ್ರ ತಗ್ಗೇದೇ ಲೇ ಎನ್ನುವಂತೆ ಆಕೆ ತನ್ನ ಸೋಷಿಯಲ್ ಮಿಡಿಯಾ ಖಾತೆಯಲ್ಲಿ ಹಾಟ್ ಅಂಡ್ ಬೋಲ್ಡ್ ಪೊಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ.

Most Popular

To Top