ಕ್ರಿಕೆಟ್ ಗ್ರೌಂಡ್ ನಲ್ಲಿ ನಾಟು ನಾಟು ಸ್ಟೆಪ್ಸ್ ಹಾಕಿದ ವಿರಾಟ್ ಕೊಹ್ಲಿ, ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆದ ವಿಡಿಯೋ….!

ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಭಾರಿ ಪ್ಯಾನ್ ಫಾಲೋಯಿಂಗ್ ಪಡೆದುಕೊಂಡಿದ್ದಾರೆ. ಆತ ಕ್ರಿಕೆಟ್ ಗ್ರೌಂಡ್ ನಲ್ಲಿದ್ದರೇ ಅಭಿಮಾನಿಗಳು ಪುಲ್ ಖುಷಿಯಲ್ಲಿರುತ್ತಾರೆ. ಬ್ಯಾಟಿಂಗ್ ನಲ್ಲಿ ಅವರ ಸ್ಟೈಲ್, ಶಾಟ್ಸ್, ಮಾಸ್ ಆಟಿಟ್ಯೂಡ್ ಕ್ರಿಕೆಟ್…

ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಭಾರಿ ಪ್ಯಾನ್ ಫಾಲೋಯಿಂಗ್ ಪಡೆದುಕೊಂಡಿದ್ದಾರೆ. ಆತ ಕ್ರಿಕೆಟ್ ಗ್ರೌಂಡ್ ನಲ್ಲಿದ್ದರೇ ಅಭಿಮಾನಿಗಳು ಪುಲ್ ಖುಷಿಯಲ್ಲಿರುತ್ತಾರೆ. ಬ್ಯಾಟಿಂಗ್ ನಲ್ಲಿ ಅವರ ಸ್ಟೈಲ್, ಶಾಟ್ಸ್, ಮಾಸ್ ಆಟಿಟ್ಯೂಡ್ ಕ್ರಿಕೆಟ್ ಅಭಿಮಾನಿಗಳನ್ನು ಫಿದಾ ಮಾಡುತ್ತವೆ. ಜೊತೆಗೆ ಅವರು ಫೀಲ್ಡಿಂಗ್ ಸ್ಟೈಲ್ ಅನೇಕರನ್ನು ಆಕರ್ಷಣೆ ಮಾಡುತ್ತದೆ. ಫಿಲ್ಡಿಂಗ್ ಸಮಯದಲ್ಲೂ ಸಹ ಕೊಹ್ಲಿ ಸುಮ್ಮನೆ ಇರುವುದಿಲ್ಲ. ತನ್ನದೇ ಆದ ಸ್ಟೈಲ್ ನಲ್ಲಿ ಪ್ಯಾಪುಲರ್‍ ಹಾಡುಗಳಿಗೆ ಸ್ಟೆಪ್ಸ್ ಹಾಕುತ್ತಾ ಎಲ್ಲರನ್ನೂ ಆಕರ್ಷಣೆ ಮಾಡುತ್ತಾರೆ. ಇದೀಗ ಆಸ್ಕಾರ್‍ ಅವಾರ್ಡ್ ಪಡೆದುಕೊಂಡ ನಾಟು ನಾಟು ಹಾಡಿಗೆ ಸ್ಟೆಪ್ಸ್ ಹಾಕಿದ್ದು, ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.

ಕ್ರಿಕೆಟ್ ಗ್ರೌಂಡ್ ನಲ್ಲಿ ವಿರಾಟ್ ಕೊಹ್ಲಿ ಫೀಲ್ಡಿಂಗ್ ಮಾಡುತ್ತಲೇ ಟ್ರೆಂಡಿಂಗ್ ನಲ್ಲಿರುವ ಹಾಡುಗಳಿಗೆ ಸ್ಟೆಪ್ಸ್ ಹಾಕುತ್ತಾರೆ. ಈ ಹಿಂದೆ ಬಾರ್ಡರ್‍ ಗವಾಸ್ಕರ್‍ ಟೆಸ್ಟ್ ಸೀರಿಸ್ ಸಮಯದಲ್ಲಿ ಅಲ್ ರೌಂಡರ್‍ ರವಿಂದ್ರ ಜಡೇಜಾ ಜೊತೆಗೆ ಬ್ಲಾಕ್ ಬ್ಲಸ್ಟರ್‍ ಪಠಾನ್ ಸಿನೆಮಾದ ಹಾಡಿಗೆ ಸ್ಟೆಪ್ಸ್ ಹಾಕಿ ಎಲ್ಲರನ್ನೂ ರಂಜಿಸಿದ್ದರು. ಕ್ರಿಕೆಟ್ ಜೊತೆಗೆ ಸಿನೆಮಾ ಹಾಡಿಗೂ ಸಹ ಸ್ಟೆಪ್ಸ್ ಹಾಕಿ ಅಭಿಮಾನಿಗಳನ್ನು ಖುಷಿ ಪಡಿಸಿದ್ದರು. ಇದೀಗ ಆಸ್ಟ್ರೇಲಿಯಾದ ಜೊತೆಗೆ ವಾಂಖಡೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಒನ್ ಡೇ ಮ್ಯಾಚ್ ನಲ್ಲಿ ಆಸ್ಕಾರ್‍ ಅವಾರ್ಡ್ ಪಡೆದುಕೊಂಡ ನಾಟು ನಾಟು ಹಾಡಿಗೆ ಸ್ಟೆಪ್ಸ್ ಹಾಕಿ ಎಲ್ಲರನ್ನೂ ಆಶ್ಚರ್ಯ ಪಡುವಂತೆ ಮಾಡಿದ್ದಾರೆ.

ಕ್ರಿಕೆಟ್ ಗ್ರೌಂಡ್ ಸ್ಲಿಪ್ಸ್ ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ವಿರಾಟ್ ಕೊಹ್ಲಿ ಮ್ಯಾಚ್ ನಡೆಯುತ್ತಿರುವ ಸಮಯದಲ್ಲೇ ನಾಟು ನಾಡು ಹಾಡಿಗೆ ಸ್ಟೆಪ್ಸ್ ಹಾಕಿರುವುದು ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ವಿಡಿಯೋ ಅನ್ನು ಅಭಿಮಾನಿಯೊಬ್ಬ ಟ್ವಿಟರ್‍ ನಲ್ಲಿ ಪೋಸ್ಟ್ ಮಾಡಿದ್ದಾರೆ. ಇನ್ನೂ ಈ ಟ್ವೀಟ್ ಗೆ RRR ಟ್ವಿಟರ್‍ ಟೀಂ ಸಹ ರಿಯಾಕಟ್ ಆಗಿದೆ. ವಿರಾಟ್ ಕೊಹ್ಲಿ ರವರನ್ನು ಟ್ಯಾನ್ ಮಾಡಿ, ನಾಟು ನಾಟು ಹ್ಯಾಷ್ ಟ್ಯಾಗ್ ಹಾಕಿ ಲವ್ ಎಮೋಜಿಗಳೊಂದಿಗೆ ರೀ ಪೋಸ್ಟ್ ಮಾಡಿದೆ. ಆದರೆ ಕಾಪಿರೈಟ್ಸ್ ಕಾರಣದಿಂದ ಈ ವಿಡಿಯೋ ಡಿಸೇಬಲ್ ಆಗಿಬಿಟ್ಟಿದೆ. ಇನ್ನೂ ವಿರಾಟ್ ಕೊಹ್ಲಿ ಸಹ ನಾಟು ನಾಟು ಹಾಡಿಗೆ ಸ್ಟೆಪ್ಸ್ ಹಾಕಿರುವುದು ಕೊಹ್ಲಿ ಅಭಿಮಾನಿಗಳಿಗೆ ಹಾಗೂ RRR ಅಭಿಮಾನಿಗಳಿಗೂ ಸಹ ಖುಷಿ ಕೊಟ್ಟಿದ್ದಾರೆ.

ಇನ್ನೂ RRR ಸಿನೆಮಾದಿಂದ ನಾಟು ನಾಟು ಹಾಡು ಬೆಸ್ಟ್ ಒರಜಿನಲ್ ಸಾಂಗ್ ಕೆಟಗಿರಿಯಲ್ಲಿ ಆಸ್ಕಾರ್‍ ಅವಾರ್ಡ್ ಪಡೆದುಕೊಂಡಿದೆ. ಕಳೆದ ವರ್ಷ ಬಿಡುಗಡೆಯಾದ ಈ ಸಿನೆಮಾ ಭಾರಿ ಸಕ್ಸಸ್ ಕಂಡುಕೊಂಡಿತ್ತು. ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲೂ ಸಹ ಅನೇಕ ಅವಾರ್ಡ್‌ಗಳನ್ನು ಸಹ ಪಡೆದುಕೊಂಡ ಈ ಸಿನೆಮಾ ಇದೀಗ ದೇಶದ ಪ್ರತಿಷ್ಟಿತ ಅವಾರ್ಡ್ ಪಡೆದುಕೊಂಡಿದ್ದು, ಸಿನಿರಂಗದ ಪ್ರಮುಖರೂ ಸೇರಿದಂತೆ ಅನೇಕ ಗಣ್ಯರೂ ಸಹ ಶುಭಾಷಯಗಳನ್ನು ತಿಳಿಸಿದ್ದಾರೆ.