ಆಂಟಿ ಎಂದರೇ ಏಕೆ ಅಷ್ಟು ಕೋಪ ಎಂಬ ವಿಚಾರದ ಬಗ್ಗೆ ಶಾಕಿಂಗ್ ಉತ್ತರ ಕೊಟ್ಟ ಸ್ಟಾರ್ ಬ್ಯೂಟಿ ಅನಸೂಯ……!

Follow Us :

ತೆಲುಗು ಸ್ಟಾರ್‍ ಬ್ಯೂಟಿ ಅನಸೂಯ ಭಾರದ್ವಾಜ್ ಇತ್ತೀಚಿಗೆ ಸೋಷಿಯಲ್ ಮಿಡಿಯಾದ ಮೂಲಕ ಹೆಚ್ಚು ಕ್ರೇಜ್ ಪಡೆದುಕೊಂಡಿದ್ದಾರೆ. ಆಕೆ ಹಂಚಿಕೊಳ್ಳುವ ಪೋಸ್ಟ್ ಗಳು ಕಡಿಮೆ ಸಮಯದಲ್ಲೇ ಸಖತ್ ವೈರಲ್ ಸಹ ಆಗುತ್ತಿರುತ್ತದೆ. ಜೊತೆಗೆ ಅದೇ ರೀತಿ ಟ್ರೋಲ್ ಸಹ ಆಗುತ್ತಿರುತ್ತಾರೆ. ಮುಖ್ಯವಾಗಿ ಆಕೆಯನ್ನು ಆಂಟಿ ಎಂದು ಟ್ರೋಲ್ ಮಾಡುತ್ತಿರುತ್ತಾರೆ. ಅದಕ್ಕೆ ಅನಸೂಯ ಸಹ ಸ್ಟ್ರಾಂಗ್ ಕೌಂಟರ್‍ ನೀಡುತ್ತಿರುತ್ತಾರೆ ಜೊತೆಗೆ ಆಕೆ ಕೆಲವರ ಮೇಲೆ ಕಾನೂನು ರೀತ್ಯ ಕ್ರಮ ಸಹ ತೆಗೆದುಕೊಂಡಿದ್ದಾರೆ. ಅಷ್ಟಕ್ಕೂ ಅನಸೂಯ ರವರಿಗೆ ಆಂಟಿ ಎಂದರೇ ಏಕೆ ಅಷ್ಟು ಕೋಪ ಎಂಬುದರ ಬಗ್ಗೆ ಶಾಕಿಂಗ್ ಉತ್ತರ ನೀಡಿದ್ದಾರೆ.

ನಟಿ ಅನಸೂಯ ಆಂಟಿ ಎಂಬ ಟ್ರೋಲ್ ವಿರುದ್ದ ದೊಡ್ಡ ಯುದ್ದವೇ ಮಾಡಿದ್ದರು. ಆಂಟಿ ಎಂದು ಹೇಳುವುದು ಕಿರುಕುಳಕ್ಕೆ ಸಮಾನವಾಗಿದೆ. ನಾನು ನಿಮ್ಮ ಮೇಲೆ ಕಾನೂನು ರೀತ್ಯ ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಎಚ್ಚರಿಕೆ ನೀಡಿದ್ದರು. ಲೈಗರ್‍ ಸಿನೆಮಾದ ಬಗ್ಗೆ ಅನಸೂಯ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಸುಮಾರು ಎರಡು ಮೂರು ದಿನಗಳ ಕಾಲ ಅನಸೂಯ ಹಾಗೂ ವಿಜಯ್ ದೇವರಕೊಂಡ ಫ್ಯಾನ್ಸ್ ನಡುವೆ ಕಾಮೆಂಟ್ ಗಳ ಯುದ್ದವೇ ನಡೆದಿತ್ತು. ಅನಸೂಯ ಕೆಲವರ ಮೇಲೆ ಸೈಬರ್‍ ಕ್ರೈಂ ವಿಭಾಗಕ್ಕೆ ದೂರನ್ನು ಸಹ ನೀಡಿದ್ದರು. ಈ ಹಿಂದೆ ಸಹ ಅನಸೂಯ ರವರನ್ನು ಆಂಟಿ ಎಂದೂ ಹೇಳುತ್ತಿದ್ದರು. ಆದರೆ ಮದುವೆಯಾಗಿ ಇಬ್ಬರು ಮಕ್ಕಳಿದ್ದರೂ ಅಂತಹವರು ಸಹ ಆಂಟಿ ಎಂದು ಹೇಳುತ್ತಿದ್ದಾರೆ. ಈ ಕಾರಣದಿಂದ ನನಗೆ ತುಂಬಾ ಕಿರಿಕಿರಿ ಆಗುತ್ತಿದೆ ಎಂದು ಅನಸೂಯ ಆರೋಪಿಸುತ್ತಿದ್ದಾರೆ.

ಇನ್ನೂ ಆಂಟಿ ಎಂದರೇ ಏಕೆ ಅಷ್ಟು ಕೋಪ ಎಂಬ ವಿಚಾರದ ಬಗ್ಗೆ ಮೊದಲ ಬಾರಿಗೆ ಸ್ಪಂದಿಸಿದ್ದಾರೆ. ಆಂಟಿ ಅಂದರೇ ಏಕೆ ಕೋಪ ಎಂದು ವಿವರಣೆ ನೀಡಿದ್ದಾರೆ. ಆನ್ ಲೈನ್ ಚಿಟ್ ಚಾಟ್ ನಲ್ಲಿ ಅಭಿಮಾನಿಯೊಬ್ಬ ಅನಸೂಯ ರವರಿಗೆ ಆಂಟಿ ಎಂದರೇ ಏಕೆ ನಿಮಗೆ ಅಷ್ಟು ಕೋಪ ಎಂದು ಪ್ರಶ್ನೆ ಕೇಳಿದ್ದಾರೆ. ಅದಕ್ಕೆ ಅನಸೂಯ ಸಹ ಉತ್ತರ ನೀಡಿದ್ದಾರೆ. ಹೌದು ಹಾಗೇ ಕರೆದರೇ ನನಗೆ ಕೋಪ ಬರುತ್ತದೆ. ಏಕೆಂದರೇ ಅವರು ಆ ರೀತಿ ಕೂಗುವುದರ ಹಿಂದೆ ಬೇರೆ ಅರ್ಥ ಇರುತ್ತದೆ.  ಆದರೆ ಈ ಮದ್ಯೆ ನನಗೆ ಕೋಪ ಬರುತ್ತಿಲ್ಲ. ಆ ಟ್ರೋಲರ್‍ ಗಳ ಬಗ್ಗೆ ತಲೆಗೆಡಿಸಿಕೊಳ್ಳುವುದಕ್ಕಿಂತ ಮುಖ್ಯವಾದ ಬೇರೆ ಕೆಲಸಗಳು ತುಂಬಾನೆ ಇವೆ ಎಂದು ಅನಸೂಯ ಉತ್ತರ ನೀಡಿದ್ದಾರೆ. ಸದ್ಯ ಅನಸೂಯ ಉತ್ತರ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಇನ್ನೂ ನಟಿ ಅನಸೂಯ ಜರ್ಬದಸ್ತ್ ಶೋ ನಿಂದ ಫೇಂ ಪಡೆದುಕೊಂಡರು. ಸದ್ಯ ಕಿರುತೆರೆಗೆ ಬ್ರೇಕ್ ಕೊಟ್ಟ ಅನಸೂಯ ತನ್ನ ಸಂಪೂರ್ಣ ಗಮನವನ್ನು ಸಿನೆಮಾಗಳ ಮೇಲೆ ಇಟ್ಟಿದ್ದಾರೆ. ಬ್ಯಾಕ್ ಟು ಬ್ಯಾಕ್ ಸ್ಟಾರ್‍ ಗಳ ಸಿನೆಮಾಗಳಲ್ಲಿ ನಟಿಸುತ್ತಿದ್ದಾರೆ. ಆಕೆ ಇತ್ತಿಚಿಗಷ್ಟೆ ಬಿಡುಗಡೆಯಾದ ರಂಗಮಾರ್ತಾಂಡ ಸಿನೆಮಾದಲ್ಲೂ ನಟಿಸಿದ್ದರು. ಇನ್ನೂ ಪುಷ್ಪಾ-2 ಸಿನೆಮಾದಲ್ಲೂ ಸಹ ಅನಸೂಯ ನಟಿಸುತ್ತಿದ್ದು, ಈ ಸಿನೆಮಾದ ಜೊತೆಗೆ ಆಕೆಯ ಕೈಯಲ್ಲಿ ಮತಷ್ಟು ಪ್ರಾಜೆಕ್ಟ್ ಗಳಿವೆ ಎನ್ನಲಾಗಿದೆ.