Film News

ಹೌಸ್ ಆಫ್ ಮಂಚೂಸ್ ಕೂಡ ಫೇಕ್? ನಮಗೂ ಅದಕ್ಕೂ ಸಂಬಂಧವಿಲ್ಲ ಎಂದ ಮಂಚು ಮನೋಜ್ ಅಂಡ್ ಲಕ್ಷ್ಮೀ…..!

ಕೆಲವು ದಿನಗಳಿಂದ ತೆಲುಗು ಸಿನಿರಂಗದ ಮಂಚು ಬ್ರದರ್ಸ್ ನಡುವೆ ಕೋಲ್ಡ್ ವಾರ್‍ ನಡೆಯುತ್ತಿದೆ ಎಂಬ ಸುದ್ದಿಗಳು ಹರಿದಾಡುತ್ತಲೇ ಇದೆ. ಅವರ ಹೈಡ್ರಾಮಾ ಸಿನೆಮಾದಂತೆ ಸಾಗುತ್ತಲೇ ಇದೆ. ಮಂಚು ಮನೋಜ್ ತನ್ನ ಸೋಷಿಯಲ್ ಮಿಡಿಯಾ ಖಾತೆಯಲ್ಲಿ ಮಂಚು ವಿಷ್ಣು ಹಾಗೂ ಮನೋಜ್ ನಡುವೆ ಗಲಾಟೆಯಾದ ವಿಡಿಯೋ ಒಂದನ್ನು ಸಹ ಹಂಚಿಕೊಂಡು ಆ ಸುದ್ದಿಗಳಿಗೆ ಮತ್ತಷ್ಟು ಬಲ ತಂದುಕೊಟ್ಟಿದ್ದರು. ಈ ನಡುವೆ ಮಂಚು ವಿಷ್ಣು ಇದೆಲ್ಲಾ ರಿಯಾಲಿಟಿ ಶೋನ ಪ್ರೊಮೋ ಎಂಬಂತೆ ಹೌಸ್ ಆಫ್ ಮಂಚೂಸ್ ಎಂಬ ಪ್ರೊಮೋ ಸಹ ಹಂಚಿಕೊಂಡಿದ್ದರು. ಇದೀಗ ಅದೂ ಸಹ ಫೇಕ್ ಎಂಬ ಮಾತುಗಳು ಕೇಳಿಬರುತ್ತಿವೆ. ನಮಗೂ ಅದಕ್ಕೂ ಸಂಬಂಧವಿಲ್ಲ ಎಂದು ಮಂಚು ಮನೋಜ್ ಹಾಗೂ ಲಕ್ಷ್ಮೀ ಹೇಳಿದ್ದಾರೆ ಎನ್ನಲಾಗುತ್ತಿದೆ.

ತೆಲುಗು ಸಿನಿರಂಗದ ಮೋಹನ್ ಬಾಬು ರವರ ಮಂಚು ಕುಟುಂಬದಲ್ಲಿ ಎಲ್ಲವೂ ಸರಿಯಿಲ್ಲ. ಬ್ರದರ್ಸ್ ನಡುವೆ ಕೋಲ್ಡ್ ವಾರ್‍ ನಡೆಯುತ್ತಿದೆ. ಮಂಚು ವಿಷ್ಣು ಹಾಗೂ ಮನೋಜ್ ನಡುವೆ ವಿಬೇದಗಳು ಉಂಟಾಗಿದ್ದು, ಅವರಿಬ್ಬರ ನಡುವೆ ಕೋಲ್ಡ್ ವಾರ್‍ ನಡೆಯುತ್ತಿದೆ ಎಂಬೆಲ್ಲಾ ಸುದ್ದಿಗಳು ಕೇಳಿಬರುತ್ತಲೇ ಇದೆ. ಇನ್ನೂ ಕೆಲವು ದಿನಗಳ ಹಿಂದೆಯಷ್ಟೆ ಮಂಚು ವಿಷ್ಣು ವಿಡಿಯೋ ಒಂದನ್ನು ಶೇರ್‍ ಮಾಡಿದ್ದರು. ಹೌಸ್ ಆಫ್ ಮಂಚೂಸ್ ಟೈಟಲ್ ನಡಿ ರಿಯಾಲಿಟಿ ಶೋ ಮಾಡುತ್ತಿದ್ದೇವೆ. ನಮ್ಮ ನಡುವೆ ಯಾವುದೇ ವಿಬೇದಗಳಿಲ್ಲ. ಇದೆಲ್ಲಾ ರಿಯಾಲಿಟಿ ಶೋಗೆ ಸಂಬಂಧಿಸಿದ್ದು,  ಮನೋಜ್ ಪೋಸ್ಟ್ ಮಾಡಿದಂತಹ ವಿಡಿಯೋ ಸಹ ಒಂದು ಫ್ರಾಂಕ್ ವಿಡಿಯೋ ಎಂದು ಹೇಳಿದ್ದರು. ಆದರೆ ಅನೇಕರು ಕುಟುಂಬದ ಮರ್ಯಾದೆಯನ್ನು ಉಳಿಸಿಕೊಳ್ಳಲು ವಿಷ್ಣು ರಿಯಾಲಿಟಿ ಶೋ ಎಂಬುದನ್ನು ತೆರೆಗೆ ತರಲು ಬಯಸಿದ್ದಾರೆ ಎಂಬ ಪ್ರಚಾರ ಸಹ ಕೇಳಿಬಂತು.

ಇದೀಗ ಅದಕ್ಕೆ ಇದೀಗ ಅದು ಸತ್ಯ ಎಂಬ ಮಾತುಗಳು ಕೇಳಿಬರುತ್ತಿವೆ. ಮನೋಜ್ ಹಾಗೂ ಮಂಚು ಲಕ್ಷ್ಮೀ ಕೆಲವೊಂದು ಹೇಳಿಕೆಗಳನ್ನು ನೀಡಿದ್ದಾರೆ. ಹೌಸ್ ಆಫ್ ಮಂಚೂಸ್ ಶೋ ಬಗ್ಗೆ ಕೇಳಿದ್ದು, ಅದರ ಬಗ್ಗೆ ನಮಗೆ ಐಡಿಯಾ ಇಲ್ಲ. ಜೊತೆಗೆ ನಮಗೂ ಅದಕ್ಕೂ ಏನು ಸಂಬಂಧವಿಲ್ಲ ಎಂದಿದ್ದಾರಂತೆ ಲಕ್ಷ್ಮೀ. ಜೊತೆಗೆ ಮನೋಜ್ ಟೀಂ ಸಹ ಇದನ್ನು ಖಂಡಿಸಿದೆಯಂತೆ. ಮನೋಜ್ ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡ ವಿಡಿಯೋ ನಿಜವಾದದು. ಮೋಹನ್ ಬಾಬು ರವರ ಸಂಬಂಧಿ ಸಾರಥಿ ಮನೆಗೆ ಹೋಗಿ ವಿಷ್ಣು ಗಲಾಟೆ ಮಾಡಿದ್ದಾರೆ. ಬಳಿಕ ಸಾರಥಿ ಪತ್ನಿ ಮನೋಜ್ ಗೆ ಕೆರೆ ಮಾಡಿ ಹೇಳಿದ್ದಾರೆ. ಬಳಿಕ ಮನೋಜ್ ಅಲ್ಲಿಗೇ ಹೋದರು ಎಂದು ಟೀಂ ಹೇಳಿದೆಯಂತೆ. ಇದರಿಂದ ಮನೋಜ್ ಹಂಚಿಕೊಂಡ ವಿಡಿಯೋ ನಿಜ ಎಂದು ಹೇಳಲಾಗುತ್ತಿದೆ.

ಈ ಎಲ್ಲಾ ಕಾರಣಗಳಿಂದ ಹೌಸ್ ಆಫ್ ಮಂಚೂಸ್ ಎಂಬುದು ಕೇವಲ ಡಮ್ಮಿ ಶೋ ಎಂದು, ಮಂಚು ವಿಷ್ಣು ತಮ್ಮ ಕುಟುಂಬದ ಮರ್ಯಾದೆ ಉಳಿಸಿಕೊಳ್ಳಲು ಈ ರೀತಿ ಮಾಡಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಇನ್ನೂ ವಿಷ್ಣು ಅನೌನ್ಸ್ ಮಾಡಿದ ರಿಯಾಲಿಟಿ ಶೋ ಇರುತ್ತಾ ಅಥವಾ ಇಲ್ಲವೇ ಎಂಬ ಅನುಮಾನಗಳು ಹುಟ್ಟಿಕೊಂಡಿವೆ. ಇದರ ಜೊತೆಗೆ ಇತ್ತೀಚಿಗೆ ನಡೆದ ಶೋ ಒಂದರಲ್ಲೂ ಸಹ ಮೋಹನ್ ಬಾಬು ಗಲಾಟೆ ನಡೆದಿರುವ ಬಗ್ಗೆ ಪರೋಕ್ಷವಾಗಿ ಒಪ್ಪಿಕೊಂಡಿದ್ದರು.

Most Popular

To Top