ಈ ಜೀವನಕ್ಕೆ ಇಷ್ಟು ಸಾಕು ಎಂದು ಬಿಕ್ಕಿ ಬಿಕ್ಕಿ ಅತ್ತ ಸ್ಟಾರ್ ಬ್ಯೂಟಿ ಅನಸೂಯ, ಎಮೋಷನಲ್ ಆದ ಬ್ಯೂಟಿ….!

ಜಬರ್ದಸ್ತ್ ಮೂಲಕ ಫೇಂ ಸಂಪಾದಿಸಿಕೊಂಡ ಬ್ಯೂಟಿ ಅನಸೂಯ ಇದೀಗ ತನ್ನ ಸಂಪೂರ್ಣ ಗಮನವನ್ನು ಸಿನೆಮಾಗಳ ಮೇಲೆ ಇಟ್ಟಿದ್ದಾರೆ. ಈ ಹಾದಿಯಲ್ಲೇ ಆಕೆ ಸಾಲು ಸಾಲು ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಅನೇಕ ಸ್ಟಾರ್‍ ನಟರ ಸಿನೆಮಾದಲ್ಲಿನ ಪ್ರಮುಖ…

ಜಬರ್ದಸ್ತ್ ಮೂಲಕ ಫೇಂ ಸಂಪಾದಿಸಿಕೊಂಡ ಬ್ಯೂಟಿ ಅನಸೂಯ ಇದೀಗ ತನ್ನ ಸಂಪೂರ್ಣ ಗಮನವನ್ನು ಸಿನೆಮಾಗಳ ಮೇಲೆ ಇಟ್ಟಿದ್ದಾರೆ. ಈ ಹಾದಿಯಲ್ಲೇ ಆಕೆ ಸಾಲು ಸಾಲು ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಅನೇಕ ಸ್ಟಾರ್‍ ನಟರ ಸಿನೆಮಾದಲ್ಲಿನ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇದೀಗ ಆಕೆ ರಂಗಮಾರ್ತಾಂಡ ಸಿನೆಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನೆಮಾ ಯುಗಾದಿ ಹಬ್ಬದ ಅಂಗವಾಗಿ ತೆರೆಗೆ ಬರಲಿದ್ದು. ಈ ಸಿನೆಮಾದ ಪ್ರಮೋಷನ್ ಕಾರ್ಯಕ್ರಮದಲ್ಲಿ ಅನಸೂಯ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಅಷ್ಟಕ್ಕೂ ಪ್ರಮೋಷನ್ ಕಾರ್ಯಕ್ರಮದಲ್ಲಿ ಆಕೆ ಅತ್ತಿದ್ದು ಯಾಕೆ ಎಂಬ ವಿಚಾರಕ್ಕೆ ಬಂದರೇ,

ನಟಿ ಅನಸೂಯ ರಂಗಮಾರ್ತಾಂಡ ಸಿನೆಮಾದಲ್ಲಿ ಗರ್ಭೀಣಿಯ ಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನೆಮಾ ಮಾ.22 ರಂದು ಯುಗಾದಿ ಹಬ್ಬದ ಅಂಗವಾಗಿ ಬಿಡುಗಡೆಯಾಗಿದೆ. ಈ ಸಿನೆಮಾದಲ್ಲಿ ಸೀನಿಯರ್‍ ನಟ ಪ್ರಕಾಶ್ ರಾಜ್, ಸೀನಿಯರ್‍ ನಟಿ ರಮ್ಯಕೃಷ್ಣ ಪ್ರಧಾನ ಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನೆಮಾದ ಪ್ರಮೋಷನ್ ಕಾರ್ಯಕ್ರಮಗಳೂ ಸಹ ಭರದಿಂದ ಸಾಗಿದೆ. ಪ್ರಮೋಷನ್ ಅಂಗವಾಗಿ ಅನಸೂಯ ಪ್ರೆಸ್ ಮೀಟ್ ನಲ್ಲಿ ಮಾತನಾಡುತ್ತಾ ಎಮೋಷನಲ್ ಆಗಿದ್ದಾರೆ. ಆಕೆ ಸಿನೆಮಾದ ಬಗ್ಗೆ ಮಾತನಾಡುತ್ತಾ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಸದ್ಯ ಆಕೆಯ ಎಮೋಷನಲ್ ಕಾಮೆಂಟ್ ಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.

ಪ್ರೆಸ್ ಮೀಟ್ ನಲ್ಲಿ ಅನಸೂಯ ಮಾತನಾಡುತ್ತಾ ನಾನು ಈ ಸಿನೆಮಾದ ಶೂಟೀಂಗ್ ಮುಗಿಸಿದ್ದು, ಡಬ್ಬಿಂಗ್ ಸಹ ಪೂರ್ಣಗೊಳಿಸಿದ ಬಳಿಕ ರಂಗಮಾರ್ತಾಂಡ ಸಿನೆಮಾ ತೆರೆ ಮೇಲೆ ನೋಡಲು ಎದುರು ನೋಡುತ್ತಿದ್ದೆ.  ಸಿನೆಮಾದ ಪ್ರಿವ್ಯೂ ಸಹ ನೋಡಿದೆ. ಈ ಸಿನೆಮಾ ತುಂಬಾ ಚೆನ್ನಾಗಿದೆ. ನನ್ನ ಜೀವನಕ್ಕೆ ಇದು ಸಾಕು. ರಂಗಮಾರ್ತಾಂಡ ಸಿನೆಮಾದಲ್ಲಿ ನಾನು ಇರುವುದು ತುಂಬಾನೆ ಸಂತೋಷಕರವಾಗಿದೆ. ಎಂದು ಮಾತನಾಡುತ್ತಾ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಎಲ್ಲರ ಮುಂದೆ ಕಣ್ಣೀರು ಹಾಕಿದ್ದಾರೆ. ಎಮೋಷನಲ್ ಆಗಿಯೇ ಸಿನೆಮಾದ ಬಗ್ಗೆ ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಸದ್ಯ ಆಕೆ ನೀಡಿದ ಹೇಳಿಕೆಗಳು ವೈರಲ್ ಆಗಿದೆ.

ಇನ್ನೂ ಖ್ಯಾತ ನಿರ್ದೇಶಕ ಕೃಷ್ಣವಂಶಿ ಈ ರಂಗಮಾರ್ತಾಂಡ ಸಿನೆಮಾ ನಿರ್ದೇಶನ ಮಾಡಿದ್ದಾರೆ. ಮರಾಠಿ ಸಿನೆಮಾದ ರಿಮೇಕ್ ಇದಾಗಿದೆ. ಈಗಾಗಲೇ ಈ ಸಿನೆಮಾ ಪ್ರೀವ್ಯೂ ನೋಡಿದ ಅನೇಕ ಸೆಲೆಬ್ರೆಟಿಗಳೂ ಸಹ ಕಣ್ಣಿರಾಕಿದ್ದಾರೆ. ಇನ್ನೂ ಹೌಸ್ ಪುಲ್ ಮೂವಿಸ್ ಹಾಗೂ ರಾಜ ಶ್ಯಾಮಲ ಎಂಟರ್‍ ಟ್ರೈನ್ ಮೆಂಟ್ಸ್ ಬ್ಯಾನರ್‍ ಈ ಸಿನೆಮಾ ನಿರ್ಮಾಣ ಮಾಡಿದ್ದು, ಇಳಯರಾಜ ಸಂಗೀತ ನೀಡಿದ್ದಾರೆ. ಈ ಸಿನೆಮಾ ಯಾವ ರೀತಿಯ ಸಕ್ಸಸ್ ಕಾಣುತ್ತದೆ ಎಂಬುದನ್ನು ಕಾದು ನೋಡಬೇಕಿದೆ.