Film News

ಪಡ್ಡೆಹುಡುಗರ ನಿದ್ದೆಕದ್ದ ಸ್ಟಾರ್ ಬ್ಯೂಟಿ ಅನಸೂಯ, ಯಂಗ್ ಬ್ಯೂಟಿಯರನ್ನು ಮೀರಿಸುವಂತಹ ಲುಕ್ಸ್ ಕೊಟ್ಟ ನಟಿ…..!

ಕಿರುತೆರೆಯ ಮೂಲಕ ಖ್ಯಾತಿ ಪಡೆದುಕೊಂಡ ನಟಿ ಅನಸೂಯ ಇದೀಗ ಸ್ಟಾರ್‍ ಬ್ಯೂಟಿಯಾಗಿದ್ದಾರೆ. ಜಬರ್ದಸ್ತ್ ಶೋ ಮೂಲಕ ಹಾಟ್ ಆಂಕರ್‍ ಎಂಬ ಖ್ಯಾತಿಗೆ ಗುರಿಯಾದ ಈಕೆ ಬಳಿಕ ಸಿನೆಮಾಗಳತ್ತ ಮುಖ ಮಾಡಿದರು. ಸಿನೆಮಾಗಳಲ್ಲಿ ಒಳ್ಳೆಯ ಅವಕಾಶಗಳನ್ನು ಗಿಟ್ಟಿಸಿಕೊಂಡು ಪುಲ್ ಬ್ಯುಸಿಯಾಗಿದ್ದಾರೆ. ಸಿನೆಮಾಗಳ ಜೊತೆಗೆ ಸೋಷಿಯಲ್ ಮಿಡಿಯಾದಲ್ಲೂ ಸಹ ಸಾಲು ಸಾಲು ಪೊಟೋಶೂಟ್ಸ್ ಮೂಲಕ ಫ್ಯಾನ್ ಫಾಲೋಯಿಂಗ್ ಬೆಳೆಸಿಕೊಳ್ಳುತ್ತಿದ್ದಾರೆ. ಇದೀಗ ಆಕೆ ಹಂಚಿಕೊಂಡ ಲೇಟೆಸ್ಟ್ ಪೊಟೋಗಳು ಪಡ್ಡೆ ಹುಡುಗರ ನಿದ್ದೆಗೆಡಿಸಿದೆ ಎನ್ನಲಾಗುತ್ತಿದೆ.

ತೆಲುಗಿನ ಖ್ಯಾತ ಜಬರ್ದಸ್ತ್ ಶೋ ಮೂಲಕ ಫೇಂ ಪಡೆದುಕೊಂಡ ನಟಿ ಅನಸೂಯ ಸದ್ಯ ಕಿರುತೆರೆಗಳಿಂದ ದೂರ ಉಳಿದಿದ್ದು, ಸಿನೆಮಾಗಳಲ್ಲೇ ಪುಲ್ ಬ್ಯುಸಿಯಾಗಿದ್ದಾರೆ. ಜಬರ್ದಸ್ತ್ ಶೋ ಮೂಲಕ ಕಿರುತೆರೆಯಲ್ಲಿ ಸೆನ್ಷೇಷನ್ ಕ್ರಿಯೇಟ್ ಮಾಡಿ, ಕಡಿಮೆ ಸಮಯದಲ್ಲೇ ಸ್ಟಾರ್‍ ಆಂಕರ್‍ ಆದರು. ಆಂಕರಿಂಗ್ ಜೊತೆಗೆ ತನ್ನ ದೇಹದ ಮೈಮಾಟದ ಮೂಲಕ ಅಪಾರ ಸಂಖ್ಯೆಯ ಅಭಿಮಾನಿ ಬಳಗವನ್ನು ಪಡೆದುಕೊಂಡರು. ಆ ಸಮಯದಲ್ಲಿ ಹಾಟ್ ಆಂಕರ್‍ ಎಂದೇ ಕ್ರೇಜ್ ಪಡೆದುಕೊಂಡರು. ಜೊತೆಗೆ ಆಕೆ ಧರಿಸುವಂತಹ ಬಟ್ಟೆಗಳ ಕಾರಣದಿಂದಲೂ ಭಾರಿ ಟ್ರೋಲ್ ಸಹ ಆದರು. ಜೊತೆಗೆ ಅನಸೂಯ ಕೆಲವೊಂದು ಕಾಂಟ್ರವರ್ಸಿ ಕಾಮೆಂಟ್ ಗಳ, ವಿವಾದಾತ್ಮಕ ಪೋಸ್ಟ್ ಗಳ ಕಾರಣದಿಂದ ಆಕೆ ಟ್ರೋಲ್ ಸಹ ಆಗುತ್ತಿರುತ್ತಾರೆ.

ಇನ್ನೂ ನಟಿ ಅನಸೂಯ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ಆಕ್ಟೀವ್ ಆಗಿರುತ್ತಾರೆ. ಸಾಲು ಸಾಲು ಪೊಟೋಶೂಟ್ಸ್, ವಿಡಿಯೋಗಳ ಮೂಲಕ ಅಭಿಮಾನಿಗಳನ್ನು ಹಾಗೂ ನೆಟ್ಟಿಗರನ್ನು ರಂಜಿಸುತ್ತಿರುತ್ತಾರೆ. ಇತ್ತೀಚಿಗೆ ಆಕೆ ಹೆಚ್ಚಾಗಿ ಸೀರೆಯಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಇದೀಗ ಆಕೆ ಟ್ರೆಂಡಿ ವೇರ್‍ ನಲ್ಲಿ ಹಾಟ್ ಲುಕ್ಸ್ ಕೊಟ್ಟಿದ್ದಾರೆ. ಮಿನಿ ಡ್ರೆಸ್ ನಲ್ಲಿ ಆಕೆ ಮಾದಕ ನೋಟ ಬೀರುತ್ತಾ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದಾರೆ. ಆಕೆಯ ಲೇಟೆಸ್ಟ್ ಲುಕ್ಸ್ ನೋಡಿದ ಅನೇಕರು ಶಾಕ್ ಸಹ ಹಾಕಿದ್ದಾರೆ. ಈ ಪೊಟೋಗಳಿಗೆ ಆಕೆ ವಿಭಿನ್ನವಾದ ಕ್ಯಾಪ್ಷನ್ ಸಹ ಹಾಕಿದ್ದಾರೆ. ನಾನು ಮಹಿಳೆ, ಭಯವಿಲ್ಲ, ಸೆಕ್ಸಿಯಾಗಿರುತ್ತೇನೆ, ವಿಜೇತಳು, ಸೃಜನಾತ್ಮಕತೆಯುಳ್ಳ ಮಹಿಳೆ, ನಿಮಗೆ ಏನು ಬೇಕಾದರು ಕಲಿಸಬಲ್ಲೆ, ನಾನು ನಿಮ್ಮನ್ನು ಪ್ರೀತಿಸಬಲ್ಲೆ ಎಂದು ಕ್ಯಾಪ್ಷನ್ ಹಾಕಿದ್ದಾರೆ. ಅನಸೂಯರವರನ್ನು ಟ್ರೋಲ್ ಮಾಡುವವರಿಗಾಗಿ ಆಕೆ ಈ ಕ್ಯಾಪ್ಷನ್ ಇಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.

ಇನ್ನೂ ಅನಸೂಯ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವಿವಾದಗಳಿಗೆ ಗುರಿಯಾಗಿದ್ದರು. ಆದರೆ ಈ ವರ್ಷ ಆಕೆ ಈ ಎಲ್ಲಾ ವಿವಾದಗಳಿಂದ ದೂರ ಉಳಿಯಬೇಕು, ಸದ್ಯದ ಡಿಜಿಟಲ್ ಯುಗದಲ್ಲಿ ಹೇಗಿರಬೇಕು ಎಂಬುದನ್ನು ತಿಳಿದುಕೊಂಡಿದ್ದೇನೆ ಎಂದು ಹೇಳಿದ್ದರು. ಕೊನೆಯದಾಗಿ ಆಕೆ ರಜಾಕಾರ್‍ ಎಂಬ ಸಿನೆಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಆಕೆ ಪುಷ್ಪಾ-2 ಸೇರಿದಂತೆ ಮತಷ್ಟು ಸಿನೆಮಾಗಳಲ್ಲಿ ಪುಲ್ ಬ್ಯುಸಿಯಾಗಿದ್ದಾರೆ.

Most Popular

To Top