Film News

ಸಿಎಂ ಸಿದ್ದರಾಮಯ್ಯ ವಿರುದ್ದ ಕಿಡಿಕಾರಿದ ನಟ ಚೇತನ್, ಮೌಡ್ಯ ತೊರೆಯುವಂತೆ ಕರೆ ನೀಡಿದ ನಟ……!

ಸದಾ ಒಂದಲ್ಲ ಒಂದು ವಿಚಾರದ ಬಗ್ಗೆ ಮಾತನಾಡುತ್ತಾ ಸುದ್ದಿಯಾಗುವ ಕನ್ನಡ ನಟ ಚೇತನ್ ಇದೀಗ ಸಿಎಂ ಸಿದ್ದರಾಮಯ್ಯ ರವರ ವಿರುದ್ದ ಹರಿಹಾಯ್ದಿದ್ದಾರೆ. ವೈಚಾರಿಕತೆಯ ಬಗ್ಗೆ ಮಾತನಾಡುವಂತಹ ರಾಜಕಾರಣಿಗಳು ಚುನಾವಣೆ ಬಂದಾಗ ಮಾತ್ರ ಟೆಂಪಲ್ ರನ್ ಮಾಡೋದು ಅರ್ಥವಿಲ್ಲದ ಸಂಗತಿಯಾಗಿದೆ. ಸತೀಶ್ ಜಾರಕೀಹೊಳಿ ಸೇರಿದಂತೆ ಅನೇಕರು ಚುನಾವಣೆಯ ಸಮಯದಲ್ಲಿ ಟೆಂಪಲ್ ರನ್ ಮಾಡುತ್ತಿರುವುದದು ದುರಂತದ ಸಂಗತಿ ಎಂದು ನಟ ಚೇತನ್ ವಾಗ್ದಾಳಿ ನಡೆಸಿದ್ದಾರೆ.

ಕಲಬುರ್ಗಿಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ನಟ ಚೇತನ್ ಚುನಾವಣೆಯ ಸಮಯದಲ್ಲಿ ರಾಜಕೀಯ ನಾಯಕರ ಟೆಂಪಲ್ ರನ್ ಬಗ್ಗೆ ಕಿಡಿಕಾರಿದ್ದಾರೆ. ಬುದ್ದ, ಬಸವ, ಅಂಬೇಡ್ಕರ್‍ ವಾದ ಹಾಗೂ ವೈಚಾರಿಕತೆಯ ಬಗ್ಗೆ ಮಾತನಾಡುವಂತಹ ಸತೀಶ್ ಜಾರಕಿಹೊಳಿ ರವರು ಟೆಂಪಲ್ ರನ್ ಮಾಡುತ್ತಿರುವುದು ದುರಂತವೇ ಸರಿ. ಸತೀಶ್ ಜಾರಕಿಹೊಳಿ ರಾಮಮಂದಿರ ನಿರ್ಮಾಣದ ಸಮಯದಲ್ಲಿ ವಾಲ್ಮೀಕಿ ಮಂದಿರ ಆಗಬೇಕು ಎಂದಿದ್ದರು. ಆದರೆ ಅದೂ ಸಹ ಮೌಡ್ಯವೇ, ಚುನಾವಣೆಗಾಗಿ ಇಂತಹವರೆಲ್ಲಾ ಯಾವ ಹಂತಕ್ಕೆ ಬೇಕಾದರೂ ಹೋಗುತ್ತಾರೆ ಎಂಬುದಕ್ಕೆ ಇದೊಂದು ಒಳ್ಳೆಯ ಸಾಕ್ಷಿ ಎನ್ನಬಹುದು. ರಾಜಕಾರಣದಲ್ಲಿ ಪ್ರಾಮಾಣಿಕ ಕಾರ್ಯಕರ್ತರಿಗೆ ಅವಕಾಶ ಸಿಗಬೇಕು. ಆದರೆ ರಾಜ್ಯದಲ್ಲಿ ಮಕ್ಕಳು, ಸೊಸೆ, ಅಳಿಯಂದಿರಗೆ ಟಿಕಟ್ ಕೊಡಲಾಗಿದೆ. ಇದರಿಂದ ರಾಜ್ಯಕ್ಕೂ ಆ ಪಕ್ಷಕ್ಕೂ ಒಳ್ಳೆಯದಲ್ಲ ಎಂದು ಕಿಡಿಕಾರಿದ್ದಾರೆ. ಸಚಿವರಾದ ಸತೀಶ್ ಜಾರಕಿಹೊಳಿಯವರು ನಮ್ಮ ಸಿದ್ದಾಂತವನ್ನು ಪ್ರಮಾಣಿಕರು ಎಂದು ತೋರಿಸೋಕೆ ಬಳಸಿಕೊಳ್ಳುತ್ತಾರೆ. ಆದರೆ ಚುನಾವಣೆಯಲ್ಲಿ ಗೆಲ್ಲೊಕೆ ದೇವಸ್ಥಾನ ಬೇಕು. ಆದಿವಾಸಿಗಳು, ಶೂದ್ರರು, ಮಹಿಳೆಯರು, ಸಲಿಂಗಪ್ರೇಮಿಗಳು, ಅಲ್ಪಸಂಖ್ಯಾತರ ಪರ ಉತ್ತಮ ಸಾಮಜ ಕಟ್ಟಲು ನಮ್ಮೊಂದಿಗೆ ಬನ್ನಿ. ಅದನ್ನು ಬಿಟ್ಟು ನಮ್ಮ ಸಿದ್ದಾಂತ ಹೈಜಾಕಾ ಮಾಡ್ತೀರಾ, ಮತ್ತೊಂದು ಕಡೆ ಜೈ ಶ್ರೀರಾಮ ಕೂಡ ಹೈಜಾಕ್ ಮಾಡ್ತೀರಾ ಇದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನೆ ಮಾಡಿದ್ದಾರೆ.

ಇನ್ನೂ ಚೇತನ್ ಸಿಎಂ ಸಿದ್ದರಾಮಯ್ಯ ರವರಗೆ ಬಗ್ಗೆ ಸಹ ಆಕ್ರೋಷ ಹೊರಹಾಕಿದ್ದಾರೆ. ವೈಜ್ಞಾನಿಕತೆಯನ್ನು ಮರೆತ ರಾಜ್ಯಸರ್ಕಾರ ಸಹ ಜೈ ಶ್ರೀರಾಮ್ ಎಂದು ಹೇಳುತ್ತಿದೆ. ಬೆಂಗಳೂರು ಕಲಬುರಗಿ ವ್ಯಾಪ್ತಿಯಲ್ಲಿ ಮಳೆಯಿಲ್ಲದೇ ಜನ ಕಂಗಾಲಾಗಿದ್ದಾರೆ. ನೀರಿನ ಸಮಸ್ಯೆಯನ್ನು ಬಗೆಹರಿಸಲು ವೈಜ್ಞಾನಿಕವಾಗಿ ಕ್ರಮ ತೆಗದುಕೊಳ್ಳುವುದನ್ನು ಬಿಟ್ಟು ಮಳೆಗಾಗಿ ಮಲೆ ಮಹಾದೇವಪ್ಪ ದೇವಾಲಯಕ್ಕೆ ಹೋಗಿ ಸಿಎಂ ಪೂಜೆ ಮಾಡ್ತಾರೆ ಎಂದರೇ ಎಲ್ಲಿದೆ ವೈಜ್ಞಾನಿಕತೆ ಎಂದು ಕಿಡಿಕಾರಿದ್ದಾರೆ. 2013ರಲ್ಲಿ ಸಿದ್ದರಾಮಯ್ಯ ಸತ್ಯದ ಮೇಲೆ ಪ್ರಮಾಣವಚನ ಸ್ವೀಕರಿಸಿದ್ದರು. ಆದರೆ 2023ರಲ್ಲಿ ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಮತಕ್ಕಾಗಿ ಮೌಡ್ಯತೆ ಮರೆದು, ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಟೀಕೆ ಮಾಡಿದ್ದಾರೆ.

Most Popular

To Top