Film News

ಮೇಕಪ್ ಲೆಸ್ ಆಗಿ ಕಾಣಿಸಿಕೊಂಡ ಅನಸೂಯ, ಸಿಂಪಲ್ ಆಗಿ ಕ್ಯೂಟ್ ಆಗಿ ಅಭಿಮಾನಿಗಳನ್ನು ಫಿದಾ ಮಾಡಿದ ಸ್ಟಾರ್ ಬ್ಯೂಟಿ…..!

ಟಾಲಿವುಡ್ ಸ್ಟಾರ್‍ ಬ್ಯೂಟಿ ಅನಸೂಯ ಭಾರದ್ವಾಜ್ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ಆಕ್ಟೀವ್ ಆಗಿರುತ್ತಾರೆ. ಆಕೆ ಹಂಚಿಕೊಳ್ಳುವ ಪೊಟೋಗಳು ಕಡಿಮೆ ಸಮಯದಲ್ಲೇ ಸಖತ್ ವೈರಲ್ ಆಗುತ್ತಿರುತ್ತವೆ. ಸದಾ ಒಂದಲ್ಲ ಒಂದು ಪೋಸ್ಟ್ ಮೂಲಕ ಸದ್ದು ಮಾಡುತ್ತಲೇ ಇರುವಂತಹ ಇದೀಗ ಮೇಕಪ್ ಲೆಸ್ ಆಗಿ ಕಾಣಿಸಿಕೊಂಡಿದ್ದಾರೆ. ಮೇಕಪ್ ಲೆಸ್ ನಲ್ಲೂ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದು, ಆಕೆಯ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.

ತೆಲುಗು ಸಿನಿರಂಗದಲ್ಲಿ ಕಿರುತೆರೆಯ ಮೂಲಕ ಫೇಂ ಪಡೆದುಕೊಂಡ ನಟಿಯರ ಸಾಲಿಗೆ ಅನಸೂಯ ಭಾರದ್ವಾಜ್ ಸಹ ಸೇರುತ್ತಾರೆ. ಜಬರ್ದಸ್ತ್ ಶೋ ಮೂಲಕ ಫೇಂ ಪಡೆದುಕೊಂಡ ಅನಸೂಯ ಇದೀಗ ಕಿರುತೆರೆಯಿಂದ ದೂರವುಳಿದಿದ್ದಾರೆ. ಆದರೆ ಸೋಷಿಯಲ್ ಮಿಡಿಯಾದಲ್ಲಿ ಮಾತ್ರ ಪುಲ್ ಆಕ್ಟೀವ್ ಆಗಿದ್ದಾರೆ. ಬ್ಯಾಕ್ ಟು ಬ್ಯಾಕ್ ಸಿನೆಮಾಗಳ ಮೂಲಕ ಪುಲ್ ಬ್ಯುಸಿಯಾಗಿದ್ದಾರೆ. ಇನ್ನೂ ಸಿನೆಮಾಗಳಲ್ಲಿ ಎಷ್ಟೇ ಬ್ಯುಸಿಯಾಗಿದ್ದರೂ ಸಹ ಅನಸೂಯ ಪ್ರತಿನಿತ್ಯ ಸೋಷಿಯಲ್ ಮಿಡಿಯಾದಲ್ಲಿ ಪೋಸ್ಟ್ ಮಾಡುತ್ತಿರುತ್ತಾರೆ. ತನಗೇ ಅನಿಸಿದ್ದನ್ನು ನೇರವಾಗಿ ಹೇಳುವ ವ್ಯಕ್ತಿತ್ವ ಹೊಂದಿದ್ದಾರೆ.  ಜೊತೆಗೆ ಆಕೆಯ ಬಗ್ಗೆ ಬರುವ ಟ್ರೋಲ್ಸ್ ಗಳಿಗೂ ಸಹ ಅದೇ ಮಾದರಿಯಲ್ಲಿ ಕೌಂಟರ್‍ ಕೊಡುತ್ತಿರುತ್ತಾರೆ. ಜೊತೆಗೆ ಬ್ಯಾಕ್ ಟು ಬ್ಯಾಕ್ ಪೊಟೋಶೂಟ್ಸ್ ಮೂಲಕ ಎಲ್ಲರನ್ನೂ ತನ್ನತ್ತ ಸೆಳೆದುಕೊಳ್ಳುತ್ತಿರುತ್ತಾರೆ.

ನಟಿ ಅನಸೂಯ ಕೆಲವು ದಿನಗಳಿಂದ ಸೀರೆಯಲ್ಲಿ ಬ್ಯಾಕ್ ಟು ಬ್ಯಾಕ್ ಪೊಟೋಶೂಟ್ಸ್ ಹಂಚಿಕೊಂಡಿದ್ದರು. ಇದೀಗ ಊಹಿಸದ ರೀತಿಯಲ್ಲಿ ದರ್ಶನ ಕೊಟ್ಟಿದ್ದಾರೆ. ಮೇಕಪ್ ಲೆಸ್ ಆಗಿ ಆಕೆ ಕೆಲವೊಂದು ಪೊಟೋಗಳನ್ನು ಹಂಚಿಕೊಂಡಿದ್ದಾರೆ.  ಸದಾ ಮೇಕಪ್ ಮಾಡಿಕೊಂಡು ವಿವಿಧ ಡ್ರೆಸ್ ಗಳಲ್ಲಿ ಪೋಸ್ ಕೊಡುತ್ತಿದ್ದ ಅನಸೂಯ ಇದೀಗ ಮೇಕಪ್ ಲೆಸ್ ಆಗಿ ಕಾಣಿಸಿಕೊಂಡು ಎಲ್ಲರನ್ನು ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದಾರೆ. ಸಿಂಪಲ್ ಲುಕ್ಸ್ ನಲ್ಲಿ ಅನಸೂಯ ತುಂಬಾನೆ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾರೆ. ಸ್ಕಿನ್ ಟೋನ್ ಮೂಲಕ ಪಡ್ಡೆಹುಡುಗರ ನಿದ್ದೆಗೆಡಿಸಿದ್ದಾರೆ. ಸದ್ಯ ಆಕೆಯ ಈ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ. ಅಭಿಮಾನಿಗಳು ಹಾಗೂ ನೆಟ್ಟಿಗರು ಫಿದಾ ಆಗಿ ವಿವಿಧ ರೀತಿಯ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ.

ಕೊನೆಯದಾಗಿ ಆಕೆ ಪೆದಕಾಪು-1 ಸಿನೆಮಾದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದರು. ಸದ್ಯ ಅನಸೂಯ ಪುಷ್ಪಾ-2 ಸಿನೆಮಾದಲ್ಲೂ ಸಹ ನಟಿಸಿದ್ದು, ತುಂಬಾ ನಿರೀಕ್ಷೆ ಸಹ ಇಟ್ಟುಕೊಂಡಿದ್ದಾರೆ ಎನ್ನಲಾಗಿದೆ. ತಮಿಳಿನಲ್ಲಿ ವುಲ್ಫ್ ಎಂಬ ಸಿನೆಮಾದಲ್ಲಿ ನಟಿಸಿದ್ದು, ಈ ಸಿನೆಮಾದ ಫಸ್ಟ್ ಲುಕ್ ಹಾಗೂ ಸಾಂಗ್ ಸಖತ್ ವೈರಲ್ ಆಗಿತ್ತು.

Most Popular

To Top