Film News

ಸೀರೆಯಲ್ಲಿ ಗಾಗಲ್ಸ್ ಹಾಕಿಕೊಂಡು ಸ್ಟೈಲಿಷ್ ಆಗಿ ಕಾಣಿಸಿಕೊಂಡ ಅನಸೂಯ, ರೌಡಿ ಬೇಬಿ ಎಂದು ಬಿರುದು ಕೊಟ್ಟ ಫ್ಯಾನ್ಸ್….!

ಕಿರುತೆರೆಯ ಮೂಲಕ ಫೇಂ ಪಡೆದುಕೊಂಡ ಅನಸೂಯ ಸದ್ಯ ಬ್ಯಾಕ್ ಟು ಬ್ಯಾಕ್ ಸಿನೆಮಾಗಳ ಮೂಲಕ ಪುಲ್ ಬ್ಯುಸಿಯಾಗಿದ್ದಾರೆ. ವಿಭಿನ್ನ ಪಾತ್ರಗಳನ್ನು ಪೋಷಣೆ ಮಾಡುತ್ತಾ ತನ್ನದೇ ಆದ ಹವಾ ಮುಂದುವರೆಸುತ್ತಿದ್ದಾರೆ.  ಸಿನೆಮಾಗಳ ಜೊತೆಗೆ ಆಕೆ ಸೋಷಿಯಲ್ ಮಿಡಿಯಾದಲ್ಲಿ ಪುಲ್ ಬ್ಯುಸಿಯಾಗಿರುತ್ತಾರೆ. ತನ್ನ ಸೋಷಿಯಲ್ ಮಿಡಿಯಾ ಖಾತೆಯಲ್ಲಿ ಬ್ಯಾಕ್ ಟು ಬ್ಯಾಕ್ ಪೊಟೋಶೂಟ್ಸ್ ಮೂಲಕ ಇಂಟರ್‍ ನೆಟ್ ನಲ್ಲಿ ಸಂಚಲನ ಸೃಷ್ಟಿಸುತ್ತಿರುತ್ತಾರೆ. ಇದೀಗ ಆಕೆ ಸೀರೆಯಲ್ಲಿ ಕೆಲವೊಂದು ಪೊಟೋಗಳನ್ನು ಹಂಚಿಕೊಂಡಿದ್ದು, ಅಭಿಮಾನಿಗಳು ಕ್ರೇಜಿ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ.

ನಟಿ ಅನಸೂಯ ಜಬರ್ದಸ್ತ್ ಶೋ ಮೂಲಕ ಸ್ಟಾರ್‍ ಆಂಕರ್‍ ಆಗಿದ್ದಾರೆ. ವಿವಿಧ ಕಾರ್ಯಕ್ರಮಗಳನ್ನು ಸಹ ಹೋಸ್ಟ್ ಮಾಡುತ್ತಾ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಪಡೆದುಕೊಂಡರು. ಬಳಿಕ ಆಕೆ ಸಿನೆಮಾಗಳತ್ತ ಮುಖ ಮಾಡಿದರು. ಸಿನೆಮಾಗಳಲ್ಲಿ ಸಕ್ಸಸ್ ಪಡೆದುಕೊಂಡ ಅನಸೂಯಗೆ ಬ್ಯಾಕ್ ಟು ಬ್ಯಾಕ್ ಅವಕಾಶಗಳು ಬರುತ್ತಿರುವ ಕಾರಣದಿಂದ ಆಕೆ ಕಿರುತೆರೆಯಿಂದ ಸಂಪೂರ್ಣವಾಗಿ ದೂರವಾಗಿದ್ದಾರೆ. ಇನ್ನೂ ಆಕೆ ಸಿನೆಮಾಗಳಲ್ಲಿ ಎಷ್ಟೇ ಬ್ಯುಸಿಯಾಗಿದ್ದರೂ ಸಹ ಸೋಷಿಯಲ್ ಮಿಡಿಯಾದಲ್ಲಿ ಆಕ್ಟೀವ್ ಆಗಿರುತ್ತಾರೆ. ತನ್ನ ಸೋಷಿಯಲ್ ಮಿಡಿಯಾ ಖಾತೆಯಲ್ಲಿ ತಮ್ಮ ವೈಯುಕ್ತಿಕ ಅಪ್ಡೇಟ್ ಗಳ ಜೊತೆಗೆ, ಪೊಟೋಶೂಟ್ಸ್, ವಿಡಿಯೋ ಗಳನ್ನು ಹಂಚಿಕೊಳ್ಳುತ್ತಾ ಅಭಿಮಾನಿಗಳೊಂದಿಗೆ ಟಚ್ ನಲ್ಲಿ ಇರುತ್ತಾರೆ.

ಇನ್ನೂ ಅನಸೂಯ ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಳ್ಳುವ ಪೊಟೋಗಳು ಹಾಗೂ ಪೋಸ್ಟ್ ಗಳ ಕಾರಣದಿಂದ ಕೆಲವೊಮ್ಮೆ ಟ್ರೋಲ್ ಸಹ ಆಗುತ್ತಿರುತ್ತಾರೆ. ಆಕೆಯನ್ನು ಆಂಟಿ ಎಂದು ಸಂಬೋಧಿಸುತ್ತಾ ಕೆಟ್ಟದಾಗಿ ಟ್ರೋಲ್ ಮಾಡುತ್ತಿರುತ್ತಾರೆ. ಅದಕ್ಕೆ ಅನಸೂಯ ಸಹ ಗಟ್ಟಿಯಾಗಿಯೇ ಕೌಂಟರ್‍ ಕೊಡುತ್ತಿರುತ್ತಾರೆ. ಕೆಲವೊಮ್ಮೆ ಪೊಲೀಸ್ ಕೇಸ್ ಸಹ ದಾಖಲಿಸಿದ ಉದಾಹರಣೆಗಳೂ ಸಹ ಬಹಳಷ್ಟಿದೆ. ಇದೀಗ ಅನಸೂಯ ಸೋಷಿಯಲ್ ಮಿಡಿಯಾದಲ್ಲಿ ಕೆಲವೊಂದು ಪೊಟೋಗಳನ್ನು ಹಂಚಿಕೊಂಡಿದ್ದಾರೆ. ಸೀರೆಯನ್ನು ಧರಿಸಿ, ಗಾಗುಲ್ಸ್ ಹಾಕಿಕೊಂಡು ಲೇಡಿಬಾಸ್ ಮಾದರಿಯಲ್ಲಿ ಪೋಸ್ ಕೊಟ್ಟಿದ್ದಾರೆ. ಆಕೆಯ ಈ ಲೇಟೆಸ್ಟ್ ಲುಕ್ಸ್ ಗೆ ಅಭಿಮಾನಿಗಳು ಹಾಗೂ ನೆಟ್ಟಿಗರು ಫಿದಾ ಆಗಿದ್ದಾರೆ. ಅದರಲ್ಲೂ ಆಕೆಯ ಕಿಲ್ಲಿಂಗ್ ಲುಕ್ಸ್ ಗೆ ಪಡ್ಡೆಹುಡುಗರು ನಿದ್ದೆಗೆಡಿಸಿಕೊಂಡಿದ್ದಾರೆ. ಸದ್ಯ ಆಕೆಯ ಈ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದ್ದು, ಆಕೆಯ ಫ್ಯಾನ್ಸ್ ರೌಡಿ ಬೇಬಿ ಎಂದು ಬಿರುದು ಕೊಡುತ್ತಿದ್ದಾರೆ.

ಇನ್ನೂ ಅನಸೂಯ ಬ್ಯಾಕ್ ಟು ಬ್ಯಾಕ್ ಸಿನೆಮಾಗಳ ಮೂಲಕ ಸದ್ದು ಮಾಡುತ್ತಿದ್ದಾರೆ. ಕೊನೆಯದಾಗಿ ಆಕೆ ರಜಾಕರ್‍ ಎಂಬ ಸಿನೆಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಸದ್ಯ ಪುಷ್ಪಾ-2 ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಇದರ ಜೊತೆಗೆ ಆಕೆ ತೆಲುಗು, ತಮಿಳಿನಲ್ಲಿ ಕೆಲವೊಂದು ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

Most Popular

To Top