Film News

ಸಿನೆಮಾದಲ್ಲಿನ ಪಾತ್ರದ ಬಗ್ಗೆ ಇಂಟ್ರಸ್ಟಿಂಗ್ ಕಾಮೆಂಟ್ ಮಾಡಿದ ತೃಪ್ತಿ, ಪಾತ್ರ ಮಾಡೋವಾಗ ಅದು ಮಾತ್ರ ನೋಡಬೇಕೆಂದ ನಟಿ…..!

ಸಿನಿರಂಗದಲ್ಲಿ ಅನೇಕ ಕಲಾವಿದರು ಒಂದೇ ಸಿನೆಮಾದ ಮೂಲಕ ಸ್ಟಾರ್‍ ಗಾಳಾಗಿಬಿಡುತ್ತಾರೆ. ಅವರಿಗೆ ಭಾರಿ ಬೇಡಿಕೆ ಸಹ ಸೃಷ್ಟಿಯಾಗುತ್ತದೆ. ಈ ಸಾಲಿಗೆ ಯಾನಿಮಲ್ ಸಿನೆಮಾದ ಮೂಲಕ ಫೇಮಸ್ ಆದ ನಟಿ ತೃಪ್ತಿ ಡಿಮ್ರಿ ಸಹ ಒಬ್ಬರಾಗಿದ್ದಾರೆ. ಯಾನಿಮಲ್ ಸಿನೆಮಾದ ಬಳಿಕ ತೃಪ್ತಿ ಭಾರಿ ಫೇಮಸ್ ಆದರು. ಇದೀಗ ಆಕೆಗೆ ಅವಕಾಶಗಳು ಸಹ ಹರಿದುಬರುತ್ತಿವೆ ಎನ್ನಲಾಗಿದೆ. ಇದೀಗ ಆಕೆ ಸಿನೆಮಾದಲ್ಲಿನ ಪಾತ್ರದಲ್ಲಿ ನಟಿಸಬೇಕಾದ ಕುರಿತು ಇಂಟ್ರಸ್ಟಿಂಗ್ ಕಾಮೆಂಟ್ಸ್ ಮಾಡಿದ್ದು, ಆಕೆಯ ಕಾಮೆಂಟ್ ಗಳು ವೈರಲ್ ಆಗುತ್ತಿವೆ.

ಯಾನಿಮಲ್ ಸಿನೆಮಾದ ಮೂಲಕ ಫೇಮಸ್ ಆದ ತೃಪ್ತಿ ಡಿಮ್ರಿ ಇತ್ತೀಚಿಗೆ ತುಂಬಾ ಸುದ್ದಿಯಾಗುತ್ತಿದ್ದಾರೆ. ಯಾನಿಮಲ್ ಸಿನೆಮಾದಲ್ಲಿ ಆಕೆ ಕೆಲವೊಂದು ಇಂಟಿಮೇಟ್ ದೃಶ್ಯಗಳಲ್ಲಿ ನಟಿಸಿ ರಾತ್ರೋರಾತ್ರಿ ಸ್ಟಾರ್‍ ಆಗಿಬಿಟ್ಟರು. ರಣಬೀರ್‍ ಹಾಗೂ ತೃಪ್ತಿ ಡಿಮ್ರಿ ನಡುವೆ ಓವರ್‍ ಆಗಿಯೇ ರೊಮ್ಯಾಂಡಿಕ್ ದೃಶ್ಯಗಳಿವೆ. ಆಕೆ ಈ ಪಾತ್ರದಲ್ಲಿ ನಟಿಸಿದ ಹಿನ್ನೆಲೆಯಲ್ಲಿ ಆಕೆ ಇಡೀ ದೇಶದಾದ್ಯಂತ ಸುದ್ದಿಯಾದರು. ಆಕೆಯ ಬಗ್ಗೆ ದೊಡ್ಡ ಮಟ್ಟದ ಚರ್ಚೆ ಸಹ ನಡೆಯಿತು. ಅಷ್ಟೇಅಲ್ಲದೇ ನಟಿ ರಶ್ಮಿಕಾ ಗಿಂತಲೂ ತೃಪ್ತಿ ತುಂಬಾ ಫೇಮಸ್ ಆದರು ಎನ್ನಬಹುದಾಗಿದೆ. ಇತ್ತೀಚಿಗೆ ಆಕೆ ಪ್ರಿಯಾಂಕಾ ಚೊಪ್ರಾ ನನಗೆ ಸ್ಪೂರ್ತಿ ಎಂತಲೂ, ಪ್ರಿಯಾಂಕಾ ಚೋಪ್ರಾ ರವರ ಬಗ್ಗೆ ಕೆಲವೊಂದು ಹೇಳಿಕೆಗಳನ್ನು ನೀಡಿದ್ದರು. ಇತರೆ ಸಿನಿರಂಗದತ್ತ ಹೋಗಿ ಸಕ್ಸಸ್ ಆಗಲು ಧೈರ್ಯ ಬೇಕು. ಪ್ರಿಯಾಂಕಾ ಚೋಪ್ರಾರವರಿಗೆ ಧೈರ್ಯ, ಆತ್ಮವಿಶ್ವಾಸ ತುಂಬಾನೆ ಇದೆ. ಈ ಕಾರಣದಿಂದ ಹಾಲಿವುಡ್ ನಲ್ಲೂ ಸ್ಟಾರ್‍ ಆಗಿದ್ದಾರೆ ಎಂದಿದ್ದರು.

ಪ್ರಿಯಾಂಕಾ ಚೋಪ್ರಾ ನಟನೆಯ ಬರ್ಫಿ ಸಿನೆಮಾ ನೋಡಿದ್ದೇನೆ. ಆಕೆಯನ್ನು ನನಗೆ ಗುರ್ತಿಸಿಲು ಸಾಧ್ಯವಾಗಲಿಲ್ಲ. ಓರ್ವ ನಟಿಕೆ ಬೇಕಾದಂತಹ ಲಕ್ಷಣಗಳು ಅವೇ. ಯಾವುದೇ ಪಾತ್ರ ಮಾಡುತ್ತಿದ್ದರೂ ನಾವು ಕಾಣಿಸಬಾರದು. ಕೇವಲ ನಟನೆ ಮಾತ್ರ ಕಾಣಿಸಬೇಕು. ಅದೇ ಪಾತ್ರಗಳ ಹೆಸರುಗಳನ್ನಿಟ್ಟು ನಮ್ಮನ್ನು ಕರೆಯುತ್ತಿದ್ದರೇ ಅದಕ್ಕಿಂತ ಸಂತೋಷ ಬೇರೊಂದು ಇರೊಲ್ಲ ಎಂದು ತೃಪ್ತಿ ಹೇಳಿದ್ದಾರೆ. ಇನ್ನೂ ತೃಪ್ತಿ ಡಿಮ್ರಿ ಕಾಮೆಂಟ್ ಗಳು ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿವೆ. ಸಿನೆಮಾಗಳ ಜೊತೆಗೆ  ತೃಪ್ತಿ ಇತ್ತೀಚಿಗೆ ಸೋಷಿಯಲ್ ಮಿಡಿಯಾದಲ್ಲೂ ಸಹ ಜೋರನ್ನು ಏರಿಸಿದ್ದಾರೆ. ಸಾಲು ಸಾಲು ಪೊಟೋಶೂಟ್ಸ್, ವಿಡಿಯೋಗಳ ಮೂಲಕ ಫ್ಯಾನ್ ಬೇಸ್ ಹೆಚ್ಚಿಸಿಕೊಳ್ಳುತ್ತಿದ್ದಾರೆ.

ಇತ್ತೀಚಿಗೆ ತನ್ನ ಭಾಯ್ ಫ್ರೆಂಡ್ ಜೊತೆಗೆ ಹೋಳಿಯನ್ನು ಆಚರಿಸಿದ್ದು, ಈ ಪೊಟೋಗಳೂ ಸಹ ಸೋಷಿಯಲ್ ಮಿಡಿಯಾದಲ್ಲಿ ಭಾರಿ ವೈರಲ್ ಆಗಿತ್ತು.

Most Popular

To Top