ಅವಳೊಂದಿಗೆ ನಮಗ್ಯೇಕೆ ಅನ್ನೋತರ ಮಾಡುತ್ತೀನಿ ಎಂದ ಬಿಗ್ ಭಾಸ್ ಬ್ಯೂಟಿ ದಿವಿ, ವೈರಲ್ ಆದ ಕಾಮೆಂಟ್ಸ್…..!

ಬಿಗ್ ಬಾಸ್ ತೆಲುಗು ಸೀಸನ್ 4 ರ ಸ್ಪರ್ಧಿ ದಿವಿ ವಾದ್ಯ ಇತ್ತೀಚಿಗೆ ಸಿನೆಮಾಗಳಲ್ಲಿ ಸದ್ದು ಮಾಡಲು ಮುಂದಾಗಿದ್ದಾರೆ. ಬಿಗ್ ಬಾಸ್ ಮೂಲಕ ಫೇಂ ಪಡೆದುಕೊಂಡ ಬಳಿಕ ಆಕೆ ವೆಬ್ ಸಿರೀಸ್, ಒಟಿಟಿ ಸಿನೆಮಾಗಳ ಮೂಲಕ ಕಾಣಿಸಿಕೊಳ್ಳುತ್ತಿದ್ದರು. ಸೋಷಿಯಲ್ ಮಿಡಿಯಾದಲ್ಲಂತೂ ನೆವರ್‍ ಬಿಪೋರ್‍ ಎಂಬಂತೆ ವಿವಿಧ ರೀತಿಯ ಪೊಟೋಶೂಟ್ಸ್, ವಿಡಿಯೋ, ರೀಲ್ಸ್ ಗಳ ಮೂಲಕ ಭಾರಿ ಸದ್ದು ಮಾಡಿದ್ದರು. ಇದೀಗ ಆಕೆ ಕೆಲವೊಂದು ಕಾಮೆಂಟ್ ಗಳನ್ನು ಮಾಡಿದ್ದು, ಅವು ಸೋಷಿಯಲ್ ಮಿಡಿಯಾದಲ್ಲಿ ಭಾರಿ ವೈರಲ್ ಆಗುತ್ತಿವೆ.

ಬಿಗ್ ಬಾಸ್ ಫೇಂ ದಿವಿ ವಾದ್ಯಾ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ಆಕ್ಟೀವ್ ಆಗಿರುತ್ತಾರೆ. ವಿವಿಧ ರೀತಿಯ ಡ್ರೆಸ್ ಗಳಲ್ಲಿ ಪೊಟೋಶೂಟ್ಸ್ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿರುತ್ತಾರೆ. ಗ್ಲಾಮರಸ್ ಪೊಟೋಗಳ ಮೂಲಕ ಸೋಷಿಯಲ್ ಮಿಡಿಯಾದಲ್ಲಿ ಸೆನ್ಷೇಷನ್ ಕ್ರಿಯೇಟ್ ಮಾಡಿದ್ದಾರೆ. ಕೆಲವು ದಿನಗಳಿಂದ ದಿವಿ ಸೀರೆಯಲ್ಲಿ ಪೊಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಸೋಷಿಯಲ್ ಮಿಡಿಯಾದಲ್ಲಿ ಆಕೆ ಬ್ಯೂಟಿ ಕ್ವೀನ್ ಆಗಿದ್ದಾರೆ. ಸದ್ಯ ಆಕೆ ಸಿನೆಮಾಗಳಲ್ಲಿ ಅವಕಾಶಗಳನ್ನು ಪಡೆದುಕೊಳ್ಳಲು ಪ್ರಯತ್ನಗಳನ್ನು ಮಾಡುತ್ತಿರುತ್ತಾರೆ. ನಟಿಯಾಗಬೇಕೆಂಬ ಮಹದಾಸೆಯನ್ನು ಹೊಂದಿರುವ ದಿವಿಗೆ ಪೂರ್ಣ ಪ್ರಮಾಣದ ಅವಕಾಶಗಳು ಬರುತ್ತಿಲ್ಲ. ಮೆಗಾಸ್ಟಾರ್‍ ಅಭಿನಯದ ಗಾಡ್ ಫಾದರ್‍ ಸಿನೆಮಾದಲ್ಲೂ ದಿವಿ ಪ್ರಮುಖ ಪಾತ್ರವೊಂದರಲ್ಲಿ ನಟಿಸಿದ್ದರು. ಸದ್ಯ ಆಕೆ ಲಂಬಸಿಂಗಿ ಎಂಬ ಸಿನೆಮಾದಲ್ಲಿ ನಟಿಸಿದ್ದು, ಈ ಸಿನೆಮಾದ ಪ್ರಮೋಷನ್ ಕಾರ್ಯಕ್ರಮಗಳೂ ಸಹ ಭರದಿಂದ ನಡೆಯುತ್ತಿದೆ.

ನಟಿ ದಿವಿ ಅಭಿನಯದ ಲಂಬಸಿಂಗಿ ಎಂಬ ಸಿನೆಮಾದ ಪ್ರಚಾರದ ನಿಮಿತ್ತ ನಡೆದ ಸಂದರ್ಶನವೊಂದರಲ್ಲಿ ಮಾತನಾಡಿದ ಆಕೆ ತನ್ನ ಕರಿಯರ್‍ ಕುರಿತು ಮಾತನಾಡಿದ್ದಾರೆ. ನಾನು ಎಲ್ಲಾ ಪಾತ್ರಗಳನ್ನು ಒಪ್ಪಿಕೊಳ್ಳುವುದಿಲ್ಲ. ಮೆಗಾಸ್ಟಾರ್‍ ಚಿರಂಜೀವಿಯವರ ಗಾಡ್ ಫಾದರ್‍ ಸಿನೆಮಾದಲ್ಲಿ ಒಳ್ಳೆಯ ಪಾತ್ರದಲ್ಲಿ ನಟಿಸುವ ಅವಕಾಶ ಕೊಟ್ಟರು. ನನ್ನ ಪಾತ್ರದಿಂದ ಕಥೆಗೆ ಒಳ್ಳೆಯ ಟರ್ನಿಂಗ್ ಸಿಕ್ಕಿತ್ತು. ಅಂತಹ ಪಾತ್ರಗಳು ಅಂದರೇ ಪಾತ್ರಕ್ಕೆ ಪ್ರಾಧಾನ್ಯತೆಯಿರುವ ಅವಕಾಶಗಳನ್ನು ಮಾತ್ರ ಒಪ್ಪುತ್ತೇನೆ. ಇಲ್ಲವಾದಲ್ಲಿ ಪಾತ್ರವನ್ನು ಮಾಡೊಲ್ಲ ಎಂದು ಮೇಕರ್ಸ್‌ಗೆ ಹೇಳಿಬಿಡುತ್ತೇನೆ. ಜೊತೆಗೆ ಸಿನಿರಂಗದಲ್ಲಿ ಕಾಸ್ಟಿಂಗ್ ಕೌಚ್ ಬಗ್ಗೆ ಸಹ ಮಾತನಾಡಿದ್ದಾರೆ. ನನಗೆ ಎಂದೂ ಅಂತಹ ಅನುಭವ ಎದುರಾಗಲಿಲ್ಲ. ನನಗೆ ಎದುರಾದ ಎಲ್ಲರೂ ಒಳ್ಳೆಯವರು. ಬಹುಶಃ ನನ್ನ ನಡವಳಿಕೆ ಅದಕ್ಕೆ ಕಾರಣವಾಗಿರಬಹುದು. ನನಗೆ ಎದುರಾದ ನಿರ್ದೇಶಕರು ಬೇರೆ ಹಿರೋಯಿನ್ ಗಳ ಬಳಿ ಕಮಿಟ್ ಮೆಂಟ್ ಕೇಳಿರಬಹುದೇನೋ ನನಗೆ ಗೊತ್ತಿಲ್ಲ ಎಂದಿದ್ದಾರೆ.

ನನ್ನ ಬಳಿ ಕಮಿಟ್ ಕೇಳಿದರೂ ನಾನು ಒಪ್ಪೊಲ್ಲ. ಬಹುಶಃ ಅವಳನ್ನು ಕದಡಿದರೇ ನಮಗೆ ನಷ್ಟ ಎಂಬಂತೆ ನನ್ನ ನಡವಳಿಕೆ ಇರುತ್ತದೆ ಎಂದು, ನನ್ನ ಕೆರಿಯರ್‍ ನಲ್ಲಿ ಅಂತಹ  ಡರ್ಟಿ ಥಿಂಗ್ಸ್ ಗೆ ಅವಕಾಶವಿಲ್ಲ. ನಮ್ಮ ನಡವಳಿಕೆಯಂತೆ ಬೇರೆಯವರ ನಡವಳಿಕೆ ಇರುತ್ತದೆ. ನಾನು ಸೋಷಿಯಲ್ ಮಿಡಿಯಾದಲ್ಲಿ ಹೆಚ್ಚಾಗಿ ಟ್ರೆಡಿಷನಲ್ ಆಗಿಯೇ ಕಾಣಿಸಿಕೊಳ್ಳುತ್ತೇನೆ. ಟ್ರೆಡಿಷನಲ್ ಡ್ರೆಸ್ ಗಳಲ್ಲೂ ಸುಂದರವಾಗಿ ಕಾಣಿಸಿಕೊಳ್ಳಬಹುದು ಎಂದು ಆಕೆ ಹೇಳಿದ್ದಾರೆ.