Film News

ಸ್ಟಾರ್ ನಟಿಯರಿಗಿಂತ ತಾನು ಕಡಿಮೆಯಿಲ್ಲ ಎಂಬಂತೆ, ತಗ್ಗೇದೇ ಲೇ ಎಂಬಂತೆ ಗ್ಲಾಮರಸ್ ಪೊಟೋಸ್ ಹಂಚಿಕೊಂಡ ಆಂಕರ್ ಸುಮಾ….!

ತೆಲುಗು ಕಿರುತೆರೆಯಲ್ಲಿ ಟಾಪ್ ಆಂಕರ್‍ ಗಳಲ್ಲಿ ಮೊದಲ ಸ್ಥಾನದಲ್ಲಿ ಸುಮಾ ಇರುತ್ತಾರೆ. ಅನೇಕ ದೊಡ್ಡ ದೊಡ್ಡ ಸಿನೆಮಾಗಳ ಪ್ರೀ ರಿಲೀಸ್ ಈವೆಂಟ್, ಟೀಸರ್‍ ಲಾಂಚ್ ಸೇರಿದಂತೆ ಅನೇಕ ಕಾರ್ಯಕ್ರಮಗಳಲ್ಲಿ ಹೋಸ್ಟ್ ಮಾಡುವುದು ಸುಮಾ ರವರೇ. ಆಕೆಯೆ ಮೊದಲ ಆಯ್ಕೆ ಆಗಿರುತ್ತಾರೆ ಎಂದು ಹೇಳಲಾಗುತ್ತಿದೆ. ಇನ್ನೂ ಈಕೆ ಬೆಳ್ಳಿ ತೆರೆಗೂ ಸಹ ಎಂಟ್ರಿ ಕೊಟ್ಟಿದ್ದು ಕೆಲವೊಂದು ಸಿನೆಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ಸೋಷಿಯಲ್ ಮಿಡಿಯಾದಲ್ಲೂ ಸಹ ಸುಮಾ ಇತ್ತಿಚಿಗೆ ಆಕ್ಟೀವ್ ಆಗಿದ್ದಾರೆ. ಇದೀಗ ಸುಮಾ ತನ್ನಲ್ಲಿನ ಮತ್ತೊಂದು ಆಂಗಲ್ ಶೋ ಮಾಡುತ್ತಿದ್ದಾರೆ.

ಆಂಕರ್‍ ಕಂ ನಟಿ ಸುಮಾ ಎಲ್ಲರಂತೆ ಸೋಷಿಯಲ್ ಮಿಡಿಯಾವನ್ನೂ ಸಹ ಸಕ್ರಿಯವಾಗಿ ಬಳಸುತ್ತಿದ್ದಾರೆ. ತೆಲುಗು ಕಿರುತೆರೆಯಲ್ಲಿ ನಂಬರ್‍ 1 ಆಂಕರ್‍ ಆಗಿ ಅನೇಕ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಿದ್ದಾರೆ. ಇಂದಿಗೂ ಸಹ ಆಕೆ ತುಂಬಾನೆ ಕ್ರೇಜ್ ಹೊಂದಿರುವ ಆಂಕರ್‍ ಆಗಿ ಸಕ್ಸಸ್ ಪುಲ್ ಜರ್ನಿ ಸಾಗಿಸುತ್ತಿದ್ದಾರೆ. ಇನ್ನೂ ತೆಲುಗು ಮನರಂಜನಾ ರಂಗದಲ್ಲಿ ಈಗಾಗಲೇ ಅನಸೂಯ, ರಶ್ಮಿ, ಶ್ರೀಮುಖಿ, ವರ್ಷಿಣಿ ಯಂತಹ ಅನೇಕ ಯಂಗ್ ಆಂಕರ್‍ ಗಳು ಗ್ಲಾಮರಸ್ ಆಂಕರ್‍ ಗಳಾಗಿ ಕ್ರೇಜ್ ಪಡೆದುಕೊಂಡಿದ್ದಾರೆ. ಆದರೆ ಕಾಲ ಬದಲಾದರೂ ಸ್ಟಾರ್‍ ಆಂಕರ್‍ ಸುಮಾ ರವರಿಗೆ ಮಾತ್ರ ಪೈಪೋಟಿ ನೀಡಲು ವಿಫಲರಾದರು ಎಂದೇ ಹೇಳಬಹುದಾಗಿದೆ. ಇದೀಗ ಸುಮಾ ಸೋಷಿಯಲ್ ಮಿಡಿಯಾದಲ್ಲೂ ಸಹ ತನ್ನ ಹವಾ ಕ್ರಿಯೇಟ್ ಮಾಡಲು ಹೊರಟಿದ್ದಾರೆ ಎನ್ನಲಾಗುತ್ತಿದೆ. ಈ ಹಾದಿಯಲ್ಲೆ ಆಕೆ ಸಾಲು ಸಾಲು ಗ್ಲಾಮರಸ್ ಪೊಟೋಶೂಟ್ಸ್ ಮೂಲಕ ಸದ್ದು ಮಾಡುತ್ತಿದ್ದಾರೆ.

ಇನ್ನೂ ಆಂಕರ್‍ ಸುಮಾ ರವರಿಗೆ ಇನ್ಸ್ಟಾಗ್ರಾಂ ನಲ್ಲಿ ಎರಡೂವರೆ ಮಿಲಿಯನ್ ಫಾಲೋವರ್ಸ್ ಇದ್ದಾರೆ. ಸುಮಾ ಸಹ ಸೋಷಿಯಲ್ ಮಿಡಿಯಾದಲ್ಲಿ ಪೊಟೋಗಳು, ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಈ ಹಾದಿಯಲ್ಲೇ ಆಕೆ ಟ್ರೆಂಡಿ ವೇರ್‍ ನಲ್ಲಿ ಮೈಂಡ್ ಬ್ಲಾಕ್ ಆಗುವಂತಹ ಪೋಸ್ ಗಳನ್ನು ಕೊಟ್ಟಿದ್ದಾರೆ. ನೆವರ್‍ ಬಿಪೋರ್‍  ಎಂಬಂತೆ ತುಂಬಾ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದಾರೆ. ಸ್ಟಾರ್‍ ನಟಿಯರಿಗಿಂತ ತಾನೇನು ಕಡಿಮೆಯಿಲ್ಲ ಎಂಬಂತೆ, ತಗ್ಗೇದೇ ಲೇ ಎಂಬಂತೆ ಹಾಟ್ ಆಗಿ ಪೋಸ್ ಕೊಟ್ಟಿದ್ದಾರೆ. ಟ್ರೆಂಡಿ ಡ್ರೆಸ್ ನಲ್ಲಿ ಆಕೆ ಸ್ಟನ್ನಿಂಗ್ ಪೋಸ್ ಗಳನ್ನು ಕೊಟ್ಟಿದ್ದು, ಪೊಟೋಗಳು ಸಖತ್ ವೈರಲ್ ಆಗುತ್ತಿವೆ. ಅಭಿಮಾನಿಗಳು ಮಾತ್ರವಲ್ಲದೇ ಅನೇಕರು ವಿವಿಧ ರೀತಿಯ ಕಾಮೆಂಟ್ ಗಳ ಮೂಲಕ ಲೈಕ್ ಗಳ ಮೂಲಕ ಮೆಚ್ಚುಗೆ ಸೂಚಿಸುತ್ತಿದ್ದಾರೆ.

ಸದ್ಯ ಸುಮಾ ಮೊದಲಿನಂತೆ ಹೆಚ್ಚು ಶೋಗಳನ್ನು ಮಾಡುತ್ತಿಲ್ಲ. ಆಕೆ ಸುಮಾ ಅಡ್ಡಾ ಎಂಬ ಟೈಟಲ್ ನ ಶೋ ಹೋಸ್ಟ್ ಮಾಡುತ್ತಿದ್ದಾರೆ. ಜೊತೆಗೆ ಅಮ್ಮ ಆವಕಾಯ್ ಎಂಬ ಟೈಟಲ್ ನೊಂದಿಗೆ ಮತ್ತೊಂದು ಶೋ ಸಹ ಆರಂಭಿಸಲಿದ್ದಾರೆ. ಜೊತೆಗೆ ಆಗಾಗ ಪ್ರಿ ರಿಲೀಸ್ ಈವೆಂಟ್ ಗಳಲ್ಲೂ ಸಹ ಸದ್ದು ಮಾಡುತ್ತಿದ್ದಾರೆ.

Most Popular

To Top