News

ವಜ್ರಗಳು ಸಿಗುತ್ತಂತೆ ಆ ಪ್ರದೇಶದ ಕೃಷಿ ಭೂಮಿಯಲ್ಲಿ, ವಜ್ರ ಹುಡುಕಲು ಮುಗಿಬಿದ್ದ ಜನತೆ, ಎಲ್ಲಿ ಗೊತ್ತಾ?

ಸಾವಿರಾರು ವರ್ಷಗಳ ಹಿಂದೆ ಭಾರತ ಸಂಪತ್ತಭರಿತವಾದ ದೇಶವಾಗಿತ್ತು. ರಸ್ತೆಯಲ್ಲಿಯೇ ಬಂಗಾರ, ವಜ್ರ, ವೈಡೂರ್ಯಗಳನ್ನು ಮಾರಾಟ ಮಾಡಿದಂತಹ ವಿಜಯನಗರ ಸಾಮ್ರಾಜ್ಯದ ಬಗ್ಗೆ ಸಹ ನಾವು ಕೇಳಿದ್ದೇವೆ. ಇದೀಗ ಕೃಷಿ ಭೂಮಿಯಲ್ಲಿ ವಜ್ರಗಳು ಸಿಗುತ್ತಿವೆ ಎಂದು ಅನೇಕರು ಭೂಮಿಯಲ್ಲಿ ಹುಡುಕಾಟ ನಡೆಸುತ್ತಿದ್ದಾರೆ. ವಜ್ರಗಳನ್ನು ಹುಡುಕುತ್ತಿರುವ ಆ ಪ್ರದೇಶವಾದರೂ ಎಲ್ಲಿದೆ ಎಂಬ ವಿಚಾರಕ್ಕೆ ಬಂದರೇ,

ಕರ್ನಾಟಕ ರಾಜ್ಯದ ಅತ್ಯಂತ ಶ್ರೀಮಂತ ರಾಜಮನೆತನಾದ ವಿಜಯನಗರ ಸಾಮ್ರಾಜ್ಯದಲ್ಲಿ ತರಕಾರಿಗಳಂತೆ ಬಂಗಾರ, ವಜ್ರ, ವೈಡೂರ್ಯಗಳನ್ನು ಮಾರುತ್ತಿದ್ದರು. ಈ ಸಾಮ್ರಾಜ್ಯದ ಸಂಪತ್ತು ಮುಳಗಡೆಯಾದಂತಹ ಕರ್ನೂಲ್, ಅನಂತಪುರ ಜಿಲ್ಲೆಗಳ ವ್ಯಾಪ್ತಿಯ ಕೆಲವು ಜಮೀನುಗಳಲ್ಲಿ ವಜ್ರದ ಹರಳುಗಳು ಸಿಗುತ್ತಿವೆ ಎಂದು ಹುಡಾಕಾಟ ನಡೆಸಲು ಜನರು ಮುಗಿಬಿದಿದ್ದಾರೆ. ಕರ್ನೂಲ್ ಹಾಗೂ ಅನಂತಪುರದ ವ್ಯಾಪ್ತಿಯ ಕೆಲವು ಕಡೆ ಬಂಗಾರ, ವಜ್ರ, ಮುತ್ತು, ರತ್ನಗಳ ಸಂಪತ್ತು ಮುಳುಗಿತ್ತಂತೆ. ಪ್ರತಿ ವರ್ಷ ಮಳೆಗಾಲದಲ್ಲಿ ವಜ್ರದ ಹರಳುಗಳು ಪತ್ತೆಯಾಗುತ್ತಿದ್ದ, ಅವುಗಳನ್ನೂ ಆರಿಸಿಕೊಳ್ಳು ಸ್ಥಳೀಯ ಜನರು ಹೊಲದಲ್ಲಿಯೇ ಮಕ್ಕಾಂ ಹೂಡಿದ್ದಾರೆ. ಇನ್ನೂ ಈ ಹುಡುಕಾಟದಲ್ಲಿ ಅನೇಕರಿಗೆ ವಜ್ರಗಳ ಹರಳುಗಳು ಸಿಕ್ಕಿದ್ದು, ಅವುಗಳನ್ನು ಮಾರಿ ಶ್ರೀಮಂತರು ಸಹ ಆಗಿದ್ದಾರೆ ಎಂದು ಹೇಳಲಾಗಿದೆ.

ಇನ್ನೂ ಮುಂಗಾರು ಮಳೆ ಆರಂಭವಾಗುತ್ತಿದ್ದಂತೆ ಆಂಧ್ರಪ್ರದೇಶದ ಅನಂತಪುರ ಹಾಗೂ ಕರ್ನೂಲ್ ಜಿಲ್ಲೆಯ ಗಡಿಭಾಗದ ಗುಂತಕಲ್, ಪತ್ತಿಕೊಂಡ ಭಾಗದ ಕೃಷಿ ಜಮೀನುಗಳಲ್ಲಿ ಈ ಘಟನೆ ನಡೆಯುತ್ತಿದೆಯಂತೆ. ಮುಂಗಾರು ಮಳೆಯ ಸಮಯದಲ್ಲಿ ವಜ್ರಕ್ಕಾಗಿ ಜಮೀನುಗಳಲ್ಲಿ ರೈತರು ಶೋಧ ಕಾರ್ಯ ಶುರು ಮಾಡುತ್ತಾರೆ. ಜುಲೈ ಮಾಹೆಯಿಂದ ಸೆಪ್ಟೆಂಬರ್‍ ಮಾಹೆಯವರೆಗೂ ಸುರಿಯುವಂತ ಮಳೆಗೆ ವಜ್ರಗಳು ಹೊರಗೆ ಕಾಣಿಸುತ್ತವೆಯಂತೆ. ಇಲ್ಲಿ ಹುಡುಕಾಟ ನಡೆಸಿದರೇ ಅದೃಷ್ಟ ಇರುವವರಿಗೆ ವಜ್ರಗಳು ಸಹ ಸಿಗುತ್ತವೆ ಎಂದು ಸಹ ಹೇಳಲಾಗುತ್ತಿದೆ. ಇನ್ನೂ ಮುಂಗಾರು ಮಳೆಯ ಸಮಯದಲ್ಲಿ ಇದೊಂದು ಪವಾಡ ಎಂಬಂತೆ ಅನೇಕರಿಗೆ ವಜ್ರಗಳೂ ಸಹ ದೊರೆತಿವೆ ಎಂದು ಹೇಳಲಾಗಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಿಲ್ಲ.

ಇನ್ನೂ ಈ ಭೂಮಿಯಲ್ಲಿ ವಜ್ರದ ಹರಳುಗಳನ್ನು ಹುಡುಕಿ ಅನೇಕರು ಒಳ್ಳೆಯ ಹಣ ಸಹ ಪಡೆದುಕೊಂಡಿದ್ದಾರಂತೆ, ಇದರ ಬಗ್ಗೆ ಸತ್ಯಾಸತ್ಯತೆ ಇನಷ್ಟೆ ಹೊರಬರಬೇಕಿದೆ. ಆದರೆ ವಜ್ರಗಳನ್ನು ಹುಡುಕುವಂತಹವರ ಸಂಖ್ಯೆ ಮಾತ್ರ ಕಡಿಮೆಯಾಗಿಲ್ಲ. ಪುರಾಣ ಕಥೆಗಳ ಪ್ರಕಾರ ವಿಜಯ ನಗರದ ಸಂಪತ್ತು ಈ ವ್ಯಾಫ್ತಿಯಲ್ಲಿ ಮುಳುಗಿತ್ತಂತೆ. ಬಹುಮನಿ ಸುಲ್ತಾನರ ಧಾಳಿಯ ಸಮಯದಲ್ಲಿ ವಿಜಯ ನಗರ ಸಾಮ್ರಾಜ್ಯದ ಅರಸರು ಆನೆ ಹಾಗೂ ಕುದುರೆಗಳ ಮೇಲೆ ವಜ್ರಗಳನ್ನು ಆಂಧ್ರಕ್ಕೆ ತೆಗೆದುಕೊಂಡು ಹೋಗುವಾಗ ಅನಂತಪುರ ಹಾಗೂ ಕರ್ನೂಲ್ ಭಾಗದಲ್ಲಿ ಬಿದ್ದಿವೆ ಎಂದು ಹೇಳಲಾಗುತ್ತಿದೆ. ಮಳೆಯ ಸಮಯದಲ್ಲಿ ಭೂಮಿಯಲ್ಲಿರುವ ಸಂಪತ್ತು ಹೊರ ಬರುತ್ತದೆಯಂತೆ. ಈ ಹಿನ್ನೆಲೆಯಲ್ಲಿ ಸ್ಥಳೀಯರು ಸೇರಿದಂತೆ ಅನೇಕರು ವಜ್ರಗಳ ಹುಡುಕಾಟದಲ್ಲಿ ತಲ್ಲೀನರಾಗಿರುತ್ತಾರಂತೆ.

Most Popular

To Top