ಯಶ್ ಕಾಣೆಯಾಗಿದ್ದಾರಂತೆ, ಹುಡುಕಿಕೊಟ್ಟವರಿಗೆ ಭಾರಿ ಬಹುಮಾನವಂತೆ, ವೈರಲ್ ಆದ ಲೇಟೆಸ್ಟ್ ಪೋಸ್ಟ್…..!

Follow Us :

ಸ್ಯಾಂಡಲ್ ವುಡ್ ಸಿನಿರಂಗದ ಸ್ಟಾರ್‍ ನಟ ಯಶ್ ಕೆಜಿಎಫ್ ಸಿನೆಮಾದ ಮೂಲಕ ಕನ್ನಡ ಸಿನೆಮಾದ ತಾಕತ್ತು ಏನು ಎಂಬುದನ್ನು ಇಡೀ ವಿಶ್ವಕ್ಕೆ ಪರಿಚಯಿಸಿದ್ದಾರೆ.  ಸ್ಟಾರ್‍ ನಿರ್ದೇಶಕ ಪ್ರಶಾಂತ್ ನೀಲ್ ಹಾಗೂ ರಾಕಿಂಗ್ ಸ್ಟಾರ್‍ ಯಶ್ ಕಾಂಬಿನೇಷನ್ ನಲ್ಲಿ ತೆರೆಕಂಡ ಕೆಜಿಎಫ್ ಸಿರೀಸ್ ಅನೇಕ ಸಿನೆಮಾಗಳ ರೆಕಾರ್ಡ್‌ಗಳನ್ನು ಬ್ರೇಕ್ ಮಾಡಿದೆ. ಅತೀ ಹೆಚ್ಚು ಗಳಿಕೆ ಮಾಡಿದ ಸಿನೆಮಾಗಳ ಪಟ್ಟಿಯಲ್ಲಿ ಸಹ ಸ್ಥಾನ ಸಂಪಾದಿಸಿಕೊಂಡಿದೆ. ಈ ಸಿನೆಮಾದ ಬಳಿಕ ಯಶ್ ರವರ ಮುಂದಿನ ಸಿನೆಮಾ ಅಪ್ಡೇಟ್ ಗಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಈ ನಡುವೆ ಯಶ್ ಕಾಣೆಯಾಗಿದ್ದಾರೆ ಎಂಭ ಪೋಸ್ಟ್ ಒಂದು ಸಖತ್ ವೈರಲ್ ಆಗುತ್ತಿದೆ.

ಪ್ಯಾನ್ ಇಂಡಿಯಾ ಸ್ಟಾರ್‍ ಯಶ್ ರವರ ಮುಂದಿನ ಸಿನೆಮಾದ ಬಗ್ಗೆ ಭಾರಿ ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ ಅವರ ಫ್ಯಾನ್ಸ್. ಆದರೆ ಅವರ ಸಿನೆಮಾದ ಬಗ್ಗೆ ಯಾವುದೆ ಅಧಿಕೃತ ಅಪ್ಡೇಟ್ ಸಿಗದ ಕಾರಣ ಅಭಿಮಾನಿಗಳು ತುಂಬಾ ನಿರಾಸೆಯಲ್ಲಿದ್ದಾರೆ ಎನ್ನಲಾಗಿದೆ. ಅವರ ಹೊಸ ಸಿನೆಮಾ ಅಪ್ಡೇಟ್ ಗಾಗಿ ಕಾದು ಕಾದು ಸುಸ್ತಾದ ಅಭಿಮಾನಿಗಳು ಯಶ್ ಕಾಣೆಯಾಗಿದ್ದಾರೆ ಹುಡುಕಿಕೊಟ್ಟವರಿಗೆ ಸೂಕ್ತ ಬಹುಮಾನ ಎಂಬ ಪೋಸ್ಟರ್‍ ಒಂದನ್ನು ಸೋಷಿಯಲ್ ಮಿಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಕೆಜಿಎಫ್-2 ಸಿನೆಮಾದ ಸಕ್ಸಸ್ ಬಳಿಕ ಅನೇಕ ಬಾರಿ ಯಶ್ ತಮ್ಮ ಮುಂದಿನ ಸಿನೆಮಾದ ಬಗ್ಗೆ ಅಪ್ಡೇಟ್ ನೀಡುವುದಾಗಿ ತಿಳಿಸಿದ್ದರು. ಆದರೆ ತಿಂಗಳುಗಳು ಕಳೆಯುತ್ತಿದ್ದರೂ ಸಹ ಯಶ್ ಈ ಬಗ್ಗೆ ಯಾವುದೇ ಅಪ್ಡೇಟ್ ನೀಡದ ಕಾರಣದ ಅಭಿಮಾನಿಗಳು ಯಶ್ ಕಾಣೆಯಾಗಿದ್ದಾರೆ ಎಂಬ ಪೋಸ್ಟರ್‍ ವೈರಲ್ ಮಾಡುತ್ತಿದ್ದಾರೆ.

ಇನ್ನೂ ಯಶ್ ಕಾಣೆಯಾಗಿದ್ದಾರೆ. ಯಾರಾದರೂ ಅವರನ್ನು ಸಂಪರ್ಕ ಮಾಡಿ ಸಿನೆಮಾ ಅನೌನ್ಸ್ ಮಾಡೋಕೆ ಎರಡು ವರ್ಷ ತೆಗೆದುಕೊಂಡ್ರೆ ಹೇಗೆ ಸರ್‍, ಫ್ಯಾನ್ಸ್ ಎಮೋಷನ್ ಜೊತೆಗೆ ಆಟ ಆಡಿದ್ರೇ ಹೇಗೆ ಎಂದು ಪೋಸ್ಟರ್‍ ನಲ್ಲಿ ಬರೆದುಕೊಂಡಿದ್ದಾರೆ. ಎಲ್ಲರೂ ಅವರವರ ಹಿರೋಗಳ ಸಿನೆಮಾಗಳ ಅಪ್ಡೇಟ್ ಗಳನ್ನು ಪಡೆದುಕೊಂಡು ಖುಷಿಯಾಗಿದ್ದಾರೆ. ಆದರೆ ನೀವು ಮಾತ್ರ ಸಿನೆಮಾದ ಬಗ್ಗೆ ಘೋಷಣೆ ಇಲ್ಲ. ಸಣ್ಣ ಸುಳಿವು ಸಹ ನೀಡುತ್ತಿಲ್ಲ ತುಂಬಾ ಬೇಜಾರಾಗುತ್ತದೆ ಬಾಸ್ ಎಂದು ಪೋಸ್ಟರ್‍ ನಲ್ಲಿ ಬರೆದಿದ್ದಾರೆ. ಯಶ್ ಸಿನೆಮಾ ಅಪ್ಡೇಟ್ ಬಗ್ಗೆ ಕಾದು ಕಾದು ನೊಂದ ಅಭಿಮಾನಿಯೋರ್ವ ಈ ಪೋಸ್ಟರ್‍ ಕ್ರಿಯೇಟ್ ಮಾಡಿ ಹರಿಬಿಟ್ಟಿದ್ದಾನೆ ಎಂದು ಹೇಳಲಾಗುತ್ತಿದೆ. 2016 ರ ಬಳಿಕ ಯಶ್ ಕೇವಲ 2 ಸಿನೆಮಾಗಳಲ್ಲಿ ಮಾತ್ರ ನಟಿಸಿದ್ದಾರೆ. ಅದು ಕೆಜಿಎಫ್ ಹಾಗೂ ಕೆಜಿಎಫ್-2 ಸಿನೆಮಾ ಮಾತ್ರ. ಬಳಿಕ ಆತ ಯಾವುದೇ ಸಿನೆಮಾ ಘೋಷಣೆ ಮಾಡಿಲ್ಲ. ಅದರಿಂದ ಅಭಿಮಾನಿಗಳು ತುಂಬಾ ಬೇಸರಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

ಇನ್ನೂ ಯಶ್ ರವರು ಮುಂದಿನ ಸಿನೆಮಾದ ಬಗ್ಗೆ ಅನೇಕ ಸುದ್ದಿಗಳು ಸಹ ಕೇಳಿಬರುತ್ತಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಮಾತ್ರ ಇಲ್ಲ. ಕೆಲವು ದಿನಗಳ ಹಿಂದೆಯಷ್ಟೆ ಯಶ್ ಮಲೇಷಿಯಾ ಗೆ ಭೇಟಿ ನೀಡಿದ್ದ ಸಮಯದಲ್ಲಿ ಸಹ ಒಳ್ಳೆಯ ಸಿನೆಮಾ ಮಾಡುತ್ತಿದ್ದೇನೆ. ಶೀಘ್ರದಲ್ಲೇ ಅಪ್ಡೇಟ್ ನಿಡುವುದಾಗಿ ತಿಳಿಸಿದ್ದರು. ಮೂಲಗಳ ಪ್ರಕಾರ ಯಶ್ ಮಹಿಳಾ ನಿರ್ದೇಶಕಿಯೊಬ್ಬರ ನಿರ್ದೇಶನದಲ್ಲಿ ಸಿನೆಮಾ ಮಾಡಲಿದ್ದಾರೆ ಎಂದೂ ಸಹ ಹೇಳಲಾಗುತ್ತಿದೆ.