75 ವರ್ಷದ ವೃದ್ದ ಮಾವನ ಗುಪ್ತಾಂಗ ಕತ್ತರಿಸಿ, ಕೊಂದ ಸೊಸೆ, ಕಾರಣ ಕೇಳಿದ್ರೆ ನೀವು ಶಾಕ್ ಆಗೋದು ಖಚಿತ….!

Follow Us :

ಸಮಾಜದಲ್ಲಿ ಹಣಕ್ಕಾಗಿ ಅನೇಕ ಗಲಾಟೆಗಳು, ಕೊಲೆಗಳಂತಹ ಪ್ರಕರಣಗಳನ್ನು ಕಂಡಿದ್ದೇವೆ. ಅಂತಹುದೇ ಪ್ರಕರಣವೊಂದು ರಾಜಸ್ಥಾನದಲ್ಲಿ ನಡೆದಿದೆ. ವಿದೇಶಕ್ಕೆ ಹೋಗಲು ಹಣ ನೀಡಿಲ್ಲವೆಂದು ಸೊಸೆ ತನ್ನ 75 ವರ್ಷದ ವೃದ್ದ ಮಾವನ ಗುಪ್ತಾಂಗ ಕತ್ತಿರಿಸಿ ಕೊಲೆ ಮಾಡಿರುವ ಘಟನೆ ನಡೆದಿದೆ.

ಗುಜರಾತ್ ನ ಖೇಡಾ ಜಿಲ್ಲೆಯಲ್ಲಿ ಸೊಸೆ ತನ್ನ ಮಾವನ ಗುಪ್ತಾಂಗ ಕತ್ತರಿಸಿ, ಗಟ್ಟಿಯಾದ ವಸ್ತುವಿನಿಂದ ತಲೆಗೆ ಹೊಡೆದು ಕೊಲೆ ಮಾಡಿದ್ದಾಳೆ. ಮೊದಲಿಗೆ ಗಟ್ಟಿಯಾದ ವಸ್ತುವಿನಿಂದ 75 ವರ್ಷದ ಮಾವನ ತಲೆಗೆ ಹೊಡೆದು, ಬಳಿಕ ಆತನ ಗುಪ್ತಾಂಗ ಕತ್ತರಿಸಿ ವಿಕೃತಿ ಮೆರೆದಿದ್ದಾಳೆ. ಇನ್ನೂ ಈ ಕೃತ್ಯವೆಸಗಲು ಆಕೆ ಒಂದು ಕಥೆಯನ್ನು ಸಹ ಹೇಳಿದ್ದು, ಕಥೆ ಕೇಳಿದ ಪೊಲೀಸರು ಬೆಚ್ಚಿ ಬಿದ್ದಿದ್ದಾರೆ. ತನ್ನ ಮಾವನೇ ಆಕೆಯೊಂದಿಗೆ ದೈಹಿಕ ಸಂಬಂಧ ಹೊಂದಿದ್ದಾಗಿ, ಪ್ರತಿ ಬಾರಿ ದೈಹಿಕ ಸಂಪರ್ಕ ಹೊಂದಿದಾಗ ತನ್ನ ಮಾವ ಹಣ ನೀಡುತ್ತಿದ್ದ. ಜೊತೆಗೆ ಆಕೆಗೆ ಫೇಸ್ ಬುಕ್ ನಲ್ಲಿ ಪುರುಷನೊಂದಿಗೆ ಸ್ನೇಹ ಬೆಳೆಸಿದ್ದು, ಆತನೊಂದಿಗೆ ವಿದೇಶಕ್ಕೆ ಹೋಗಲು ಬಯಸಿದ್ದಳಂತೆ. ವಿದೇಶಕ್ಕೆ ಹೋಗಲು ಆರೋಪಿ ತನ್ನ ಮಾವನ ಬಳಿ ಹಣ ಕೇಳಿದ್ದಾಳೆ. ಆದರೆ ವೃದ್ದ  ಹಣ ಕೊಡಲು ನಿರಾಕರಿಸದ್ದ ಅದರಿಂದ ಕೋಪಗೊಂಡು ಆತನನ್ನು ಕೊಲೆ ಮಾಡಿದ್ದಾಗಿ ಆರೋಪಿ ಮಹಿಳೆ ಪೊಲೀಸರಿಗೆ ತಿಳಿಸಿದ್ದಾರೆ ಎಂದು ಹೇಳಲಾಗಿದೆ.

ಇನ್ನೂ ಮೃತ ದುರ್ದೈವಿ ಜಗದೀಶ್ ಶರ್ಮಾ (75 ವರ್ಷ) ಮೂರು ದಿನಗಳಿಂದ ನಾಪತ್ತೆಯಾಗಿದ್ದರಿಂದ ಆತಂಕಗೊಂಡ ಮೃತನ ಮನೆಯವರು ಎಲ್ಲಾ ಕಡೆ ಹುಡುಕಾಟ ನಡೆಸಿದ್ದಾರೆ. ಕೆಲವರು ಸಂಬಂಧಿಕರ ಮನೆಗಳೆಲ್ಲಾ ಹುಡುಕಾಟ ನಡೆಸಿದ್ದಾರೆ. ಬಳಿಕ ಬೀಗ ಹಾಕಿದ್ದ ಜಗದೀಶ್ ಶರ್ಮಾ ಮನೆಗೆ ಹೋಗಿ ನೋಡಿದಾಗ ಆತನ ಮೃತ ದೇಹ ವಿವಸ್ತ್ರವಾಗಿ ಮತ್ತು ಛಿದ್ರಗೊಂಡ ಸ್ಥಿತಿಯಲ್ಲಿ ಕಾಣಿಸಿಕೊಂಡಿದ್ದು, ಕೂಡಲೇ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇನ್ನೂ ಮೃತರ ಹಿರಿಯ ಪುತ್ರನಿಂದ ದೂರು ಸ್ವೀಕರಿಸಿದ ಪೊಲೀಸರು ಸ್ಥಳಕ್ಕೆ ಭೇಟಿ ತನಿಖೆ ಕೈಗೊಂಡಿದ್ದಾರೆ. ಮೃತರ ದೇಹವನ್ನು ಪೋರೆನ್ಸಿಕ್ ಲ್ಯಾಬ್ ಗೆ ಕಳುಹಿಸಿದ್ದು, ಆತ ಕೊಲೆಯಾಗಿದ್ದಾಗಿ ತಿಳಿದುಬಂದಿದೆ. ಇನ್ನೂ ಮೃತ ಜಗದೀಶ್ ರವರ ಕಿರಿಯ ಮಗನ ಪತ್ನಿ ಮನಿಶಾ ಶರ್ಮಾ ಮೇಲೆ ಅನುಮಾನ ವ್ಯಕ್ತವಾಗಿದ್ದು, ಆಕೆಯನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಸತ್ಯಾಂಶ ಹೊರಬಂದಿದೆ.