Film News

ಸ್ಟಾರ್ ಆಂಕರ್ ಅನಸೂಯ ಜಬರ್ದಸ್ತ್ ಶೋ ಬಿಟ್ಟಿದ್ದು ಅವರಿಂದಲೇ ಅಂತೆ, ಹೊಸ ಟ್ವಿಸ್ಟ್ ಕೊಟ್ಟ ಬ್ಯೂಟಿ….!

ತೆಲುಗು ಕಿರುತೆರೆಯಲ್ಲಿ ದೊಡ್ಡ ಕ್ರೇಜ್ ಸಂಪಾದಿಸಿ ಆಂಕರ್‍ ಗಳಲ್ಲಿ ಅನಸೂಯ ಭಾರದ್ವಾಜ್ ಗಾಗಿ ಅನೇಕ ಅಭಿಮಾನಿಗಳು ಆಕೆಯ ಶೋ ನೋಡಲು ಕಾಯುತ್ತಿರುತ್ತಾರೆ. ಅನಸೂಯ ಕೆರಿಯರ್‍ ಪ್ರಾರಂಭಿಸಿದಾಗ ಮೊದಲಿಗೆ ಸಾಕ್ಷಿ, ಮಾ ಟಿವಿಗಳಲ್ಲಿ ಕೆಲಸ ಮಾಡಿದ್ದರು. ಬಳಿಕ ಆಕೆಗೆ ಪುಲ್ ಹೈಪ್ ಹಾಗೂ ಪಾಪ್ಯುಲಾರಿಟಿ ನೀಡಿದ ಶೋ ಎಂದರೇ ಅದು ಜಬರ್ದಸ್ಥ್ ಕಾಮಿಡಿ ಶೋ. ಈ ಶೋ ಮೂಲಕವೇ ಆಕೆ ದೊಡ್ಡ ಕ್ರೇಜ್ ಸಂಪಾದಿಸಿಕೊಂಡು ದೊಡ್ಡ ಅಭಿಮಾನಿ ಬಳಗವನ್ನು ದಕ್ಕಿಸಿಕೊಂಡರು. ಆದರೆ ಆಕೆ ಈ ಶೋ ನಿಂದ ಹೊರಬಂದಿದ್ದಾರೆ. ಇದೀಗ ಆಕೆ ಯಾವ ಕಾರಣದಿಂದ ಶೋನಿಂದ ಹೊರಬಂದರು ಎಂಬ ವಿಚಾರವೊಂದನ್ನು ಹೊರಹಾಕಿದ್ದಾರೆ ಎನ್ನಲಾಗುತ್ತಿದೆ.

ಜಬರ್ದಸ್ತ್ ಮೂಲಕ ಪರಿಚಯವಾದ ಅನೇಕ ಕಲಾವಿದರು ಈಗಾಗಲೇ ಸಿನೆಮಾಗಳಲ್ಲಿ ಅವಕಾಶಗಳನ್ನು ಗಿಟ್ಟಿಸಿಕೊಂಡು ಬ್ಯುಸಿಯಾಗಿದ್ದಾರೆ. ಈ ಶೋ ಮೂಲಕ ಫೇಂ ಸಂಪಾದಿಸಿಕೊಂಡ ಅನಸೂಯ, ರಶ್ಮಿ ಸಹ ಸಿನೆಮಾಗಳಲ್ಲಿ ಅವಕಾಶಗಳನ್ನು ಗಿಟ್ಟಿಸಿಕೊಳ್ಳುತ್ತಾ ಸಾಗುತ್ತಿದ್ದಾರೆ. ಇನ್ನೂ ಕೆಲವು ತಿಂಗಳುಗಳ ಹಿಂದೆಯಷ್ಟೆ ಅನಸೂಯ ಜಬರ್ದಸ್ತ್ ಶೋನಿಂದ ಹೊರಬಂದರು. ಈ ಶೋನಿಂದ ಹೊರಬಂದ ಬಳಿಕ ಆಕೆ ಶೋ ಬಗ್ಗೆ ಕೆಲವೊಂದು ನೆಗೆಟೀವ್ ಕಾಮೆಂಟ್ ಗಳನ್ನು ಹಂಚಿಕೊಂಡಿದ್ದರು. ಜಬರ್ದಸ್ತ್ ಶೋನಲ್ಲಿನ ಕೆಲವೊಂದು ಸ್ಕಿಟ್ ಗಳಲ್ಲಿ ಬಾಡಿ ಶೇಮಿಂಗ್ ಮಾಡುತ್ತಿದ್ದರು ಈ ಕಾರಣದಿಂದಲೇ ಜಬರ್ದಸ್ತ್ ಶೋ ಬಿಟ್ಟೆ ಎಂದು ಹೇಳಿದ್ದರು. ಇದೀಗ ಅನಸೂಯ ಆ ಇಬ್ಬರ ಕಾರಣದಿಂದ ಶೋನಿಂದ ಹೊರಬಂದಿದ್ದಾಗಿ ತಿಳಿಸಿದ್ದಾರೆ. ಸದ್ಯ ಅನಸೂಯ ಜಬರ್ದಸ್ತ್ ಬಿಡಲು ಆ ಇಬ್ಬರು ಕಾರಣ ಎಂದಿದ್ದು ಆ ಇಬ್ಬರು ಬೇರೆ ಯಾರೂ ಅಲ್ಲ ಆಕೆಯ ಇಬ್ಬರೂ ಮಕ್ಕಳಂತೆ.

ಹೌದು ಆಂಕರ್‍ ಅನಸೂಯ ತನ್ನಿಬ್ಬರ ಗಂಡು ಮಕ್ಕಳಿಗೆ ಸಮಸ್ಯೆಯಾಗಬಾರದೆಂದು ಜಬರ್ದಸ್ತ್ ಶೋ ನಿಂದ ಹೊರಬಂದಿದ್ದಾಗಿ ತಿಳಿಸಿದ್ದಾರೆ. ಒಂದು ಕಡೆ ಸಿನೆಮಾಗಳ ಶೂಟಿಂಗ್ಸ್ ಹಾಗೂ ಮತ್ತೊಂದು ಕಡೆ ಜಬರ್ದಸ್ತ್ ಶೋ ಕಾರಣದಿಂದ ಮಕ್ಕಳೊಂದಿಗೆ ಸಮಯ ಕಳೆಯಲು ಆಗುತ್ತಿಲ್ಲ. ಆದ್ದರಿಂದಲೇ ಜಬರ್ದಸ್ತ್ ಶೋಗೆ ಗುಡ್ ಬೈ ಹೇಳಿದ್ದೇನೆ ಎಂದು ಅನಸೂಯ ಹೇಳಿದ್ದಾರೆ. ಇನ್ನೂ ಸುಮಾರು ಎಂಟು ವರ್ಷಗಳ ಕಾಲ ಜಬರ್ದಸ್ತ್ ಶೋ ಆಕೆಗೆ ಒಳ್ಳೆಯ ಕೆರಿಯರ್‍ ನೀಡಿದೆ. ಇದೀಗ ಸಿನೆಮಾಗಳಲ್ಲಿ ಬ್ಯುಸಿಯಾದ ಕಾರಣದಿಂದ ಜಬರ್ದಸ್ತ್ ಶೋ ನಲ್ಲಿ ಭಾಗಿಯಾಗಲು ಆಗುತ್ತಿಲ್ಲ ಎಂದು ಅನಸೂಯ ಹೇಳಿದ್ದಾರೆ.  ಈ ಹಿಂದೆ ಬಾಡಿ ಶೇಮಿಂಗ್ ಕಾರಣದಿಂದ ಜಬರ್ದಸ್ತ್ ಶೋ ನಿಂದ ದೂರವಾದೆ ಎಂದು ಹೇಳಿದ ಈಕೆ ಇದೀಗ ಮಕ್ಕಳ ಕಾರಣದಿಂದ ಶೋಗೆ ದೂರವಾದೆ ಎಂದು ಹೇಳಿರುವುದು ಎಲ್ಲರನ್ನೂ ಶಾಕ್ ಆಗುವಂತೆ ಮಾಡಿದ್ದಾರೆ.

ಸದ್ಯ ಅನಸೂಯ ಸಿನೆಮಾಗಳಲ್ಲಿ ತುಂಬಾನೆ ಬ್ಯುಸಿಯಾಗಿದ್ದಾರೆ. ಪುಷ್ಪಾ ಸಿನೆಮಾದಲ್ಲಿ ಆಕೆ ನೆಗೆಟೀವ್ ರೋಲ್ ಪ್ಲೇ ಮಾಡಿದ್ದು ಆಕೆ ಮತಷ್ಟು ಪಾಪ್ಯುಲರ್‍ ಆಗಿದ್ದಾರೆ. ಇದೀಗ ಪುಷ್ಪಾ-2 ಸಿನೆಮಾದಲ್ಲೂ ಸಹ ಅನಸೂಯ ಪಾತ್ರ ತುಂಬಾ ಪ್ರಮುಖವಾದುದು ಎನ್ನಲಾಗಿದೆ. ಇನ್ನೂ ಅನಸೂಯ ಆಯ್ಕೆ ಮಾಡಿಕೊಳ್ಳುವ ಪ್ರತಿಯೊಂದು ಪಾತ್ರವೂ ತುಂಬಾನೆ ಇಂಟ್ರಸ್ಟಿಂಗ್ ಆಗಿರುತ್ತದೆ ಎಂದು ಹೇಳಲಾಗುತ್ತದೆ.

Most Popular

To Top