Film News

ನಟ ವಿಜಯ್ ದೇವರಕೊಂಡ ಜೊತೆಗಿನ ರೂಮರ್ ಬಗ್ಗೆ ರಿಯಾಕ್ಟ್ ಆದ ರಶ್ಮಿಕಾ ಮಂದಣ್ಣ….!

ಸೌತ್ ಸಿನಿರಂಗದ ಸ್ಟಾರ್‍ ನಟ ವಿಜಯ್ ದೇವರಕೊಂಡ ಹಾಗೂ ಸ್ಟಾರ್‍ ನಟಿ ರಶ್ಮಿಕಾ ಮಂದಣ್ಣ ಡೇಟಿಂಗ್ ನಲ್ಲಿದ್ದಾರೆ ಎಂಬ ಸುದ್ದಿ ಅನೇಕ ದಿನಗಳಿಂದ ಹರಿದಾಡುತ್ತಲೇ ಇದೆ. ಇತ್ತೀಚಿಗೆ ರಶ್ಮಿಕಾ ಹಾಗೂ ವಿಜಯ್ ಇಬ್ಬರೂ ಜಂಟಿಯಾಗಿ ಮಾಲ್ಡೀವ್ಸ್ ಗೆ ಹೋಗಿದ್ದರು ಎಂತಲೂ ಬಳಿಕ ಹೊಸ ವರ್ಷದ ಆಚರಣೆಗಾಗಿ ಮತ್ತೆ ಮಾಲ್ಡೀವ್ಸ್ ಗೆ ಹೋಗಿದ್ದರು ಎಂಬೆಲ್ಲಾ ಸುದ್ದಿಗಳು ಹರಿದಾಡುತ್ತಿದ್ದು, ಇದಕ್ಕೆ ರಶ್ಮಿಕಾ ಇದೀಗ ರಿಯಾಕ್ಟ್ ಆಗಿದ್ದಾರೆ. ನಾವಿಬ್ಬರು ಒಳ್ಳೆಯ ಸ್ನೇಹಿತರಷ್ಟೆ ಎಂದು ರಿಪ್ಲೆ ಕೊಟ್ಟಿದ್ದಾರೆ.

ನಟಿ ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ರವರ ಕಾಂಬಿನೇಷನ್ ನಲ್ಲಿ ಗೀತಾಗೋವಿಂದಂ ಹಾಗೂ ಡಿಯರ್‍ ಕಾಮ್ರೇಡ್ ಎಂಬ ಎರಡು ಸಿನೆಮಾಗಳು ತೆರೆಗೆ ಬಂದವು. ಗೀತಾಗೋವಿಂದಂ ಸಿನೆಮಾ ಬಾಕ್ಸ್ ಆಫೀಸ್ ನಲ್ಲಿ ಒಳ್ಳೆಯ ಕಲೆಕ್ಷನ್ ಮಾಡಿತ್ತು. ಆದರೆ ಡಿಯರ್‍ ಕಾಮ್ರೇಡ್ ಸಿನೆಮಾ ಮಾತ್ರ ಅಂದುಕೊಂಡಷ್ಟು ಸಕ್ಸಸ್ ಆಗಲಿಲ್ಲ. ಇವರಿಬ್ಬರ ಕಾಂಬಿನೇಷನ್ ನಲ್ಲಿ ಬಂದಂತಹ ಈ ಸಿನೆಮಾದಲ್ಲಿ ಅವರ ನಡುವಣ ಕೆಮಿಸ್ಟ್ರಿ ತುಂಭಾನೆ ಚೆನ್ನಾಗಿ ವರ್ಕೌಟ್ ಆಗಿತ್ತು. ಬಳಿಕ ಇಬ್ಬರೂ ದೊಡ್ಡ ದೊಡ್ಡ ಸಿನೆಮಾಗಳಲ್ಲಿ ಬ್ಯುಸಿಯಾದರು. ಇನ್ನೂ ಗೀತಾಗೋವಿಂದಂ ಸಿನೆಮಾದ ಬಳಿಕ ಅವರಿಬ್ಬರೂ ಡೇಟಿಂಗ್ ನಲ್ಲಿದ್ದಾರೆ ಎಂಬ ರೂಮರ್‍ ಶುರುವಾಯಿತು. ಇಂದಿಗೂ ಸಹ ಈ ರೂಮರ್‍ ಹರಿದಾಡುತ್ತಲೇ ಇದೆ. ಆ ಸಮಯದಲ್ಲಿ ವಿಜಯ್ ದೇವರಕೊಂಡ ಆಗಲಿ ಅಥವಾ ರಶ್ಮಿಕಾ ಆಗಲಿ ಈ ಬಗ್ಗೆ ಹೆಚ್ಚು ತಲೆಗೆಡಿಸಿಕೊಳ್ಳಲಿಲ್ಲ.

ಆದರೆ ಹೊಸ ವರ್ಷದ ಆಚರಣೆಗಾಗಿ ಇಬ್ಬರೂ ಜಂಟಿಯಾಗಿ ಸೇರಿದ್ದಾರೆ. ರಶ್ಮಿಕಾ ಮಂದಣ್ಣ ನಿರ್ವಹಿಸಿದ ಲೈವ್ ನಲ್ಲಿ ವಿಜಯ್ ದೇವರಕೊಂಡ ವಾಯ್ಸ್ ಸಹ ಕೇಳಿಸಿದೆ ಎಂಬ ಮಾತುಗಳು ಬಲವಾಗಿ ಕೇಳಿಬಂತು. ಇದೀಗ ರಶ್ಮಿಕಾ ರಿಯಾಕ್ಟ್ ಆಗಿದ್ದಾರೆ. ಸಂದರ್ಶನವೊಂದರಲ್ಲಿ ಈ ಬಗ್ಗೆ ರಶ್ಮಿಕಾ ಮಾತನಾಡಿದ್ದಾರೆ. ನಾವು ನಮಗೆ ಬೇಕಾದುದೇ ಕೇಳಿಸುತ್ತಿದೆ ಎಂದು ಭಾವಿಸುತ್ತಿರುತ್ತೇವೆ.  ಅದೇ ರೀತಿ ಆ ವಿಡಿಯೋದಲ್ಲಿ ವಿಜಯ್ ಧ್ವನಿ ಕೇಳಿಸಿದೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಅಲ್ಲಿ ನನ್ನ ಸ್ನೇಹಿತರೆಲ್ಲರೂ ಮಾತನಾಡುತ್ತಿದ್ದರು. ಇನ್ನೂ ವಿಜಯ್ ನನಗೆ ಒಳ್ಳೆಯ ಸ್ನೇಹಿತ. ಸದ್ಯ ವಿಜಯ್ ತಮ್ಮ ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ನನ್ನ ಕೆಲಸದಲ್ಲಿ ನಾನು ಬ್ಯುಸಿಯಾಗಿದ್ದೇನೆ. ಗೀತಾಗೋವಿಂದಂ ಸಿನೆಮಾದಲ್ಲಿ ನಮ್ಮ ಪಾತ್ರಗಳ ಕಾರಣದಿಂದ ಈ ರೂಮರ್‍ ಹುಟ್ಟಿಕೊಂಡಿರಬಹುದು. ಇನ್ನೂ ನಾನು ವೆಕೇಷನ್ ಗೆ ಯಾವಾಗ ಹೋದರೂ ಸಹ ನನ್ನ ಸ್ನೇಹಿತರೊಂದಿಗೆ ಹೋಗುತ್ತೇನೆ. ನಾವಿಬ್ಬರೂ ಸೆಲೆಬ್ರೆಟಿಗಳಾದ ಕಾರಣದಿಂದ ಇಂತಹ ರೂಮರ್‍ ಗಳು ಹುಟ್ಟಲು ಕಾರಣ.

ಇನ್ನೂ ಅಂತಹ ರೂಮರ್‍ ಗಳು ಕೇಳಿದಾಗ ಕೊಂಚ ನೋವಾಗುತ್ತದೆ. ಜೊತೆಗೆ ನಮ್ಮ ಕುಟುಂಬಗಳಲ್ಲೂ ಸಹ ಕೊಂಚ ಕಿರಿಕಿರಿ ಆಗುತ್ತದೆ ಎಂದು ಹೇಳಿದ್ದಾರೆ. ಇನ್ನೂ ರಶ್ಮಿಕಾ ಇತ್ತೀಚಿಗೆ ವಿವಿಧ ವಿಚಾರಗಳಿಗೆ ಟ್ರೋಲ್ ಆಗುತ್ತಲೇ ಇದ್ದಾರೆ. ಸದ್ಯ ಆಕೆ ಮಿಷನ್ ಮಜ್ನು ಸಿನೆಮಾದ ಮೂಲಕ ಪ್ರೇಕ್ಷಕರ ಮುಂದೆ ಬರಲಿದ್ದಾರೆ. ಪುಷ್ಪಾ-2 ಸಿನೆಮಾದಲ್ಲಿ ಆಕೆ ಬ್ಯುಸಿಯಾಗಲಿದ್ದಾರೆ. ಇನ್ನೂ ವಿಜಯ್ ದೇವರಕೊಂಡ VD12 ಎಂಬ ಟೈಟಲ್ ನಡಿ ಸಿನೆಮಾ ಒಂದು ಘೋಷಣೆಯಾಗಿದೆ. ಖುಷಿ ಸಿನೆಮಾದಲ್ಲೂ ಸಹ ವಿಜಯ್ ದೇವರಕೊಂಡ ಬಣ್ಣ ಹಚ್ಚಿದ್ದು, ಈ ಸಿನೆಮಾ ಸಹ ಶೂಟಿಂಗ್ ಹಂತದಲ್ಲಿದೆ.

Most Popular

To Top