Film News

ಲೆಹಂಗಾ ಧರಿಸಿ ಯಂಗ್ ಬ್ಯೂಟಿಯಂತೆ ಹಾಟ್ ಪೋಸ್ ಕೊಟ್ಟ ಸೀನಿಯರ್ ನಟಿ ತ್ರಿಷಾ, ವೈರಲ್ ಆದ ಪೊಟೋಸ್….!

ಸೌತ್ ಸಿನಿರಂಗದಲ್ಲಿ ಹೆಚ್ಚು ಪರಿಚಯದ ಅವಸರವಿಲ್ಲದ ನಟಿಯರಲ್ಲಿ ತ್ರಿಷಾ ಸಹ ಒಬ್ಬರಾಗಿದ್ದಾರೆ. ಅನೇಕ ವರ್ಷಗಳ ಕಾಲ ದೊಡ್ಡ ಸ್ಟಾರ್‍ ಗಳ ಜೊತೆಗೆ ಸಹ ನಟಿಸುವ ಮೂಲಕ ಸೌತ್ ಸಿನಿರಂಗವನ್ನು ಆಳಿದ್ದರು. ಸದ್ಯ ಆಕೆ ಸೆಕೆಂಡ್ ಇನ್ನಿಂಗ್ಸ್ ನಲ್ಲೂ ಸಹ ಕ್ರೇಜಿ ಆಫರ್‍ ಗಳ ಮೂಲಕ ಸಿನಿರಂಗದಲ್ಲಿ ಮುಂದುವರೆಯುತ್ತಿದ್ದಾರೆ. ಸುಮಾರು ಎರಡು ದಶಕಗಳಿಂದ ಸಿನಿರಂಗದಲ್ಲಿ ನಟಿಯಾಗಿರುವ ತ್ರಿಷಾ ಸೋಷಿಯಲ್ ಮಿಡಿಯಾದಲ್ಲಿ ಆಗಾಗ ಸದ್ದು ಮಾಡುತ್ತಲೇ ಇರುತ್ತಾರೆ. ಇದೀಗ ಆಕೆ ರೆಡ್ ಕಲರ್‍ ಲೆಹಂಗಾದಲ್ಲಿ ಯಂಗ್ ಬ್ಯೂಟಿಯಂತೆ ಹಾಟ್ ಅಂಡ್ ಕ್ಯೂಟ್ ಪೋಸ್ ಕೊಟ್ಟಿದ್ದು, ಪೊಟೋಗಳು ಸಖತ್ ವೈರಲ್ ಆಗುತ್ತಿವೆ.

ಸೌತ್ ನಲ್ಲಿ ಸುಮಾರು ವರ್ಷಗಳ ಬಳಿಕ ತ್ರಿಷಾ ಹವಾ ಮತ್ತೆ ಶುರುವಾಗಿದೆ ಎಂದು ಹೇಳಲಾಗುತ್ತಿದೆ. ಅದಕ್ಕೆ ಆಕೆ ಸೆಕೆಂಡ್ ಇನ್ನಿಂಗ್ಸ್ ನಲ್ಲಿ ಕಂಡು ಕೊಳ್ಳುತ್ತಿರುವ ಸಕ್ಸಸ್ ಎಂದು ಹೇಳಲಾಗುತ್ತಿದೆ. ತಮಿಳಿನಲ್ಲಿ ಕಳೆದ ವರ್ಷ ತೆರೆಕಂಡ ಪೊನ್ನಿಯನ್ ಸೆಲ್ವನ್ ಸಿನೆಮಾ ಭಾರಿ ಸಕ್ಸಸ್ ಕಂಡುಕೊಂಡಿತ್ತು. ಈ ಸಿನೆಮಾ ಬಾಕ್ಸ್ ಆಫೀಸ್ ನಲ್ಲಿ ಒಳ್ಳೆಯ ಕಲೆಕ್ಷನ್ ಸಹ ಮಾಡಿತ್ತು. ದೊಡ್ಡ ದೊಡ್ಡ ಸ್ಟಾರ್‍ ಗಳನ್ನು ಹೊಂದಿದ ಈ ಸಿನೆಮಾ ತಮಿಳಿನ ಬಾಹುಬಲಿ ಸಿನೆಮಾ ಎಂದೇ ಹೇಳಲಾಗಿತ್ತು. ಈ ಸಿನೆಮಾದಲ್ಲಿ ಪ್ರಮುಖ ನಟಿಯರಾಗಿ ತ್ರಿಷಾ, ಐಶ್ವರ್ಯ, ಶೋಭಿತಾ ನಟಿಸಿದ್ದಾರೆ. ವಿಕ್ರಮ್ ಚಿಯಾನ್, ಕಾರ್ತಿ ಹಾಗೂ ಜಯಂ ರವಿ ಪ್ರಮುಖ ನಟರಾಗಿ ನಟಿಸಿದ್ದಾರೆ. ಇನ್ನೂ ತ್ರಿಷಾ ಈ ಸಿನೆಮಾದಲ್ಲಿ ಕುಂದವೈ ಎಂಬ ರಾಣಿಯ ಪಾತ್ರ ಪೋಷಣೆ ಮಾಡಿದ್ದಾರೆ. ಆಕೆಯ ಅಭಿನಯಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಹ ದೊರೆತಿದೆ.

ಇನ್ನೂ ಪೊನ್ನಿಯನ್ ಸೆಲ್ವನ್ ಸಿನೆಮಾದ ಮುಂದುವರೆದ ಭಾಗವಾಗಿ ಪೊನ್ನಿಯನ್ ಸೆಲ್ವನ್-2 ಸಿನೆಮಾ ತೆರೆಗೆ ಬರಲಿದೆ. ಈ ಸಿನೆಮಾ ಬಿಡುಗಡೆಗೆ ಸಿದ್ದವಾಗಿದ್ದು, ಸಿನೆಮಾದ ಪ್ರಮೋಷನ್ ಕೆಲಸಗಳೂ ಸಹ ಭರದಿಂದ ಸಾಗುತ್ತಿವೆ. ಈ ಸಿನೆಮಾ ಇದೇ ಏ.28 ರಂದು ಅದ್ದೂರಿಯಾಗಿ ತೆರೆಗೆ ಬರಲಿದೆ. ಈ ಹಾದಿಯಲ್ಲೇ ಚಿತ್ರತಂಡ ಪ್ರಮೋಷನ್ ನಿಮಿತ್ತ ಅನೇಕ ಸಂದರ್ಶನಗಳನ್ನು ಸಹ ನಡೆಸುತ್ತಿದೆ. ಈ ಹಾದಿಯಲ್ಲೇ ನಟಿ ತ್ರಿಷಾ ಸಹ ಸಂಪ್ರದಾಯಬದ್ದವಾಗಿ ಡ್ರೆಸ್ ಗಳಲ್ಲಿ ಕಾಣಿಸಿಕೊಳ್ಳುತ್ತಾ ಎಲ್ಲರನ್ನೂ ಸೆಳೆಯುತ್ತಿದ್ದಾರೆ. ಜೊತೆಗೆ ಆಕೆ ಸೋಷಿಯಲ್ ಮಿಡಿಯಾದಲ್ಲೂ ಸಹ ಆಕ್ಟೀವ್ ಆಗಿದ್ದು, ಬ್ಯಾಕ್ ಟು ಬ್ಯಾಕ್ ಪೊಟೋಶೂಟ್ಸ್ ಮೂಲಕ ಎಲ್ಲರನ್ನೂ ತನ್ನತ್ತ ಸೆಳೆಯುತ್ತಿರುತ್ತಾರೆ. ಇದೀಗ ಆಕೆ ರೆಡ್ ಕಲರ್‍ ಲೆಹಂಗಾದಲ್ಲಿ ಹದಿಹರೆಯದ ಯುವತಿಯಂತೆ ಮೈಂಡ್ ಬ್ಲಾಕ್ ಪೋಸ್ ಕೊಟ್ಟಿದ್ದಾರೆ. ಸದ್ಯ ಆಕೆಯ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಅದರಲ್ಲೂ ಆಕೆಯ ಮಾದಕ ನೋಟಕ್ಕೆ ಫಿದಾ ಆದ ಅಭಿಮಾನಿಗಳು ವಿವಿಧ ಕಾಮೆಂಟ್ ಗಳ ಮೂಲಕ ಪೊಟೋಗಳನ್ನು ಮತಷ್ಟು ವೈರಲ್ ಮಾಡುತ್ತಿದ್ದಾರೆ.

ಇನ್ನೂ ತ್ರಿಷಾ ಸಿನೆಮಾಗಳ ಜೊತೆಗೆ ಸೋಷಿಯಲ್ ಮಿಡಿಯಾದಲ್ಲೂ ಸಹ ಆಕ್ಟೀವ್ ಆಗಿದ್ದಾರೆ. ಆಕೆ ಹಂಚಿಕೊಳ್ಳುವ ಪೊಟೋಗಳು ಕಡಿಮೆ ಸಮಯದಲ್ಲೇ ಸಖತ್ ವೈರಲ್ ಆಗುತ್ತಿರುತ್ತವೆ. ಸದ್ಯ ತ್ರಿಷಾ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ್ದು, ಒಳ್ಳೆಯ ಸಕ್ಸಸ್ ಕಂಡುಕೊಳ್ಳುತ್ತಿದ್ದಾರೆ. ಇನ್ನೂ ತ್ರಿಷಾ ಅಭಿನಯದ ಪೊನ್ನಿಯನ್ ಸೆಲ್ವನ್-2 ಸಿನೆಮಾ ಕೆಲವೇ ದಿನಗಳಲ್ಲಿ ಬಿಡುಗಡೆಯಾಗಲಿದ್ದು, ಇದರ ಜೊತೆಗೆ ವಿಜಯ್ ದಳಪತಿ ಜೊತೆಗೆ LEO ಎಂಬ ಸಿನೆಮಾದಲ್ಲೂ ಸಹ ನಟಿಸುತ್ತಿದ್ದಾರೆ. ಆಕೆಯ ಕೈಯಲ್ಲಿ ಮತಷ್ಟು ಸಿನೆಮಾಗಳಿವೆ ಎಂದೂ ಸಹ ಹೇಳಲಾಗುತ್ತಿದೆ.

Most Popular

To Top