ಧನುಷ್ ಹಾಗೂ ಐಶ್ವರ್ಯ ವಿಚ್ಚೇದನಕ್ಕೆ ಕಾರಣ ಶ್ರುತಿ ಹಾಸನ್ ಎಂಬ ರೂಮರ್ ಬಗ್ಗೆ ರಿಯಾಕ್ಟ್ ಆದ ಶ್ರುತಿ…..!

Follow Us :

ಕಾಲಿವುಡ್ ನ ಖ್ಯಾತ ನಟ ಸೂಪರ್‍ ಸ್ಟಾರ್‍ ರಜನಿಕಾಂತ್ ರವರ ಪುತ್ರಿ ಐಶ್ವರ್ಯ ಹಾಗೂ ಸ್ಟಾರ್‍ ನಟ ಧನುಷ್ ರವರು ಮದುವೆಯಾಗಿ ಸುಮಾರು 18 ವರ್ಷಗಳ ಕಾಲ ಅನ್ಯೋನ್ಯತೆಯಿಂದ ಜೀವನ ಸಾಗಿಸಿದ್ದರು. ಅಷ್ಟು ವರ್ಷಗಳ ಕಾಲ ಅನ್ಯೋನ್ಯತೆಯಿಂದ ಜೀವನ ಸಾಗಿಸಿದ್ದ ಈ ಜೋಡಿ ಸಡನ್ ಆಗಿ ಅಭಿಮಾನಿಗಳಿಗೆ ವಿಚ್ಚೇದನ ಪಡೆದುಕೊಳ್ಳುವ ಬಗ್ಗೆ ಶಾಕಿಂಗ್ ಸುದ್ದಿಯನ್ನು ಹೊರಹಾಕಿದರು. ಜನವರಿ 2022 ರಲ್ಲಿ ಈ ಜೋಡಿ ವಿಚ್ಚೇದನ ಪಡೆದುಕೊಳ್ಳುವುದಾಗಿ ಘೋಷಣೆ ಮಾಡಿದರು. ಕೆಲವು ದಿನಗಳಿಂದ ಅವರು ಬೇರೆಯಾಗಲು ಶ್ರುತಿ ಹಾಸನ್ ಕಾರಣ ಎಂಬ ರೂಮರ್‍ ಒಂದು ಹರಿದಾಡುತ್ತಿದ್ದು, ಅದಕ್ಕೆ ಶ್ರುತಿಹಾಸನ್ ಸ್ಪಷ್ಟನೆ ನೀಡಿದ್ದಾರೆ.

ಕಾಲಿವುಡ್ ಸಿನಿರಂಗದಲ್ಲಿ ಸ್ಟಾರ್‍ ಜೋಡಿಯಾಗಿದ್ದ ನಟ ಧನುಷ್ ಹಾಗೂ ಐಶ್ವರ್ಯ ರಜನಿಕಾಂತ್ ವಿಚ್ಚೇಧನ ಪಡೆದುಕೊಳ್ಳುವ ಬಗ್ಗೆ ಘೋಷಣೆ ಮಾಡಿದ್ದರು. ಅವರು ವಿಚ್ಚೇದನ ಪಡೆದುಕೊಂಡು ಒಂಭತ್ತು ತಿಂಗಳು ಕಳೆದಿದೆ. ಇನ್ನೂ ಇವರ ವಿಚ್ಚೇದನದ ಸುದ್ದಿ ಹೊರಬರುತ್ತಿದ್ದಂತೆ. ಅವರ ಅಭಿಮಾನಿಗಳು ಸೇರಿದಂತೆ ಸಿನೆಮಾ ಪ್ರಮುಖರೂ ಸಹ ಬೇಸರಗೊಂಡರು. ಇನ್ನೂ ಅವರು ಬೇರೆಯಾಗಲು ಕಾರಣ ಏನು ಎಂಬುದನ್ನು ಇಬ್ಬರಲ್ಲಿ ಯಾರೂ ಸಹ ಬಹಿರಂಗವಾಗಿ ಮಾತನಾಡಿಲ್ಲ. ಈ ಕಾರಣದಿಂದ ಅನೇಕ ರೂಮರ್‍ ಗಳು ಹರಿದಾಡುತ್ತಿವೆ. ಈ ಹಾದಿಯಲ್ಲೇ ಸ್ಟಾರ್‍ ನಟಿ ಶ್ರುತಿ ಹಾಸನ್ ರವರ ಕಾರಣದಿಂದಲೇ ಧನುಷ್ ಹಾಗೂ ಐಶ್ವರ್ಯ ಬೇರೆಯಾಗದರು ಎಂಬ ಗಾಳಿಸುದ್ದಿಯೊಂದು ಹರಿದಾಡಿದೆ. ಈ ವಿಚಾರದ ಬಗ್ಗೆ ಶ್ರುತಿ ಹಾಸನ್ ರಿಯಾಕ್ಟ್ ಆಗಿದ್ದಾರೆ.

ಇನ್ನೂ ನಟಿ ಶ್ರುತಿ ಹಾಸನ್ ಇತ್ತೀಚಿಗೆ ನಡೆದ ಸಂದರ್ಶನದಲ್ಲಿ ಈ ಗಾಳಿ ಸುದ್ದಿಯ ಬಗ್ಗೆ ರಿಯಾಕ್ಟ್ ಆಗಿದ್ದಾರೆ ಎನ್ನಲಾಗುತ್ತಿದೆ. ಧನುಷ್ ನನಗೆ ಒಳ್ಳೆಯ ಹಾಗೂ ಆತ್ಮೀಯ ಸ್ನೇಹಿತ. ನಾನು ಕಷ್ಟದಲ್ಲಿದ್ದಾಗ ಅನೇಕ ಬಾರಿ ನನಗೆ ಸಹಾಯ ಮಾಡಿದ್ದಾರೆ. ನಮ್ಮಿಬ್ಬರ ನಡುವೆ ಗೆಳೆತನ ಬಿಟ್ಟರೇ ಬೇರೆ ಏನು ಇಲ್ಲ. ಐಶ್ವರ್ಯ ಹಾಗೂ ಧನುಷ್ ಬೇರೆಯಾಗಲು ನಾನು ಕಾರಣವಲ್ಲ. ಇಂತಹ ಆಧಾರರಹಿತ ಗಾಳಿಸುದ್ದಿಗಳಿಗೆ ಸ್ಪಷ್ಟನೆಗಳನ್ನು ಕೊಡುತ್ತಾ ಇರಲು ಸಾಧ್ಯವೇ ಇಲ್ಲ. ಅವರ ವಿಚ್ಚೇದನದ ವಿಚಾರದಲ್ಲಿ ನನ್ನ ಹೆಸರನ್ನು ಅನವಶ್ಯಕವಾಗಿ ತಂದಿದ್ದಾರೆ ಎಂದು ತಮ್ಮ ವಿರುದ್ದ ಬಂದಂತಹ ರೂಮರ್‍ ಗೆ ಸ್ಪಷ್ಟನೆ ನೀಡಿದ್ದಾರೆ.

ಇನ್ನೂ ಧನುಷ್ ಹಾಗೂ ಶ್ರುತಿ ಹಾಸನ್ ಕಳೆದ 2012 ರಲ್ಲಿ 3 ಎಂಬ ಸಿನೆಮಾದಲ್ಲಿ ನಟಿಸಿದ್ದರು, ಈ ಸಿನೆಮಾವನ್ನು ಐಶ್ವರ್ಯ ರಜನಿಕಾಂತ್ ರವರೇ ನಿರ್ದೇಶನ ಮಾಡಿದ್ದರು. ಈ ಸಿನೆಮಾದ ಸಮಯದಲ್ಲೇ ಶ್ರುತಿ ಹಾಸನ್ ಹಾಗೂ ಧನುಷ್ ನಡುವೆ ಅಫೈರ್‍ ನಡೆಯುತ್ತಿದೆ ಎಂಬ ರೂಮರ್‍ ಹರಿದಾಡಿತ್ತು. ಆದರೆ ಆ ಸಮಯದಲ್ಲಿ ಶ್ರುತಿ ಹಾಸನ್ ವಿದೇಶಿ ಮೂಲದ ಗೆಳೆಯನೊಂದಿಗೆ ರಿಲೇಷನ್ ಶಿಪ್ ನಲ್ಲಿದ್ದರು. ಇನ್ನೂ ಧನುಷ್ ಹಾಗೂ ಐಶ್ವರ್ಯ ತಮ್ಮ ಸಿನೆಮಾಗಳ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ.