Film News

ಹೊಸ ರೆಕಾರ್ಡ್ ಸೃಷ್ಟಿಸಿದ ಬಾಲಿವುಡ್ ಬಾದ್ ಷಾ ಶಾರುಖ್ ಖಾನ್, 200 ಕೋಟಿ ಸಂಭಾವನೆ ಪಡೆದ ಶಾರುಖ್?

ಬಾಲಿವುಡ್ ಸಿನಿರಂಗದ ಸ್ಟಾರ್‍ ನಟ ಶಾರುಖ್ ಖಾನ್ ಇತ್ತೀಚಿಗಷ್ಟೆ ಪಠಾನ್ ಸಿನೆಮಾದ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ದೇಶದ ಸಿನಿರಂಗದ ಸ್ಟಾರ್‍ ನಟರಲ್ಲಿ ಶಾರುಖ್ ಸಹ ಒಬ್ಬರಾಗಿದ್ದಾರೆ. ಇದೀಗ ಎಲ್ಲಾ ಟಾಪ್ ನಟರನ್ನು ಹಿಂದಿಕ್ಕಿ ದೊಡ್ಡ ರೆಕಾರ್ಡ್ ಸೃಷ್ಟಿಸಿದ್ದಾರಂತೆ. ಅದು ಏನೆಂದರೇ ಪಠಾನ್ ಸಿನೆಮಾಗಾಗಿ ಶಾರುಖ್ ಬರೊಬ್ಬರಿ 200 ಕೋಟಿಯಷ್ಟ ಸಂಭಾವನೆಯನ್ನು ಪಡೆದುಕೊಂಡಿದ್ದಾರೆ ಎನ್ನಲಾಗುತ್ತಿದೆ. ಸದ್ಯ ಈ ಸುದ್ದಿ ಬಾಲಿವುಡ್ ಅಂಗಳದಲ್ಲಿ ಬಿರುಗಾಳಿಯಂತೆ ಹರಿದಾಡುತ್ತಿದೆ.

ಸುಮಾರು ದಿನಗಳಿಂದ ಬಾಲಿವುಡ್ ನಲ್ಲಿ ನಿರ್ಮಾಣಗೊಂಡ ಅನೇಕ ಸ್ಟಾರ್‍ ಗಳ ಸಿನೆಮಾಗಳು ಬಾಕ್ಸ್ ಆಫೀಸ್ ನಲ್ಲಿ ಮಾಕಾಡೆ ಮಲಗಿದ್ದವು. ಸಕ್ಸಸ್ ಕಾಣದ ಬಾಲಿವುಡ್ ರಂಗಕ್ಕೆ ಪಠಾನ್ ಸಿನೆಮಾ ಮತ್ತೆ ಹುರುಪು ತಂದುಕೊಟ್ಟಿತ್ತು. ಈ ಸಿನೆಮಾ ಭಾರಿ ಕಲೆಕ್ಷನ್ ಮಾಡಿ ದೊಡ್ಡ ಮಟ್ಟದಲ್ಲೇ ರೆಕಾರ್ಡ್ ಮಾಡಿತ್ತು. ಈ ಸಿನೆಮಾ ಕಲೆಕ್ಷನ್ ಪರವಾಗಿ ಸುನಾಮಿಯನ್ನೆ ಸೃಷ್ಟಿಸಿದೆ ಎಂದೂ ಸಹ ಹೇಳಲಾಗುತ್ತಿದೆ. ಇನ್ನೂ ಸುಮಾರು ನಾಲ್ಕು ವರ್ಷಗಳ ಬಳಿಕ ಶಾರುಖ್ ರವರಿಗೆ ಪಠಾನ್ ಸಿನೆಮಾ ಸಕ್ಸಸ್ ತಂದುಕೊಟ್ಟಿದೆ. ಬ್ಯಾಕ್ ಟು ಬ್ಯಾಕ್ ಸೋಲನ್ನು ಕಂಡ ಶಾರುಖ್ ಪಠಾನ್ ಸಿನೆಮಾದ ಮೂಲಕ ಒಳ್ಳೆಯ ಹಿಟ್ ಪಡೆದುಕೊಂಡರು. ಇನ್ನೂ ಈ ಸಿನೆಮಾ ಬಾಲಿವುಡ್ ಮಾತ್ರವಲ್ಲದೇ ಇಡೀ ದೇಶವ್ಯಾಪಿ ಸಕ್ಸಸ್ ಕಂಡಿದ್ದು, ಸುಮಾರು ಸಾವಿರ ಕೋಟಿಯವರೆಗೂ ಕಲೆಕ್ಷನ್ ಮಾಡಿದೆ ಎಂದು ಹೇಳಲಾಗುತ್ತಿದೆ. ಆ ಮೂಲಕ ಬಾಲಿವುಡ್ ಮರ್ಯಾದೆಯನ್ನು ಉಳಿಸಿದರು.

ಇನ್ನೂ ಶಾರುಖ್ ಖಾನ್ ಇದೀಗ ಪಠಾನ್ ಸಿನೆಮಾಗಾಗಿ ಪಡೆದುಕೊಂಡ ಸಂಭಾವನೆಯ ಬಗ್ಗೆ ಕೆಲವೊಂದು ಸುದ್ದಿಗಳು ಹರಿದಾಡುತ್ತಿವೆ. ಈ ಸಿನೆಮಾಗಾಗಿ ಶಾರುಖ್ ದೇಶದ ನಟರಲ್ಲೆ ಅತೀ ಹೆಚ್ಚು ಸಂಭಾವನೆ ಪಡೆದುಕೊಂಡ ನಟರಾಗಿ ಖ್ಯಾತಿ ಪಡೆದುಕೊಂಡಿದ್ದಾರಂತೆ. ಮೂಲಗಳ ಪ್ರಕಾರ ಈ ಸಿನೆಮಾಗಾಗಿ ಶಾರುಖ್ ಬರೊಬ್ಬರಿ 200 ಕೋಟಿ ಸಂಭಾವನೆಯನ್ನು ಪಡೆದುಕೊಂಡಿದ್ದಾರಂತೆ. ಆದರೆ ಅದು ಸಂಭಾವನೆಯಲ್ಲ. ಪಠಾನ್ ಸಿನೆಮಾಗಾಗಿ ಶಾರುಖ್ ಯಾವುದೇ ಸಂಭಾವನೆಯನ್ನು ಪಡೆದುಕೊಂಡಿಲ್ಲ. ರಿಲೀಸ್ ಬಳಿಕ ಬಂದಂತಹ ಲಾಭದಲ್ಲಿ ಕೊಂಚ ಭಾಗವನ್ನು ಪಡೆದುಕೊಳ್ಳುವ ಅಗ್ರಿಮೆಂಟ್ ಮಾಡಿಕೊಂಡಿದ್ದರಂತೆ. ಆ ಅಗ್ರಿಮೆಂಟ್ ನಂತೆ ಶಾರುಖ್ ಖಾನ್ ರವರಿಗೆ 200 ಕೋಟಿ ಬಂದಿದೆ. ಭಾರತೀಯ ಸಿನಿರಂಗದಲ್ಲಿ ಅತೀ ಹೆಚ್ಚು ಸಂಭಾವನೆ ಪಡೆದುಕೊಂಡ ನಟರಾಗಿದ್ದಾರೆ ಎಂದು ಬಾಲಿವುಡ್ ಮಿಡಿಯಾದಲ್ಲಿ ಸುದ್ದಿಗಳು ಹರಿದಾಡುತ್ತಿವೆ.

ಇನ್ನೂ ದೇಶದ ಸಿನಿರಂಗದಲ್ಲಿ ರಜನಿಕಾಂತ್, ಪ್ರಭಾಸ್, ಅಕ್ಷಯ್ ಕುಮಾರ್‍ ರಂತಹ ಕೆಲವು ಸ್ಟಾರ್‍ ಗಳು ಮಾತ್ರ ನೂರು ಕೋಟಿಗೂ ಅಧಿಕ ಸಂಭಾವನೆಯನ್ನು ಪಡೆದುಕೊಳ್ಳುತ್ತಿದ್ದಾರೆ. ಇದೀಗ ಶಾರುಖ್ ಎಲ್ಲರನ್ನೂ ಹಿಂದಿಕ್ಕಿ 200 ಕೋಟಿ ಪಡೆದುಕೊಳ್ಳುವ ಮೂಲಕ ನಂಬರ್‍ 1 ಸ್ಥಾನದಲ್ಲಿದ್ದಾರೆ.

Most Popular

To Top