Film News

ಆ ನಟನೊಂದಿಗೆ ನಟಿಸಬೇಕೆಂಬ ಮನದಾಸೆಯನ್ನು ಹೊರ ಹಾಕಿದ ಸ್ಟಾರ್ ನಟಿ ತ್ರಿಷಾ…!

ಸುಮಾರು ಎರಡು ದಶಕಗಳ ಕಾಲದಿಂದ ಕ್ರೇಜ್ ಪಡೆದುಕೊಂಡ ಸೌತ್ ಸಿನಿರಂಗದ ಸ್ಟಾರ್‍ ನಟಿ ತ್ರಿಷಾ, ಇದೀಗ ಸೆಕೆಂಡ್ ಇನ್ನಿಂಗ್ಸ್ ನಲ್ಲೂ ಸಹ ಸಕ್ಸಸ್ ಪುಲ್ ಆಗಿ ಕೆರಿಯರ್‍ ಸಾಗಿಸುತ್ತಿದ್ದಾರೆ. ಸೆಕೆಂಡ್ ಇನ್ನಿಂಗ್ಸ್ ಸಕ್ಸಸ್ ಪುಲ್ ಆಗಿ ಸಾಗಿಸುತ್ತಿರುವ ತ್ರಿಷಾಗೆ ಪೊನ್ನಿಯನ್ ಸೆಲ್ವನ್-1 ಮತಷ್ಟು ಹೈಪ್ ತಂದುಕೊಟ್ಟಿತ್ತು. ಜೊತೆಗೆ ಆಕೆ ಇತ್ತೀಚಿಗೆ ತಮ್ಮ ಸಂಭಾವನೆಯನ್ನು ಸಹ ಏರಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಇದೀಗ ಆಕೆ ಆ ನಟನೊಂದಿಗೆ ನಟಿಸಬೇಕೆಂಬ ಮನದಾಸೆಯನ್ನು ಹೊರಹಾಕಿದ್ದಾರೆ, ಆ ಸ್ಟಾರ್‍ ನಟ ಯಾರು ಎಂಬ ವಿಚಾರಕ್ಕೆ ಬಂದರೇ,

ಟಾಲಿವುಡ್ ನಲ್ಲಿ ಸ್ಟಾರ್‍ ನಟಿಯಾಗಿದ್ದಂತಹ ತ್ರಿಷಾ ಇದೀಗ ತಮಿಳು ಸಿನಿರಂಗಕ್ಕೆ ಸೀಮಿತರಾಗಿದ್ದಾರೆ. ಜೊತೆಗೆ ದುಬಾರಿ ಸಂಭಾವನೆಯನ್ನು ಸಹ ಡಿಮ್ಯಾಂಡ್ ಮಾಡುತ್ತಿದ್ದಾರಂತೆ. ಅದರಲ್ಲೂ ಪೊನ್ನಿಯನ್ ಸೆಲ್ವನ್ -1 ಸಿನೆಮಾದ ಬಳಿಕವಂತೂ ಆಕೆಯ ಕ್ರೇಜ್ ಮತಷ್ಟು ಏರಿತು ಎಂದರೇ ತಪ್ಪಾಗಲಾರದು. ಈ ಹಾದಿಯಲ್ಲೇ ಆಕೆ ತನ್ನ ಸಂಭಾವನೆಯನ್ನೂ ಸಹ ಏರಿಸಿಕೊಂಡಿದ್ದಾರೆ ಎನ್ನಲಾಗು‌ತ್ತಿದೆ. ಸುಮಾರು 5 ವರ್ಷಗಳಿಂದ ಸರಿಯಾದ ಸಕ್ಸಸ್ ಸಿಗದ ತ್ರಿಷಾಗೆ ಪೊನ್ನಿಯನ್ ಸೆಲ್ವನ್ ಸಿನೆಮಾ ಭರ್ಜರಿಯಾಗಿ ಕ್ರೇಜ್ ತಂದುಕೊಟ್ಟಿತ್ತು. ಈ ಸಿನೆಮಾದಲ್ಲಿ ತ್ರಿಷಾ ಕುಂದವೈ ಎಂಬ ರಾಣಿಯ ಪಾತ್ರದಲ್ಲಿ ನಟಿಸಿದ್ದರು. ಈ ಸಿನೆಮಾದಲ್ಲಿ ಆಕೆ ತುಂಬಾನೆ ಅದ್ಬುತವಾಗಿ ನಟಿಸಿದ್ದಾರೆ. ಇದೀಗ ಪೊನ್ನಿಯನ್ ಸೆಲ್ವನ್-2- ಸಿನೆಮಾ ಸಹ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. ಜೊತೆಗೆ ಲೇಡಿ ಓರಿಯೆಂಟೆಂಡ್ ಸಿನೆಮಾದಲ್ಲೂ ಸಹ ತ್ರಿಷಾ ನಟಿಸುತ್ತಿದ್ದಾರೆ.

ನಟಿ ತ್ರಿಷಾ ಅಭಿನಯದ ರಾಂಗಿ ಸಿನೆಮಾ ಕಳೆದ ಡಿ.30 ರಂದು ಬಿಡುಗಡೆಯಾಗಿತ್ತು. ಈ ಸಿನೆಮಾ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದ್ದು, ಈ ಸಕ್ಸಸ್ ಮೀಟ್ ನಲ್ಲಿ ತ್ರಿಷಾ ಕೆಲವೊಂದು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಈ ವೇಳೆ ಮಿಡಿಯಾದೊಂದಿಗೆ ಮಾತನಾಡಿದ ತ್ರಿಷಾ ತನ್ನ ಮನದಾಳದ ಆಸೆಯನ್ನು ಹೇಳಿದ್ದಾರೆ. ತೆಲುಗು, ತಮಿಳಿನಲ್ಲಿ ಬಹುತೇಕ ಎಲ್ಲ ಸ್ಟಾರ್‍ ಗಳ ಜೊತೆ ನಟಿಸಿದ್ದೇನೆ. ಆದರೆ ಒಬ್ಬ ನಟನೊಂದಿಗೆ ಮಾತ್ರ ನಟಿಸಲಿಲ್ಲ. ಅವರೊಂದಿಗೆ ನಟಿಸುವ ಆಸೆ ಸುಮಾರು ದಿನಗಳಿಂದ  ಇದೆ. ಆತ ಬೇರೆ ಯಾರೂ ಅಲ್ಲ ಸೂಪರ್‍ ಸ್ಟಾರ್‍ ರಜನಿಕಾಂತ್. ಕಾಲಿವುಡ್ ನಲ್ಲಿ ಕಮಲ್ ಹಾಸನ್, ಅಜಿತ್, ವಿಜಯ್  ಸೇರಿದಂತೆ ಅನೇಕ ನಟರೊಂದಿಗೆ ನಟಿಸಿರುವ ತ್ರಿಷಾಗೆ ಇದೀಗ ರಜನಿಕಾಂತ್ ರವರ ಜೊತೆ ನಟಿಸುವ ಆಸೆಯಾಗಿದ್ದು, ಆಕೆ ಆಸೆ ಯಾವಾಗ ನೆರವೇರುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ಇನ್ನೂ ತ್ರಿಷಾ ಪೊನ್ನಿಯನ್ ಸೆಲ್ವನ್ ಸಿನೆಮಾದ ಬಗ್ಗೆ ಸಹ ಮಾತನಾಡಿದ್ದಾರೆ. ಮಣಿರತ್ನಂ ಸೇರಿದಂತೆ ಸಿನೆಮಾದಲ್ಲಿನ ಎಲ್ಲರನ್ನೂ ಹೊಗಳಿದ್ದಾರೆ. ಸದ್ಯ ತ್ರಿಷಾ ಪೊನ್ನಿಯನ್ ಸೆಲ್ವನ್ -2, ಸತುರಂಗ ವಟ್ಪೈ 2, ರಾಮ್ ಪಾರ್ಟ್-1, ದಿ ರೋಡ್ ಎಂಬ ಸಿನೆಮಾಗಳಲ್ಲಿ ನಟಿಸುತ್ತಿದ್ದಾರೆ. ಆಕೆ ಕಳೆದ ಡಿ.30 ರಂದು ರಾಂಗಿ ಎಂಬ ಸಿನೆಮಾದ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಈ ಸಿನೆಮಾದ ಪ್ರಮೋಷನ್ ಅಂಗವಾಗಿ ತ್ರಿಷಾ ಬ್ಯಾಕ್ ಟು ಬ್ಯಾಕ್ ಪೊಟೋಶೂಟ್ಸ್ ಗಳನ್ನು ಸಹ ಹಂಚಿಕೊಂಡಿದ್ದರು.

Most Popular

To Top