Film News

ಶೀಘ್ರದಲ್ಲೇ ಸಿನೆಮಾಗಳಲ್ಲಿ ಕಮ್ ಬ್ಯಾಕ್ ಮಾಡಲಿದ್ದಾರೆ ರಾಧಿಕಾ ಪಂಡಿತ್, ಹೊಸ ವರ್ಷಕ್ಕೆ ಗುಡ್ ನ್ಯೂಸ್ ಕೊಟ್ಟ ರಾಧಿಕಾ….!

ಸ್ಯಾಂಡಲ್ ವುಡ್ ನಲ್ಲಿ ಬಹುಬೇಡಿಕೆ ನಟಿಯಾಗಿದ್ದಂತ ರಾಕಿಂಗ್ ಸ್ಟಾರ್‍ ಯಶ್ ಪತ್ನಿ ರಾಧಿಕಾ ಪಂಡಿತ್ ಮದುವೆಯಾದ ಬಳಿಕ ಸಿನೆಮಾಗಳಿಂದ ದೂರ ಉಳಿದಿದ್ದಾರೆ. ಆದರೂ ಸಹ ತಮ್ಮ ಅಭಿಮಾನಿಗಳಿಗಾಗಿ ಸದಾ ಸೋಷಿಯಲ್ ಮಿಡಿಯಾದಲ್ಲಿ ಅಪ್ಡೇಟ್ ಕೊಡುತ್ತಿರುತ್ತಾರೆ. ದೊಡ್ಡ ಮಟ್ಟದಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಫಾಲೋವರ್ಸ್‌ಗಳನ್ನು ಹೊಂದಿದ್ದಾರೆ. ಇದೀಗ ಹೊಸ ವರ್ಷಕ್ಕೆ ರಾಧಿಕಾ ಪಂಡಿತ್ ಸಿನೆಮಾಗಳಲ್ಲಿ ಕಮ್ ಬ್ಯಾಕ್ ಮಾಡುವ ಮೂಲಕ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ.

ನಟಿ ರಾಧಿಕಾ ಗೆ ಮದುವೆಯಾಗುವುದಕ್ಕೂ ಮುಂಚೆ ಅನೇಕ ಸೂಪರ್‍ ಹಿಟ್ ಸಿನೆಮಾಗಳ ಮೂಲಕ ಅಭಿಮಾನಿಗಳಿಗೆ ಹತ್ತಿರವಾಗಿದ್ದರು. ಕಡಿಮೆ ಸಮಯದಲ್ಲೇ ಬಹುಬೇಡಿಕೆ ಸೃಷ್ಟಿಸಿಕೊಂಡರು. ಮೊಗ್ಗಿನ ಸಿನೆಮಾದ ಮೂಲಕ ಅನೇಕ ಯುವಕರ ಕ್ರಷ್ ಆದರು. ಮದುವೆಯಾಗುವುದಕ್ಕೂ ಮುನ್ನಾ ಆಕೆ ಆದಿಲಕ್ಷ್ಮಿ ಪುರಾಣ ಎಂಬ ಸಿನೆಮಾದಲ್ಲಿ ಕಾಣಿಸಿಕೊಂಡಿದ್ದರು. ಮದುವೆಯಾದ ಬಳಿಕ ಪತಿ ಯಶ್, ಮಕ್ಕಳು ಎಂದು ಕುಟುಂಬ ನಿರ್ವಹಣೆಯಲ್ಲಿ ಬ್ಯುಸಿಯಾದರು. ಸಿನೆಮಾಗಳಿಂದ ದೂರವಾದರೂ ಸಹ ಸೋಷಿಯಲ್ ಮಿಡಿಯಾ ಮೂಲಕ ಅಭಿಮಾನಿಗಳಿಗೆ ಹತ್ತಿರವಾಗಿದ್ದರು. ಇದೀಗ ಮತ್ತೆ ಸಿನೆಮಾಗಳಲ್ಲಿ ಕಮ್ ಬ್ಯಾಕ್ ಆಗಲಿದ್ದಾರಂತೆ. ಈಗಾಗಲೇ ತೆರೆಮರೆಯಲ್ಲಿ ಭರ್ಜರಿಯಾಗಿ ಸಹ ತಯಾರಿ ನಡೆಯುತ್ತಿದೆ ಎನ್ನಲಾಗುತ್ತಿದೆ.

ಇನ್ನೂ ನಟಿ ರಾಧಿಕಾ ತುಂಬಾ ಬೇಡಿಕೆಯುಳ್ಳ ನಟಿಯಾಗಿದ್ದರು. ಸಿನೆಮಾಗಳಿಂದ ದೂರವಾದರೂ ಸಹ ಆಕೆಯ ಕ್ರೇಜ್ ಮಾತ್ರ ಕಡಿಮೆಯಾಗಿಲ್ಲ. ಅಷ್ಟೇಅಲ್ಲದೇ ರಾಧಿಕಾ ಇಬ್ಬರು ಮಕ್ಕಳ ತಾಯಿಯಾದರೂ ಸಹ ಗ್ಲಾಮರ್‍ ಮಾತ್ರ ಕಡಿಮೆಯಾಗಿಲ್ಲ. ಜೊತೆಗೆ ಅಭಿಮಾನಿಗಳೂ ಸಹ ಆಕೆಯನ್ನು ದೊಡ್ಡ ಪರದೆಯ ಮೇಲೆ ಕಾಣಲು ಕಾತುರದಿಂದ ಕಾಯುತ್ತಿದ್ದಾರೆ. ಆಕೆಯ ರಿಎಂಟ್ರಿ ಗಾಗಿ ಕರ್ನಾಟಕದಲ್ಲಿನ ಆಕೆಯ ಅಭಿಮಾನಿಗಳು ಕಾಯುತ್ತಿದ್ದಾರೆ. ಈ ಕಾರಣದಿಂದಲೇ ಅಭಿಮಾನಿಗಳ ಕೋರಿಕೆಯಂತೆ ಬಣ್ಣದ ಲೋಕಕ್ಕೆ ಎಂಟ್ರಿ ಕೊಡಲು ಸಿದ್ದವಾಗಿದ್ದಾರಂತೆ. ಆಕೆಗಾಗಿ ಒಂದು ಪವರ್‍ ಪುಲ್ ಕಥೆಯನ್ನು ಸಹ ಸಿದ್ದ ಮಾಡಲಾಗುತ್ತಿದ್ದೆಯಂತೆ. ಇನ್ನೂ ಈ ಸಿನೆಮಾ ಯಾವ ರೀತಿಯಲ್ಲಿರಬಹುದು, ಲೇಡಿ ಓರಿಯೆಂಟೆಡ್ ಸಿನೆಮಾ ಮೂಲಕ ಬರಲಿದ್ದಾರಾ ಎಂಬ ಕುತೂಹಲ ಎಲ್ಲರಲ್ಲೂ ಮೂಡಿದೆ.

ಇನ್ನೂ ರಾಧಿಕಾ ಸಿನೆಮಾಗಳಲ್ಲಿ ರೀ ಎಂಟ್ರಿ ಕೊಡುವ ಬಗ್ಗೆ ಸುದ್ದಿ ಹರಿದಾಡಲು ಶುರುವಾದ ಕೂಡಲೇ ರಾಧಿಕಾ ಅಭಿಮಾನಿಗಳು ಪುಲ್ ಖುಷಿಯಾಗಿದ್ದಾರೆ. ಆಕೆಯ ಶೀಘ್ರವಾಗಿ ದೊಡ್ಡ ಪರದೆಯ ಮೇಲೆ ಕಾಣಲು ಕಾತುರದಿಂದ ಕಾಯುತ್ತಿದ್ದಾರೆ. ಸಿನೆಮಾದ ಬಗ್ಗೆ ಅಧಿಕೃತವಾಗಿ ಘೋಷಣೆ ಯಾವಾಗ ಎಂದು ಕಾಯುತ್ತಿದ್ದಾರೆ.

Most Popular

To Top