Film News

ಆ ಕೆಲಸ ಮಾಡು ಸಾಕು ದುಬಾರಿ ಬೆಲೆಯ ದೊಡ್ಡ ಮನೆ ಕೊಡುತ್ತೇನೆ ಎಂದು ನೋರಾ ಫತೇಹಿಗೆ ಆಫರ್ ಕೊಟ್ಟಿದ್ದರಂತೆ…!

ಸಿನಿರಂಗದಲ್ಲಿ ಕೆಲವೊಂದು ವಿಚಾರಗಳು, ಪ್ರಕರಣಗಳು ಎಲ್ಲರನ್ನೂ ಶಾಕ್ ಆಗುವಂತೆ ಮಾಡುತ್ತಿರುತ್ತವೆ. ಈ ಹಾದಿಯಲ್ಲೇ ಸುಖೇಶ್ ಚಂದ್ರಶೇಖರ್‍ ಎಂಬಾತ ಮನಿ ಲ್ಯಾಂಡರಿಂಗ್ ಕೇಸ್ ನಲ್ಲಿ ಅರೆಸ್ಟ್ ಆಗಿದ್ದು, ಈ ಕೇಸ್ ನಲ್ಲಿ ಬಾಲಿವುಡ್ ನಟಿಯರ ಹೆಸರುಗಳು ಕೇಳಿಬಂದಿವೆ. ಬಾಲಿವುಡ್ ನ ಖ್ಯಾತ ನಟಿಯರಾದ ಜಾಕ್ವೆಲಿನ್ ಫರ್ನಾಂಡೀಸ್ ಹಾಗೂ ನೋರಾ ಫತೇಹಿ ಹೆಸರುಗಳು ಸಹ ಈ ಪ್ರಕರಣದಲ್ಲಿ ಪ್ರಸ್ತಾಪಿಸಿದ್ದು, ಈಗಾಗಲೇ ಈ ಇಬ್ಬರೂ ನಟಿಯರು ಇಡಿ ಅಧಿಕಾರಿಗಳ ವಿಚಾರಣೆಗೂ ಸಹ ಹಾಜರಾಗಿದ್ದಾರೆ. ಈ ವಿಚಾರಣೆಯ ವೇಳೆ ಅವರು ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ ಎನ್ನಲಾಗಿದೆ.

ಮನಿ ಲಾಂಡರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇ.ಡಿ ಅಧಿಕಾರಿಗಳು ನಟಿ ಜಾಕ್ವೆಲಿನ್ ಫರ್ನಾಂಡೀಸ್ ರವರನ್ನು ವಿಚಾರಣೆ ನಡೆಸಿದ್ದರು. ಇದೀಗ ನೋರಾ ಫತೇಹಿಯನ್ನು ಸಹ ವಿಚಾರಣೆಗೆ ಕರೆದಿದ್ದು, ಆಕೆ ವಿಚಾರಣೆಗೆ ಹಾಜರಾಗಿದ್ದಾರೆ. ಈ ವೇಳೆ ಆಕೆ ಕೆಲವೊಂದು ಹೇಳಿಕೆಗಳನ್ನು ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನೂ ವಿಚಾರಣೆಯ ಸಮಯದಲ್ಲಿ ನೋರಾ ಅನೇಕ ವಿಚಾರಗಳನ್ನು ತಿಳಿಸಿದ್ದು, ಆಕೆಗೆ ಸುಖೇಶ್ ಚಂದ್ರಶೇಖರ್‍ ಯಾರು ಎಂಬುದು ತಿಳಿದಿಲ್ಲ ಎಂದು ಹೇಳಿದ್ದಾರಂತೆ. ಆಕೆಯ ಸ್ನೇಹಿತೆಯೊಬ್ಬರ ಮೂಲಕ ಸುಖೇಶ್ ಯಾರು ಎಂಬುದರ ಬಗ್ಗೆ ನೋರಾಗೆ ತಿಳಿದಿದ್ದಾರಂತೆ. ಇನ್ನೂ ಇತ್ತೀಚಿಗಷ್ಟೆ ಜಾಕ್ವೆಲಿನ್ ಫರ್ನಾಂಡೀಸ್ ಸಹ ಸುಖೇಶ್ ನಿಂದ ಆಕೆಯ ಜೀವನ ನಾಶವಾಯಿತು ಎಂದು ಹೇಳಿಕೆ ನೀಡಿದ್ದರು.

ಇನ್ನೂ ನೋರಾ ಫತೇಹಿ ಇ.ಡಿ. ವಿಚಾರಣೆಯಲ್ಲಿ ಹೇಳಿದ್ದಾರೆ ಎನ್ನಲಾದ ಕೆಲವೊಂದು ವಿಚಾರಗಳು ಇದೀಗ ವೈರಲ್ ಆಗುತ್ತಿವೆ. ನಿಜಕ್ಕೂ ಸುಖೇಷ್ ಚಂದ್ರಶೇಖರ್‍ ಯಾರು ಎಂದು ನನಗೆ ತಿಳಿದಿಲ್ಲ. ನಾನು ಆತನನ್ನು ನೇರವಾಗಿ ಇ.ಡಿ. ಕಚೇರಿಯಲ್ಲೇ ನೋಡಿದ್ದಾಗಿ, ಆತ ಎಸ್.ಎಲ್ ಕಾರ್ಪೋರೇಷನ್ ನಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಕೊಂಡಿದ್ದೆ. ಆತ ನನ್ನ ಸ್ನೇಹಿತರಾದ ಪಿಂಕ ಇರಾನಿ ಮೂಲಕ ಸುಖೇಶ್ ಬಗ್ಗೆ ತಿಳಿದಿದೆ. ಸುಖೇಶ್ ಚಂದ್ರಶೇಖರ್‍ ಗೆ ನಾನು ಗರ್ಲ್ ಫ್ರೆಂಡ್ ಆಗಿ ಇದ್ದರೇ ಒಂದು ದೊಡ್ಡ ಮನೆಯನ್ನು ಗಿಫ್ಟ್ ಆಗಿ ನೀಡುವುದಾಗಿ ತಮ್ಮ ಸ್ನೇಹಿತರ ಮೂಲಕ ಪ್ರಸ್ತಾವನೆಯನ್ನು ಸಲ್ಲಿಸಿದ್ದರು ಎಂದಿದ್ದಾರೆ.

ಇನ್ನೂ ನೋರಾ ಫತೇಹಿ ಹಂಚಿಕೊಂಡ ಈ ವಿಚಾರಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ. ಇನ್ನೂ ಐಟಂ ಸಾಂಗ್ಸ್ ಮೂಲಕ ಖ್ಯಾತಿ ಪಡೆದುಕೊಂಡ ನೋರಾ ಫತೇಹಿ ಜೂನಿಯರ್‍ ಎನ್.ಟಿ.ಆರ್‍ ರವರ ಟೆಂಪರ್‍ ಸಿನೆಮಾದಲ್ಲಿ, ಪ್ರಭಾಸ್ ಅಭಿನಯದ ಬಾಹುಬಲಿ ಸಿನೆಮಾದಲ್ಲೂ ಸಹ ಐಟಂ ಸಾಂಗ್ ಮೂಲಕ ಆಕೆ ಖ್ಯಾತಿ ಪಡೆದುಕೊಂಡಿದ್ದರು.

Most Popular

To Top